ಬೆಂಗಳೂರು: ಪತ್ರಕರ್ತರ ಸೋಗಿನಲ್ಲಿ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ತಂಡವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು ಮೂಲದವರಾದ ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಮಂಜುನಾಥ್ ಬಂಧಿತ ಆರೋಪಿಗಳು. ‘ಕಾವೇರಿ’ ಎನ್ನುವ ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿಕೊಂಡ ಆರೋಪಿಗಳು ವಿನಯ್ ಗುರೂಜಿಯ ಭಾಷಣದ ವಿಡಿಯೋಗ ತುಣುಕಗಳನ್ನು ತಿರುಚಿ ಅದನ್ನು ತಮ್ಮ ಚಾನೆಲ್ ನಲ್ಲಿ ವೈರಲ್ ಮಾಡುತ್ತಿದ್ದರು.
ಇದನ್ನು ನಿಲ್ಲಿಸಬೇಕಾದರೇ 30 ಲಕ್ಷ ಹಣ ನೀಡಬೇಕೆಂದು ಈ ತಂಡದಲ್ಲಿದ್ದ ಮುರುಳಿ, ಗುರೂಜಿ ಅವರ ಭಕ್ತ ಪ್ರಶಾಂತ್ ಎಂಬುವವರಿಗೆ ನಿರಂತರವಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈಗಾಗಲೇ ಅಪ್ ಲೋಡ್ ಮಾಡಿದ ವಿಡಿಯೋಗಳನ್ನು ಡಿಲೀಟ್ ಮಾಡಲು ಹಾಗೂ ಮುಂದೆ ಯಾವುದೇ ವಿಡಿಯೋ ಅಪ್ಲೋಡ್ ಮಾಡದಿರಲು 30 ಲಕ್ಷ ಹಣ ನೀಡಬೇಕೆಂದು ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಪ್ರಶಾಂತ್ ಅವರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Comments are closed.