ಆರೋಗ್ಯ

ಯಾವ ರೀತಿಯ ನೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು, ಇದರ ಸಂಪೂರ್ಣ ಮಾಹಿತಿ ನಿಮಗಾಗಿ

Pinterest LinkedIn Tumblr

ಸ್ನಾನವನ್ನ ಎಲ್ಲರೂ ಮಾಡೇ ಮಾಡುತ್ತಾರೆ, ಕೆಲವರು ದಿನದಲ್ಲಿ ಒಮ್ಮೆ ಸ್ನಾನ ಮಾಡಿದರೆ ಇನ್ನು ಕೆಲವರು ದಿನದಲ್ಲಿ ಎರಡು ಭಾರಿ ಸ್ನಾನವನ್ನ ಮಾಡುತ್ತಾರೆ. ಇನ್ನು ಬೆಳಿಗ್ಗೆ ಸ್ನಾನವನ್ನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಕೆಲವು ಬೆಳಗಿನ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನವನ್ನ ಮಾಡಿದರೆ ಇನ್ನು ಕೆಲವು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡುತ್ತಾರೆ. ಇನ್ನು ಪ್ರಪಂಚದಲ್ಲಿ ಹೆಚ್ಚಿನ ಜನರು ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ತಣ್ಣಗಿನ ನೀರಿನಲ್ಲಿ ಸ್ನಾನವನ್ನ ಮಾಡಿದರೆ ಚಳಿ ಆಗುತ್ತದೆ ಅನ್ನುವ ಕಾರಣಕ್ಕೆ ಜನರು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡುತ್ತಾರೆ. ಹಾಗಾದರೆ ನಾವು ತಣ್ಣಗಿನ ನೀರಿನಲ್ಲಿ ಸ್ನಾನವನ್ನ ಮಾಡುವುದು ಒಳ್ಳೆಯದ ಅಥವಾ ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡುವುದು ಕೆಟ್ಟದ್ದ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಕೆಲವು ಸಂಶೋಧನೆಯ ಪ್ರಕಾರ ಪುರುಷರು ಬೆಳಿಗ್ಗೆಯ ಸಮಯದಲ್ಲಿ ತಣ್ಣಗಿನ ನೀರಿನಲ್ಲಿ ಸ್ನಾನವನ್ನ ಮಾಡುವುದು ಬಹಳ ಒಳ್ಳೆಯದು ಎಂದು ತಿಳಿದು ಬಂದಿದೆ. ಇನ್ನು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಪುರುಷರಲ್ಲಿ ನಪುಂಸಕತ್ವ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಅದೂ ಅವರ ಗಂಡಸುತನದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಹೌದು ಸ್ನೇಹಿತರೆ ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡಿದರೆ ತಮ್ಮ ದೇಹದ ತಾಪಮಾನ ಜಾಸ್ತಿ ಆಗುತ್ತದೆ, ಹೀಗೆ ತಾಪಮಾನ ಜಾಸ್ತಿ ಆದರೆ ಗಂಡಸಿನಲ್ಲಿ ಇರುವ ಲೈಂಗಿಕ ಶಕ್ತಿ ಕುಗ್ಗುತ್ತದೆ ಎಂದು ಸಂಶೋದನೆಯಲ್ಲಿ ತಿಳಿದು ಬಂದಿದೆ.

ಈ ಕಾರಣದಿಂದ ಪುರುಷರು ಆದಷ್ಟು ತಣ್ಣೀರಿನ ಸ್ನಾನವನ್ನ ಮಾಡುವುದು ಬಹಳ ಒಳ್ಳೆಯದು, ಇನ್ನು ವಾತಾರಣದಲ್ಲಿ ಚಳಿ ಇದ್ದಾಗ ಎಲ್ಲರೂ ಕೂಡ ಬಿಸಿ ನೀರಿನ ಸ್ನಾನವನ್ನ ಮಾಡುತ್ತಾರೆ ಆದರೆ ಸ್ನೇಹಿತರೆ ಇದು ಒಳ್ಳೆಯದಲ್ಲ ಮತ್ತು ಇದರಿಂದ ದೇಹಕ್ಕೆ ಬಹಳ ತೊಂದರೆ ಯಾಗುತ್ತದೆ. ಇನ್ನು ಚಳಿಗಾಲದ ಸಮಯದಲ್ಲಿ ಬಿಸಿ ನೀರಿನ ಸ್ನಾನವನ್ನ ಮಾಡಿದರೆ ಹೃದಯಾಘಾತವಾಗುವ ಸಾಧ್ಯತೆ ಬಹಳ ಜಾಸ್ತಿ ಇರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ, ಈ ಕಾರಣದಿಂದ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಬಹಳ ಒಳ್ಳೆಯದು ಅಂತ ಹೇಳಬಹುದು. ಇನ್ನು ಹೆಚ್ಚಾಗಿ ಬಿಸಿ ನೀರಿನ ಸ್ನಾನವನ್ನ ಮಾಡಿದರೆ ಚರ್ಮಕ್ಕೆ ಸಂಬಂದಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ ಮತ್ತು ಇದರಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ, ಇನ್ನು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡಿದರೆ ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಅನುವುದು ಬೇಸರ ಸಂಗತಿಯಾಗಿದೆ.

ಇನ್ನು ಮದ್ಯಪಾನ ಮತ್ತು ಧೂಮಪಾನವನ್ನ ಮಾಡುವವರು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡಿದರೆ ಅವರಿಗೆ ಹಲವು ರೀತಿಯ ರೋಗಗಳು ಕಾಣಿಸಿಕೊಳ್ಳುತ್ತದೆ. ಇನ್ನು ಬಿಸಿ ನೀರಿನ ಸ್ನಾನ ಹೃದಯದ ಬಡಿತವನ್ನ ಕಡಿಮೆ ಮಾಡುವುದರ ಜೊತೆಗೆ ಹೃದಯಾ ಘಾತವಾಗುವ ಸಾಧ್ಯತೆ ಜಾಸ್ತಿ ಇದೆ. ಇನ್ನು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡಿದರೆ ರಕ್ತದ ಒತ್ತಡದಲ್ಲಿ ಬದಲಾವಣೆ ಕಂಡುಬರುತ್ತದೆ, ಹೌದು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡಿದರೆ ರಕ್ತನಾಳಗಳು ಹಿಗ್ಗುತ್ತದೆ ಮತ್ತು ಇದರಿಂದ ಹೃದಯಕ್ಕೆ ತುಂಬಾ ತೊಂದರೆಯಾಗುತ್ತದೆ. ಇನ್ನು ಕೆಲವು ಜನರಿಗೆ ಬಿಸಿ ನೀರಿನ ಸ್ನಾನವನ್ನ ಮಾಡಿದ ಬಳಿಕ ತಲೆ ಸುತ್ತುವಿಕೆ ಕಂಡುಬರುತ್ತದೆ, ರಕ್ತದ ಒತ್ತಡದಲ್ಲಿನ ಏರುಪೇರು ಇದು ಕಾರಣ ಅನ್ನಬಹುದು, ಈ ಎಲ್ಲಾ ಕಾರಣಗಳಿಂದ ಬೆಳಿಗ್ಗೆಯ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನವನ್ನ ಮಾಡುವುದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.

Comments are closed.