ಕರಾವಳಿ

ಕೆ.ಆರ್.ಐ.ಡಿ.ಎಲ್ ಹೆಸರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ: ಉಡುಪಿ ಜಿಲ್ಲಾಧಿಕಾರಿಗೆ ಮನವಿ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆಯ ಮೂಲಕ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸಲು ಕುಂದಾಪುರ ತಾಲೂಕು ಕಚೇರಿಗೆ ಗುರುವಾರ ಆಗಮಿಸಿದ್ದ ವೇಳೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಕಾವಡಿ ನಿವಾಸಿ ಗಣೇಶ್ ಶೆಟ್ಟಿ ಎನ್ನುವರು ಮನವಿ‌ ಸಲ್ಲಿಸಿದ್ದಾರೆ.

ಕಳೆದ ಎರಡೂವರೆ ವರ್ಷದಿಂದ ಕೆ.ಆರ್.ಡಿ.ಎಲ್ ಇಲಾಖೆಯಲ್ಲಿ ಯಾವುದೇ ದೊಡ್ಡಮಟ್ಟದ ಕಾಮಗಾರಿ ನಡೆಯದೇ ಇದ್ದರು ಕೆ.ಆರ್.ಐ.ಡಿ.ಎಲ್ ಮೂಲಕ ಜಿಲ್ಲೆಯಲ್ಲಿ 5 ಮರಳು ದಕ್ಕೆಗೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಬೇಡಿಕೆಗೆ ಇಟ್ಟಿದ್ದು ಮರಳು ಸಾಗಟವಾಗುತ್ತಿದ್ದು ಒಂದು ಲೋಡ್ ಮರಳು ಸಹ ಸರಕಾರದ ಕಾಮಗಾರಿಗೆ ಉಪಯೋಗಿಸದೆ ಮರಳು ಮಾಫಿಯಾದವರು (ಗುತ್ತಿಗೆದಾರರು) ಸ್ವಂತ ಲಾಭಕ್ಕಾಗಿ ಹೊರ ಜಿಲ್ಲೆಗೆ ಹಾಗೂ ಅತೀ ಹೆಚ್ಚು ದರಕ್ಕೆ ಬಡವರಿಗೆ ನೀಡುತ್ತಿದ್ದು ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಸಂಪಾದಿಸುತ್ತಿದ್ದಾರೆ. ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನಲ್ಲಿ ಕೆ.ಆರ್.ಐ.ಡಿ.ಎಲ್ ಹೆಸರಿನಲ್ಲಿ ಅಕ್ರಮ ಮರಳು ಗುತ್ತಿಗೆದಾರರು ನಡೆಸುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸಲು ಸೂಚನೆ ನೀಡಬೇಕಾಗಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

Comments are closed.