ಆರೋಗ್ಯ

ಈ ಎಲೆಗಳನ್ನು ಅರಿಷಿನದೊಂದಿಗೆ ಬೆರಸಿ ಬಿಸಿ ನೀರಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಹೊಟ್ಟೆಹುಣ್ಣು ವಾಸಿ

Pinterest LinkedIn Tumblr

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಸಹ ಯೋಗ್ಯವಿರುವ ಸಸ್ಯ. ಈ ಒಂದು ಸಸ್ಯ ಆರೋಗ್ಯದಿಂದ ಹಿಡಿದು ಸೌಂದರ್ಯದವರೆಗೂ ಪ್ರತಿಯೊಂದಕ್ಕೂ ಬಳಕೆಯಾಗುತ್ತಿದೆ ಅತಿ ಹೆಚ್ಚು ಔಷಧಿ ಗುಣಗಳನ್ನು ಹೊಂದಿದೆ ಇದನ್ನು ಇಂಡಿಯನ್ ನೆಟ್ಟಲ್ ಎಂದು ಕರೆಯುತ್ತಾರೆ ಇಂಡಿಯನ್ ಏಕಾಲೀಫಾ ಅಂತ ಗುರುತಿಸುತ್ತಾರೆ ಕನ್ನಡದಲ್ಲಿ ಕುಪ್ಪೆ ಗಿಡ ಎಂತಲೂ ಹಿಂದಿಯಲ್ಲಿ ಕುಪ್ಪಿಕೋಕ್ಲಿ ಅಂತಲೂ ಮಲಯಾಳಂ ನಲ್ಲಿ ಕುಪ್ಪಮೇನಿ ಎಂತಲೂ ತಮಿಳಲ್ಲಿ ಕುಪ್ಪಿ ಮೇನಿಕಿರಾಯಿ ಎಂತಲೂ ಸಂಸ್ಕೃತದಲ್ಲಿ ಹರಿತ ಮಂಜರಿ ಅಂತಲೂ ಕರೆಸಿಕೊಳ್ಳುವ ಈ ಸಸ್ಯ ಎಲ್ಲ ಕಡೆ ಬೆಳೆಯುತ್ತದೆ ಹಾವು ಚೆಳುಗಳ ಕಡಿತದ ವಿಷಕ್ಕೆ ಇದನ್ನು ಬಳಸುತ್ತಾರೆ ಇದರಲ್ಲಿ ಡ್ರೈಕೋಸಿನ್ ಫೈಟೋಲ್ ದೈಹೈಡ್ರೋ ಮುಂತಾದ ಹಲವಾರು ರಾಸಾಯನಿಕಗಳಿವೆ ಅರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ತಯಾರಿಸಿದ ಎಣ್ಣೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.

ಇದರ ತಾಜಾ ಎಲೆಗಳ ರಸ ತೆಗೆದು ಅದನ್ನು ಸಮ ಪ್ರಮಾಣದ ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಅದಕ್ಕೆ ಸ್ವಲ್ಪ ಶುಧ್ದ ಅರಿಷಿಣವನ್ನು ಹಾಕಿ ಬಿಸಿ ಮಾಡಿ ನೀರಿನಂಶ ಹೋದ ಮೇಲೆ ಎಣ್ಣೆ ಉಳಿಯುತ್ತದೆ ಅದು ತಣ್ಣಗಾದ ಮೇಲೆ ಶೇಖರಿಸಿ ಇಟ್ಟು ಬಳಸುವುದರಿಂದ ಸೋರಿಯಾಸಿಸ್ ವಾಸಿಯಾಗುತ್ತದೆ. ಇದನ್ನು ಎಲ್ಲ ರೀತಿಯ ಚರ್ಮ ಸಂಬಂದಿ ಸಮಸ್ಯೆಗಳಿಗೆ ಗಾಯಗಳಿಗೆ ಬಳಸಬಹುದು ಇದೆ ಎಲೆಯ ರಸವನ್ನು ಎಣ್ಣೆಯಲ್ಲಿ ಬೆರಸಿ ಬಿಸಿ ಮಾಡಿ ತಣ್ಣಗಾಗಿಸಿ ಬಳಕೆ ಮಾಡಿದರೆ ಮೂಳೆನೋವು ಮಾಂಸಖಂಡಗಳ ನೋವು ನಿವಾರಣೆಯಾಗುತ್ತವೆ. ಈ ಗಿಡದ ತಾಜಾ ಎಲೆಯ ಜೊತೆಗೆ ಶುಧ್ದ ಅರಿಷಿಣ ಹಾಗೂ ಮುಸ್ತಕವನ್ನು ಸಮ ಪ್ರಮಾಣದಲ್ಲಿ ಬೆರಸಿ ಪೇಸ್ಟ ತಯಾರಿಸಿ ಹಚ್ಚುವುದರಿಂದ ಮುಖದಲ್ಲಿರುವ ಅನವಶ್ಯಕ ಕೂದಲನ್ನು ತಗೆಯಬಹುದು. ಈ ಎಲೆಗಳನ್ನು ಅರಿಷಿನದೊಂದಿಗೆ ಬೆರಸಿ ಬಿಸಿ ನೀರಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಹೊಟ್ಟೆಹುಣ್ಣು ವಾಸಿಯಾಗುತ್ತವೆ.

ಜಂತು ಹುಳುಗಳು ಸಾಯುತ್ತವೆ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮಲಬದ್ಧತೆ ನಿವಾರಣೆಯಾಗುವುದರ ಜೊತೆಗೆ ಮೂಲವ್ಯಾಧಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಹಾವು ಕಚ್ಚಿದಾಗ ಈ ಎಲೆಯ ಕಷಾಯ ಕುಡಿಸಿದರೆ ಸರಿಹೋಗುತ್ತದೆ. ಇನ್ನು ಈ ಎಲೆಯ ಕಷಾಯವನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಕೆಮ್ಮು ನೆಗಡಿಗೂ ಸಹ ಈ ಎಳೆಯ ಕಷಾಯ ಉತ್ತಮ ಇನ್ನು ಇದರ ಬೆರಿನಿಂದ ಹಲ್ಲುಜ್ಜಿದರೆ ಹಲ್ಲಿನ ಸಮಸ್ಯೆಗಳು ಪರಿಹಾರವಾಗಿ ವಸಡು ಗಟ್ಟಿಯಾಗುತ್ತದೆ. ಇದರ ರಸದಲ್ಲಿ ನಿಂಬೆಹಣ್ಣಿನ ರಸ ಬೆರೆಸಿ ಹಚ್ಚಿದರೆ ಕಜ್ಜಿ ಸಮಸ್ಯೆ ಪರಿಹಾರವಾಗುತ್ತದೆ. ಇದರ ಎಲೆಗೆ ಬೇವಿನ ಎಲೆ ಬೆರಸಿ ಹಚ್ಚಿ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ಕಣ್ಣಿನ ಕೆಳಗೆ ಕಪ್ಪು ವರ್ತುಲ ಮೊಳಕಾಲು ಕತ್ತಿನ ಹಿಂಬಾಗ ಹಾಗೂ ಶರೀರದ ಬೇರೆ ಭಾಗಗಳಲ್ಲಿ ಉಂಟಾಗುವ ಕಪ್ಪು ಕಲೆಗಳನ್ನು ನಿವಾರಿಸಲು ಈ ಎಲೆಯ ಪೇಸ್ಟಗೆ ನಿಂಬೆಹಣ್ಣು ಬೆರಸಿ ಹಚ್ಚಿದರೆ ಕಡಿಮೆಯಾಗುತ್ತದೆ. ಆದರೆ ಗರ್ಭಿಣಿಯರು ಮತ್ತು ಗ್ಲುಕೋಸ್ ಪಾಸ್ಪೇಟ್ ಡಿಹೈಡ್ರೋಜೇನಿಸ್ ಡಿಪಿಸಿಎನ್ಸಿಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಇದರ ಕಷಾಯವನ್ನು ಕುಡಿಯಬಾರದು ಇದು ಇಂಪೋರ್ಟಿಲಿಟಿಯನ್ನು ಉಂಟು ಮಾಡುವ ಗುಣ ಹೊಂದಿದೆ ಹಾಗಾಗಿ ಗರ್ಭಿಣಿಯರು ಹೊಟ್ಟೆಗೆ ಸೇವಿಸಬಾರದು ಉಳಿದವರು ಚರ್ಮ ಸಂಬಂದಿ ಸಮಸ್ಯೆಗೆ ಗಾಯಗಳಿಗೆ ಕೂದಲ ನಿವಾರಣೆಗೆ ಮಂಡಿನೋವು ಅರ್ತರೈಟಿಸ್ ಸಮಸ್ಯೆಗೆ ಬಳಸಬಹದು ಹಾಗೇನೇ ಹೊಟ್ಟೆಗೆ ಸೇವಿಸುವಾಗ ಆಯುರ್ವೇದ ವೈದ್ಯರ ಅಥವಾ ನಾಟಿ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Comments are closed.