ಬೆಂಗಳೂರು: ವಿದ್ಯಾರ್ಥಿನಿಯ ಜೊತೆ ಸಲ್ಲಾಪ ನಡೆಸಿದ್ದ ಮೈಸೂರಿನ ನಂಜನಗೂಡು ತಾಲೂಕಿನ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ ಸಿದ್ದರಾಜು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ. ತನ್ನ ರಾಸಲೀಲೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಾರಿಯಾಗಿದ್ದ ಕಾಮುಕ ಶಿಕ್ಷಕಕನನ್ನು ಅಮಾನತುಗೊಳಿಸಲಾಗಿದೆ.
ನಂಜನಗೂಡಿನ ರಾಂಪುರ ಸರ್ಕಾರಿ ಶಾಲೆಯ 58 ವರ್ಷದ ಶಿಕ್ಷಕ ಕೆ. ಸಿದ್ದರಾಜು ತನ್ನ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆತನ ರಾಸಲೀಲೆಯ ಫೋಟೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕಾಮುಕ ಶಿಕ್ಷಕ ಸಿದ್ದರಾಜು ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ. ಈ ಕುರಿತು ಮೈಸೂರು ಡಿಡಿಪಿಐ ಮತ್ತು ಬಿಇಒ ಅವರೊಂದಿಗೆ ಮಾತನಾಡಿರುವ ಸಚಿವ ಸುರೇಶ್ ಕುಮಾರ್, ಸಿದ್ದರಾಜು ಅವರ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಶಿಕ್ಷಕ ಸಿದ್ದರಾಜುಗೆ ನೋಟಿಸ್ ನೀಡಿದೆ. ‘ಸಿದ್ದರಾಜು ತಮ್ಮ ಗ್ರಾಮದ ಯುವತಿ ಜೊತೆಗಿನ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಇಲಾಖೆಗೆ ತೀವ್ರ ಮುಜುಗರ ಉಂಟಾಗಿದೆ. ಯುವತಿಯೊಂದಿಗೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳದ ಗಂಭೀರ ಪ್ರಕರಣಗಳು ಸಾಬೀತಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಸರ್ಕಾರಿ ಶಾಲೆಯ ಹಿರಿಯ ಶಿಕ್ಷಕರಾಗಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಆದೇಶಪ್ರತಿಯಲ್ಲಿ ನಮೂದಿಸಲಾಗಿದೆ.
20 ವರ್ಷದ ತನ್ನ ಹಳೆಯ ವಿದ್ಯಾರ್ಥಿನಿಗೆ ಕಾಮಸೂತ್ರದ ಪಾಠ ಮಾಡಿರುವ 58 ವರ್ಷದ ಸಿದ್ದರಾಜು ಎಂಬ ಶಿಕ್ಷಕ ಮಾಜಿ ಸಚಿವ ಡಿ.ಟಿ. ಜಯಕುಮಾರ್ ಅವರ ಆಪ್ತ ಸಹಾಯಕನಾಗಿದ್ದ. ತನ್ನ ಶಾಲೆಯ ಹಳೆಯ ವಿದ್ಯಾರ್ಥಿನಿಗೆ ನೀತಿ ಪಾಠ ಹೇಳಿಕೊಟ್ಟವನು ಈಗ ಸರಸ-ಸಲ್ಲಾಪ ನಡೆಸಿರುವ ಫೋಟೋಗಳು ವೈರಲ್ ಆಗಿತ್ತು. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕ ಸಿದ್ದರಾಜು ನಿಜವಾದ ಬಣ್ಣ ಬಯಲಾಗಿದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಗ್ರಾಮದಿಂದ ಪರಾರಿಯಾಗಿದ್ದ.
ಇಬ್ಬರು ಹೆಂಡತಿಯನ್ನು ಹೊಂದಿರುವ ಸಿದ್ದರಾಜು ಧನುರ್ವಾಯು ರೋಗದಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾನೆ. ಆದರೂ ಯುವತಿಯೊಂದಿಗೆ ಕಾಮದಾಟ ಆಡುತ್ತಿದ್ದ. ದಿವಂಗತ ಡಿ.ಟಿ. ಜಯಕುಮಾರ್ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಆಪ್ತ ಸಹಾಯಕನಾಗಿದ್ದ ಸಿದ್ದರಾಜು ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ. ಇದೀಗ ಆತನನ್ನು ಸೇವೆಯಿಂದ ಅಮಾನತುಗೊಳಿಸಿ, ಸಚಿವರು ಆದೇಶ ಹೊರಡಿಸಿದ್ದಾರೆ.
Comments are closed.