ಕುಂದಾಪುರ: ಕುಂದಾಪುರದ ಔಷಧಿ ಅಂಗಡಿಯೊಂದರಲ್ಲಿ ಅಧಿಕ ನಿಗದಿಗಿಂತ ಅಧಿಕ ದರದಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಕೇಸು ದಾಖಲಿಸಿ,5 ಸಾವಿರ ರೂ. ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ.

ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ, ನಿರೀಕ್ಷಕರಾದ ಗ್ಯಾನಾ ನಾಯಕ್, ಬಿ.ಎಸ್. ಮಂಜಪ್ಪ, ಸ್ಮಿತಾ ಹಾಗೂ ಸಿಬಂದಿ ಸಂತೋಷ್ ಅವರ ತಂಡವು ಕುಂದಾಪುರದ ಔಷಧಿ ಅಂಗಡಿಯೊಂದಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಕೇಂದ್ರ ಸರಕಾರದ ಆದೇಶದನ್ವಯ 16ರೂ. ಬೆಲೆಯ ಮಾಸ್ಕ್ ಅನ್ನು 20 ರೂ. ಗೆ ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಡಿಸಿಯವರು ಈ ಹಿಂದೆಯೇ ಈ ಬಗ್ಗೆ ಆದೇಶ ಹೊರಡಿಸಿದ್ದು, ಅದರಂತೆ ಕೇಸು ದಾಖಲಿಸಿ, ದಂಡ ವಿಧಿಸಲಾಗಿದೆ.
ಇದೇ ವೇಳೆ ತರಕಾರಿ, ಹಣ್ಣಿನ ಅಂಗಡಿಗಳ ಮುಂದೆ ದರ ಪಟ್ಟಿ ಪ್ರಕಟಿಸುವಂತೆ ಎಲ್ಲ ವರ್ತಕರಿಗೂ ಇಲಾಖೆಯ ವತಿಯಿಂದ ಸೂಚನೆ ನೀಡಲಾಯಿತು.
Comments are closed.