ಹುಣಸೆ ಚಿಗುರು, ಈ ಚಿಗುರು ಅಂತ ತಕ್ಷಣನೆ ಬಾಯಿಯಲ್ಲಿ ನೀರು ಬರುತ್ತದೆ, ಹಳೆ ಕಾಲದಲ್ಲಿ ಈ ಚಿಗುರಿನ ಪ್ರಯೋಜನ ಅಷ್ಟಿಷ್ಟಲ್ಲ, ಆದ್ದರಿಂದಲೇ ನಮ್ಮ ಹಿರಿಯರು ಈ ಚಿಗುರನ್ನ ಬಹಳ ಉಪಯೋಗ ಮಾಡುತ್ತಿದ್ದರು. ಇನ್ನು ಈ ಚಿಗುರುಗಳಿಂದ ಹಲವು ಆಹಾರ ಪದಾರ್ಥಗಳನ್ನ ತಯಾರು ಮಾಡಲಾಗುತ್ತದೆ, ಇನ್ನು ಈ ಚಿಗುರಿನಲ್ಲಿ ಇರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯೋಗ ಎಂದು ಹೇಳಲಾಗುತ್ತದೆ.
ಇನ್ನು ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಮೂತ್ರ ವಿಸರ್ಜನೆ ಮತ್ತು ಮಲಬದ್ಧತೆಯಲ್ಲಿ ಆಗುವ ಸಮಸ್ಯೆಗಳು ದೂರವಾಗು ತ್ತದೆ, ಇನ್ನು ಇದು ಒಳ್ಳೆಯ ಕೊಲೆಸ್ಟ್ರಾಲ್ ಗಳನ್ನ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನ ಕಡಿಮೆ ಮಾಡುತ್ತದೆ.
ಇನ್ನು ಹೊಟ್ಟೆಯಲ್ಲಿ ಜಂತು ಸಮಸ್ಯೆ ಇರುವವರು ಇದರ ಉಪಯೋಗ ಮಾಡಿದರೆ ಅದರಿಂದ ದೂರ ಬರಬಹುದು, ಇನ್ನು ಹುಲಸಿ ಚಿಗುರನ್ನ ಹಸಿಯಾಗಿ ತಿಂದರೆ ನಿಮಗೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ, ಇದರಲ್ಲಿ ಎಲ್ಲಾ ಪೋಷಕಾಂಶಗಳು ಇರುವುದರನ್ನು ಮಕ್ಕಳ ಬೆಳವಣಿಗೆಗೆ ಇದು ತುಂಬಾ ಉಪಯೋಗ.
ಇನ್ನು ಹುಲಸಿ ಚಿಗುರನ್ನ ಸೇವನೆ ಮಾಡುವುದರಿಂದ ಶುಗರ್ ಕಂಟ್ರೋಲ್ ಆಗುತ್ತದೆ, ಇನ್ನು ತಾಯಿಯ ಹಾಲನ್ನ ಹೆಚ್ಚುಸುವುದರಲ್ಲಿ ಇದರ ಪಾತ್ರ ತುಂಬಾ ಪ್ರಮುಖವಾದದ್ದು.
ಇನ್ನು ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು ಪ್ರತಿದಿನ ಇದನ್ನ ಜಗಿದರೆ ಅದರಿಂದ ಮುಕ್ತಿಯನ್ನ ಪಡೆಯಬಹುದು, ಇನ್ನು ಹುಲಸಿ ಚಿಗುರನ್ನ ಪುಡಿ ಮಾಡಿ ಅದಕ್ಕೆ ನಿಂಬೆ ಹಣ್ಣನ್ನು ಹಿಂಡಿ ನೋವು ಇದ್ದಲ್ಲಿ ಹಚ್ಚಿದರೆ ನೋವುಗಳು ಕಡಿಮೆಯಾಗುತ್ತದೆ. ಇನ್ನು ಕಾಮಾಲೆ ರೋಗಕ್ಕೂ ಕೂಡ ಅತೀ ಉಪಯೋಗವಾದದ್ದು, ಮಲೇರಿಯಾ ಮತ್ತು ಇನ್ನಿತರ ಸಮಸ್ಯೆಗಳಿಗೂ ಕೂಡ ಇದು ರಾಮಬಾಣದಂತೆ ಕೆಲಸವನ್ನ ಮಾಡುತ್ತದೆ.
ಇನ್ನು ಈ ಚಿಗುರನ್ನ ಸದಾ ಸೇವನೆ ಮಾಡಿದರೆ ಇದು ನಿಮ್ಮನ್ನ ಯವ್ವನವಾಗಿ ಕಾಣುವಂತೆ ಮಾಡುತ್ತದೆ, ಯಾರು ಇದನ್ನ ಮೇಲಿಂದ ಮೇಲೆ ಸೇವನೆ ಮಾಡುತ್ತಾರೋ ಅಂತವರ ವಯಸ್ಸು ಮುಖದ ಮೇಲೆ ಕಾಣುವುದಿಲ್ಲ ಮತ್ತು ಯಾವಾಗಲು ಚಿಕ್ಕವರಂತೆ ಕಾಣುತ್ತಾರೆ.
ಇನ್ನು ಇದರಲ್ಲಿ ವಿಟಮಿನ್ ಸಿ ತುಂಬಾ ಇದೆ, ಆದ್ದರಿಂದ ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇನ್ನು ಮಹಿಳೆಯರಿಗೆ ಋತು ಸಮಯದಲ್ಲಿ ಬರುವ ಸಮಸ್ಯೆಗಳನ್ನ ಕೂಡ ಇದು ಕಡಿಮೆ ಮಾಡುತ್ತದೆ ಮತ್ತು ಇದು ಅಧಿಕ ರಕ್ತದ ಒತ್ತಡವನ್ನ ಕೂಡ ಹಿಡಿತಕ್ಕೆ ತರುತ್ತದೆ.
ಇನ್ನು ಕ್ಯಾನ್ಸರ್ ಅಂತಹ ಕಾಯಿಲೆಗೂ ಇದು ರಾಮಬಾಣವಾಗಿದೆ, ಹುಣಸೆ ಚಿಗುರು ಅಧಿಕ ತೂಕವನ್ನ ಕಡಿಮೆ ಮಾಡುತ್ತದೆ, ಹೀಗೆ ಎಲ್ಲಾ ಇದದಲ್ಲೂ ಈ ಚಿಗುರಿನ ಮಹತ್ವ ಅಷ್ಟಿಷ್ಟಲ್ಲ, ಅದಕ್ಕೆ ಹುಣಸೆ ಹಾಳಾದರೂ ಅದರ ಹುಳಿ ಹಾಳಾಗಲ್ಲ ಅಂತ, ಆದ್ದರಿಂದ ಇದನ್ನ ಸಾಧ್ಯವಾದಷ್ಟು ಸೇವನೆ ಮಾಡಬೇಕು ಅನ್ನುತ್ತಾರೆ ತಜ್ಞರು.

Comments are closed.