ಆರೋಗ್ಯ

ಕೊರೋನಾ ಭೀತಿ- ಲಾಕ್ ಡೌನ್ ಆದೇಶ ಉಲ್ಲಂಘಿಸಿದಾತನ ಮೇಲೆ ಕಾಪು ಠಾಣೆಯಲ್ಲಿ ಎಫ್ಐಆರ್

Pinterest LinkedIn Tumblr

ಉಡುಪಿ: ಕೋವಿಡ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದಿಂದ ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಜನರು ತಿರುಗಾಡುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣವೊಂದು ದಾಖಲಾಗಿದೆ‌.

ಜನರ ಬಗ್ಗೆ ನಿಗಾ ಇರಿಸಲು ಮತ್ತು ಕ್ರಮ ಕೈಗೊಳ್ಳಲುವ ಉದ್ದೇಶದಿಂದ ಕಾಪು ಪಿಎಸ್ಐ ಐ.ಆರ್. ಗಡ್ಡೇಕರ್ ಅವರು ಹೊಯ್ಸಳ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲಿ ಕಾಪು ಕಡೆಯಿಂದ ಆರೋಪಿ ಮಹಮ್ಮದ್ ಮುಸ್ತಾಕ್ (32) ಎಂಬಾತ ಕಾರಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಲ್ಲಿ ಮಹಮ್ಮದ್ ಮುಸ್ತಾಕ್ ಕಾರಿನಿಂದ ಇಳಿದು ಹೊರಗೆ ಬರುವಾಗ ಯಾವುದೇ ರೀತಿಯ ಮಾಸ್ಕ್ ಧರಿಸದೇ ಇದ್ದು ಮಹಮ್ಮದ್ ಮುಸ್ತಾಕ್ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಕಾರಣವಿಲ್ಲದೇ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸಹ ಯಾವುದೇ ರೀತಿಯ ಮಾಸ್ಕ ಧರಿಸದೇ ನಿರ್ಲಕ್ಷತನವನ್ನು ತೋರಿಸಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರ ಬಗ್ಗೆ ಪೊಲೀಸರು ವಿಚಾರಿಸಿದಲ್ಲಿ ಸಮರ್ಪಕವಾದ ಉತ್ತರ ನೀಡದಿರುವುದು ಮಾತ್ರವಲ್ಲದೇ ಈ ರೀತಿ ಸಂಚರಿಸುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾದ್ಯತೆ ಇದೆ ಎಂದು ತಿಳಿಸಿದರೂ ಸಹ ಮಹಮ್ಮದ್ ಮುಸ್ತಾಕ್ ಪ್ರಯಾಣ ಮುಂದುವರಿಸಲು ಯತ್ನಿಸಿದ್ದ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ 279 ,269 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.