ಮಂಗಳೂರು, ಮಾರ್ಚ್.08 : ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ಬಹುನಿರೀಕ್ಷಿತ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro ತುಳು ಸಿನಿಮಾದ ಟ್ರೈಲರ್ ಅನ್ನು “ಇಂಗ್ಲಿಷ್” ತುಳು ಚಿತ್ರದಲ್ಲಿ ಪ್ರಥಮ ಬಾರಿಗೆ ನಟಿಸುವ ಮೂಲಕ ಕೋಸ್ಟಲ್ ವುಡ್‌ಗೆ ಎಂಟ್ರಿ ಕೊಟ್ಟಿರುವ ಚಿತ್ರ ರಂಗದ ಮೇರು ನಟ ಅನಂತ್ ನಾಗ್ ಅವರು ಅವರು ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಈ ವಿಡೀಯೋವನ್ನು ನೋಡಿ ತಮ್ಮ ಅನಿಸಿಕೆಗಳನ್ನು ಯುಟ್ಯೂಬ್ (You Tube) ನಲ್ಲಿ ಶೇರ್ ಮಾಡಿ
ಬಳಿಕ ಮಾತನಾಡಿದ ಅನಂತ್ ನಾಗ್ ಅವರು, ನನ್ನ ಆತ್ಮೀಯ ಸ್ನೇಹಿತರಾದ ಹರೀಶ್ ಶೇರಿಗಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವುದೆ ಒಂದು ಹೆಮ್ಮೆ. ನನಗೆ ಈ ಒಂದು ಅವಕಾಶ ನೀಡಿದ ಶೇರಿಗಾರ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
ನನಗೆ ತುಳು ಚಿತ್ರ ದಲ್ಲಿ ಮಾಡುವ ಅವಕಾಶ ಐದಾರು ಬಾರಿ ಬಂದಿತ್ತು ಆದರೆ ಅದು ಅಷ್ಟೋಂದು ಸಮಾಧಾನಕರವಾಗಿರಲಿಲ್ಲ, ಹಾಗಾಗಿ ನಿರಾಕರಿಸಿದ್ದೆ. ಆದರೆ ಇದೀಗ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ ಸೂರಾಜ್ ಶೆಟ್ಟಿಯವರ ನಿರ್ದೇಶನದಲ್ಲಿ ಒಂದು ಉತ್ತಮ ಚಿತ್ರ ದಲ್ಲಿ ನಟಿಸುವ ಅವಕಾಶವೊಂದು ಲಭಿಸಿದ್ದು ನನ್ನ ತುಳು ಚಿತ್ರದ ಪ್ರಯಾಣ ಇಲ್ಲಿಂದಲ್ಲೇ ಆರಂಭವಾಗಲಿ ಎಂದು ಒಪ್ಪಿಕೊಂಡು ಪ್ರಾರಂಭ ಮಾಡಿದ್ದೇನೆ. ಈ ಮೂಲಕ ತುಳುಚಿತ್ರದಲ್ಲಿ ನಟಿಸುವ ನನ್ನ ಬಹುದಿನದ ಕನಸು ನನಸಾಗಿದೆ.
ನಾನು ಕರಾವಳಿಯಲ್ಲಿ ಬೆಳೆದವನು, ಹಾಗಾಗಿ ತುಳು ಮತ್ತು ಕೊಂಕಣಿ ಭಾಷೆ ಬಗ್ಗೆ ಗೊತ್ತಿರುವುದರಿಂದ ಅಷ್ಟೊಂದು ಕಷ್ಟವಾಗಲಿಲ್ಲ. ಆದರೆ ತುಳುವಿನಲ್ಲಿ ಒಂದು ದೊಡ್ಡ ಪಾತ್ರ ಸಿಗಬಹುದೆಂಬ ನಿರೀಕ್ಷೆಯಲ್ಲಿದೆ. ಮುಂದಿನ ಭಾರಿ ಸಿಗ ಬಹುದು ಎಂಬ ನಂಬಿಕೆ ನನಗಿದೆ. ಜೊತೆಗೆ ಕೊಂಕಣಿ ಭಾಷೆಯಲ್ಲಿ ಕೂಡ ಅವಕಾಶ ಸಿಕ್ಕಿದರೆ ನಟಿಸುವ ಮನಸ್ಸಿದೆ. ಇಂಗ್ಲೀಷ್ ಚಿತ್ರ ತುಂಬಾ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬರು ಚಿತ್ರಕ್ಕೆ ಪ್ರೋತ್ಸಾಹ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಗಳಾಗಿ ಗಾಯತ್ರಿ ಅನಂತ್ ನಾಗ್ ಪಾಲ್ಗೊಂಡಿದ್ದರು. ಮುಖ್ಯ ಅಥಿತಿಗಳಾಗಿ ಖ್ಯಾತ ಸರ್ಜನ್ ಕೆ.ವಿ.ದೇವಾಡಿಗ, ಎಸ್.ಡಿ.ಎಂ ಕಾಲೇಜಿನ ಮಾಜಿ ನಿರ್ದೇಶಕ ಡಾ.ದೇವರಾಜ್, ಉದ್ಯಮಿಗಳಾದ ಪ್ರಕಾಶ್ ಶೇರಿಗಾರ್, ಶ್ರೀನಿವಾಸ್ ಶೇರಿಗಾರ್ ಭಾಗವಹಿಸಿದ್ದರು.
ಇಂಗ್ಲೀಷ್ ಚಿತ್ರದ ನಿರ್ಮಾಪಕಿ ಶ್ರೀಮತಿ ಶರ್ಮಿಳಾ ಶೇರಿಗಾರ್, ಚಿತ್ರನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಾಂಜೂರು, ಉಮೇಶ್ ಮಿಜಾರ್, ಮೋಹನ್ ಕೊಪ್ಪಲ, ವಿಸ್ಮಯ ವಿನಾಯಕ, ಚಿತ್ರದ ನಾಯಕ ನಟ ಪ್ರಥ್ವಿ ಅಂಬರ್, ನಾಯಕಿ ನಟಿ ನವ್ಯಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಇಂಗ್ಲೀಷ್ ಚಿತ್ರದ ನಿರ್ಮಾಪಕರಾದ ಶ್ರೀ ಹರೀಶ್ ಶೇರಿಗಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ದೇಶಕ ಕೆ. ಸೂರಜ್ ಶೆಟ್ಟಿ ವಂದಿಸಿದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.
ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಕನ್ನಡ ಚಲನಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro ತುಳು ಸಿನಿಮಾ ಇದೇ ಬರುವ ಮಾರ್ಚ್ 20ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ( ಮಾರ್ಚ್,27ರಂದು ಬೆಂಗಳೂರು ಹಾಗೂ ಎಪ್ರಿಲ್ 5ರಂದು ಪುಣೆ ಮತ್ತು ಮುಂಬೈಯಲ್ಲಿ ) ತೆರೆಕಾಣಲಿದೆ.
ಈಗಾಗಲೇ ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ ತಯಾರಾಗಿರುವ ಮಾರ್ಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳುಭಾರೀ ಯಶಸ್ಸು ಕಂಡಿದ್ದು, ಮಾರ್ಚ್ 22 ಚಿತ್ರಕ್ಕೆ ಹಲವು ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ.
ವರದಿ/ಚಿತ್ರ : ಸತೀಶ್ ಕಾಪಿಕಾಡ್
Mob: 9035089084
Comments are closed.