ಆರೋಗ್ಯ

ಫಾಸ್ಟ್ ಫುಡ್ ಬಗ್ಗೆ ಇಲ್ಲಿದೆ ಕೆಲವು ಶಾಕಿಂಗ್ ಸತ್ಯಗಳು

Pinterest LinkedIn Tumblr

ಈಗಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ವಯಸ್ಸಾದವರ ವರೆಗೂ ಫಾಸ್ಟ್ ಫುಡ್ ಗೆ ದಾಸರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಹೋಟೆಲ್ ಮತ್ತು ರಸ್ತೆಯ ಬದಿಗಳಲ್ಲಿ ಸಿಗುವ ಫಾಸ್ಟ್ ಫುಡ್ ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ ಮತ್ತು ಕಡಿಮೆ ತಿಂದರು ಹೊಟ್ಟೆ ತುಂಬುತ್ತದೆ ಅನ್ನುವ ಕಾರಣಕ್ಕೆ ಜನರು ಹೆಚ್ಚಾಗಿ ಈ ಫಾಸ್ಟ್ ಫುಡ್ ಗಳನ್ನ ತಿನ್ನುತ್ತಿದ್ದಾರೆ. ಇನ್ನು ಫಾಸ್ಟ್ ಫುಡ್ ತಿನ್ನುವುದರಿಂದ ನಮ್ಮ ದೇಹಕ್ಕೆ ಕೆಲವು ತೊಂದರೆಗಳು ಆಗುತ್ತದೆ ಎಂದು ಕೆಲವರಿಗೆ ಗೊತ್ತಿದ್ದರೂ ಕೂಡ ಫಾಸ್ಟ್ ಫುಡ್ ತಿನ್ನುವುದನ್ನ ಮಾತ್ರ ಸ್ವಲ್ಪಾನು ಕಡಿಮೆ ಮಾಡುತ್ತಿಲ್ಲ ಅನ್ನುವುದು ಬೇಸರದ ಸಂಗತಿ ಆಗಿದೆ. ಸ್ನೇಹಿತರೆ ನಾವು ಇಂದು ನಿಮಗೆ ಒಬ್ಬ ಫಾಸ್ಟ್ ಫುಡ್ ಅಂಗಡಿಯ ಮಾಲೀಕ ಫಾಸ್ಟ್ ಫುಡ್ ಬಗ್ಗೆ ಹೇಳಿದ ಕೆಲವು ಶಾಕಿಂಗ್ ಸತ್ಯಗಳನ್ನ ಹೇಳುತ್ತೇವೆ ಮತ್ತು ಈ ಸತ್ಯಗಳನ್ನ ಕೇಳಿದರೆ ನೀವು ಇನ್ನುಮುಂದೆ ಫಾಸ್ಟ್ ಫುಡ್ ತಿನ್ನಲು ಹಿಂದೆ ಮುಂದೆ ನೋಡಬಹುದು.

ಹಾಗಾದರೆ ಫಾಸ್ಟ್ ಫುಡ್ ತಿನ್ನುವುದರಿಂದ ಆಗುವ ಸಮಸ್ಯೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದಿನೇಶ್ ಸಿಂಗ್ ಅನ್ನುವ ಒಬ್ಬ ವ್ಯಕ್ತಿ ಫಾಸ್ಟ್ ಫುಡ್ ಅಂಗಡಿಯನ್ನ ನಡೆಸುತ್ತಿದ್ದ ಮತ್ತು ಆ ಫಾಸ್ಟ್ ಫುಡ್ ಅಂಗಡಿಯಿಂದ ಆತನಿಗೆ ಒಳ್ಳೆಯ ಲಾಭ ಬರುತ್ತಿತ್ತು, ಇನ್ನು ಅಷ್ಟು ಒಳ್ಳೆಯ ಲಾಭ ಬರುತ್ತಿದ್ದರು ಕೂಡ ಆ ವ್ಯಕ್ತಿ ಆ ಫಾಸ್ಟ್ ಫುಡ್ ಅಂಗಡಿಯನ್ನ ಮುಚ್ಚಿ 15 ಸಾವಿರ ರೂಪಾಯಿಗೆ ಬೇರೆ ಕಡೆ ಕೆಲಸವನ್ನ ಮಾಡುತ್ತಿದ್ದಾನೆ.

ಇನ್ನು ಆತನ ಬಳಿ ಯಾಕೆ ನೀವು ಅಷ್ಟು ಒಳ್ಳೆಯ ಉದ್ಯೋಗವನ್ನ ಬಿಟ್ಟಿರಿ ಎಂದು ಕೇಳಿದಾಗ ಆತ ಹೇಳಿದ ವಿಷಯವನ್ನ ಕೇಳಿ ಎಲ್ಲರೂ ಶಾಕ್ ಆದರು. ಹೌದು ಆತ ಹೇಳಿದ ಪ್ರಕಾರ ಕೆಲವು ಫಾಸ್ಟ್ ಫುಡ್ ಅಂಗಡಿಗಳಲ್ಲಿ ಬಳಸುವ ಚಿಕನ್ ಗಳು ಫ್ರೆಶ್ ಆಗಿ ಇರುವುದಿಲ್ಲ ಮತ್ತು ಎರಡು ಮೂರೂ ದಿನದ ಕಾಲ ಫ್ರಿಡ್ಜ್ ನಲ್ಲಿ ಇಟ್ಟ ಮಾಂಸವನ್ನ ಹಾಕಿ ಕೆಲವು ಫಾಸ್ಟ್ ಫುಡ್ ಗಳನ್ನ ತಯಾರು ಮಾಡಲಾಗುತ್ತದೆ ಮತ್ತು ಕಬಾಬ್ ಮಾಡುವಾಗ ಕೆಲವು ಫಾಸ್ಟ್ ಫುಡ್ ಅಂಗಡಿಯವರು ಶುದ್ಧ ಎಣ್ಣೆಯನ್ನ ಹೆಚ್ಚಾಗಿ ಬಳಸುವುದಿಲ್ಲ.

ಇನ್ನು ಕೆಲವು ಗ್ರಾಹಕರು ಸಾಸ್ ಗಳನ್ನ ಫಾಸ್ಟ್ ಫುಡ್ ತಿನ್ನುವಾಗ ಉಪಯೋಗಿಸುತ್ತಾರೆ, ಆದರೆ ಕೆಲವು ಅಂಗಡಿಗಲ್ಲಿ ಆ ಸಾಸ್ ಗಳಿಗೆ ಕಾದಿದ ಎಣ್ಣೆಯನ್ನ ಮಿಶ್ರಣ ಮಾಡಿ ಗ್ರಾಹಕರಿಗೆ ಕೊಡುತ್ತಾರೆ ಮತ್ತು ಅಲ್ಲಿ ಪಾತ್ರಗಳನ್ನ ಸ್ವಚ್ಛವಾಗಿ ತೊಳೆಯುವುದಿಲ್ಲ. ಇನ್ನು ಕೆಲವು ಅಂಗಡಿಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವುದಿಲ್ಲ ಮತ್ತು ಅಲ್ಲಿ ಬಳಸುವ ಕೆಲವು ಪದಾರ್ಥಗಳು ಮಾನವನ ದೇಹಕ್ಕೆ ತುಂಬಾ ಅಪಾಯಕಾರಿ ಕೂಡ ಹೌದು. ಇನ್ನು ವ್ಯಕ್ತಿ ಹೇಳಿದ ಪ್ರಕಾರ ಆತನ ಹೆಂಡತಿ ಮತ್ತು ಮಕ್ಕಳು ಹೆಚ್ಚಾಗಿ ಫಾಸ್ಟ್ ಫುಡ್ ಗಳನ್ನ ಸೇವನೆ ಮಾಡುತ್ತಿದ್ದರು, ಆದರೆ ಕೆಲವು ಸಮಯದ ನಂತರ ಅವರಿಗೆ ಹೊಟ್ಟೆಯಲ್ಲಿ ತೊಂದರೆಗಳು ಕಾಣಿಸಿಕೊಂಡ ಅವರಿಗೆ ಆಪರೇಷನ್ ಮಾಡಿಸಲಾಯಿತು ಎಂದು ಸ್ವತಃ ಫಾಸ್ಟ್ ಫುಡ್ ಅಂಗಡಿಯ ಮಾಲೀಕ ಹೇಳಿದ್ದಾನೆ.

ತನ್ನಿಂದಲೇ ತನ್ನ ಹೆಂಡತಿ ಮತ್ತು ಮಕ್ಕಳಿಗೆ ತೊಂದರೆ ಆಯಿತು ಎಂದು ತಿಳಿದ ಆತ ಈಗ ಆ ಫಾಸ್ಟ್ ಫುಡ್ ಅಂಗಡಿಯನ್ನ ಮುಚ್ಚಿ ಬೇರೆ ಕಡೆ ಕೆಲಸವನ್ನ ಮಾಡುತ್ತಿದ್ದಾನೆ. ಇನ್ನು ಕೆಲವು ಫಾಸ್ಟ್ ಫುಡ್ ಅಂಗಡಿಗಳಲ್ಲಿ ಆಹಾರಗಳನ್ನ ತಯಾರು ಮಾಡಲು ಶುದ್ಧವಾದ ನೀರನ್ನ ಬಳಕೆ ಮಾಡದೆ ಕಲುಷಿತವಾದ ನೀರನ್ನ ಬಳಕೆ ಮಾಡುತ್ತಾರೆ, ಇನ್ನು ಸ್ವತಃ ಫಾಸ್ಟ್ ಫುಡ್ ಅಂಗಡಿಯ ಮಾಲೀಕ ಹೇಳಿದ ಈ ಕರಾಳ ಸತ್ಯವನ್ನ ಕೇಳಿ ಒಂದು ಕ್ಷಣ ಜನರು ಶಾಕ್ ಆದರು,

Comments are closed.