ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆ : 61302 ಕಾರ್ಡುಗಳಿಗೆ ಪಡಿತರ ವಿತರಣೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಏಪ್ರಿಲ್ 2ರಂದು ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ 61302 ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ.

ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ಒಟ್ಟಿಗೇ ನೀಡಲಾಗುತ್ತಿದೆ.
ಬಿಪಿಎಲ್ ಕಾಡ್೯ ನವರಿಗೆ ಪ್ರತೀ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ, ಪ್ರತೀ ಅಂತ್ಯೋದಯ ಕಾಡ್೯ಗೆ 70 ಕೆ.ಜಿ. ಹಾಗೂ ಪ್ರತೀ ಏಪಿಎಲ್ ಕಾಡ್೯ಗೆ 20 ಕೆ.ಜಿ.ಯಂತೆ ಅಕ್ಕಿ ವಿತರಿಸಲಾಗುತ್ತಿದೆ.

ಏಪ್ರಿಲ್ 2 ಮತ್ತು 3 ರಂದು ದ.ಕ. ಜಿಲ್ಲೆಯಲ್ಲಿ 61302 ಕಾಡ್೯ಗಳಿಗೆ ಸುಮಾರು 27000 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಪಾಡಲಾಗುತ್ತಿ ದೆ ಎಂದು ಆಹಾರ ಇಲಾಖೆ ಜಂಟೀ ನಿರ್ದೇಶಕರು ತಿಳಿಸಿದ್ದಾರೆ.

Comments are closed.