ಕರಾವಳಿ

ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನಿ ಮಂದಿರದ ಬ್ರಹ್ಮಕಲಶೋತ್ಸವ ಬಗ್ಗೆ ವಿಶೇಷ ಸಭೆ

Pinterest LinkedIn Tumblr

ಮುಂಬಾಯಿ: ಮಲಾಡ್ ಪೂರ್ವದ ಲಕ್ಷ್ಮಣ್ ನಗರದಲ್ಲಿರುವ 48 ವರ್ಷಗಳ ಇತಿಹಾಸವಿರುವ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಆಡಳಿತದಲ್ಲಿರುವ ಶ್ರೀ ಶನಿ ಮಂದಿರದ ಜೀರ್ಣೋದ್ಧಾರ ಬ್ರಹ್ಮಕಲಶ ಬಗ್ಗೆ ವಿಶೇಷ ಸಭೆ ಫೆಬ್ರವರಿ 10ರಂದು ದೇವಸ್ಥಾನ ದಲ್ಲಿ ನಡೆಯಿತು.

ಸಭೆಯಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಶನಿದೇವರ ದುರ್ಗೆ ಮತ್ತು ಗಣಪತಿಯ ಮೂರ್ತಿ ಪುನರ್ಪ್ರ ತಿಷ್ಠಾಪನೆ ಬ್ರಹ್ಮಕಲಸ ಮಹಾ ಕಾರ್ಯವು ಮೇ 25ರಿಂದ 30ರವರೆಗೆ ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ರವರ ಸಭೆಯಲ್ಲಿ ತಿಳಿಸಿದರು.

ಸಮಿತಿಯ ಹಿರಿಯ ಸದಸ್ಯರಾದ ಬಾಬು ಚಂದನ್ ಶ್ರೀಧರ್ ಶೆಟ್ಟಿ ಎಂ ಡಿ ಬಿಲ್ಲವ ಸದಾನಂದ ನಾಯಕ್ ದಿನೇಶ್ ಕುಂಬಲೆ ನಿತ್ಯಾನಂದ ಕೋಟ್ಯಾನ್ ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮಂಡಲ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟರು

ಪ್ರಾರಂಭದಲ್ಲಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸ್ವಾಗತಿಸಿ ಬ್ರಹ್ಮಕಲಶೋತ್ಸವದ ಬಗ್ಗೆಮಾಹಿತಿ ನೀಡಿದರು .ದೇವಸ್ಥಾನದ ಪ್ರಧಾನ ಅರ್ಚಕ ತುಂಗ ರಾಘವೇಂದ್ರ ಭಟ್ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸಿದರು ಐದು ದಿನಗಳು ನಡೆಯುವ ವಿವಿಧ ಪೂಜಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಮಿತಿ ಅಧ್ಯಕ್ಷರು ಶ್ರೀನಿವಾಸ ಸಫಲ್ಯ ಮಾತನಾಡುತ್ತಾ ಫೆಬ್ರವರಿ ಹತ್ತರಿಂದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಪ್ರಾರಂಭ ಗೊಳ್ಳಲಿದ್ದು ಮೇ ತಿಂಗಳಲ್ಲಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂದ ಬ್ರಹ್ಮಕಲಶ ಅಭೂತಪೂರ್ವವಾಗಿ ನಡೆಯಲು ಸಮಿತಿ ಸದಸ್ಯರು ಮತ್ತು ಸರ್ವ ಭಕ್ತರು ಸಹಕಾರ ನೀಡಬೇಕೆಂದು ಸಭೆಯಲ್ಲಿ ವಿನಂತಿಸಿದರು.

ಕೋಷಧಿಕರಿ ಹರೀಶ್ ಜೆ ಸಾಲಿಯಾನ್ ಧನ್ಯವಾದ ನೀಡಿದರು. ಬಳಿಕ ದೇವಸ್ಥಾನದಲ್ಲಿ ಬ್ರಹ್ಮಕಲಸ ಸಾಂಗವಾಗಿ ನಡೆಯುವಂತೆ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತು .

ಬ್ರಹ್ಮಕಲಶೋತ್ಸವದ ಕಾರ್ಯಧ್ಯಕ್ಷ ಪತ್ರಕರ್ತ ದಿನೇಶ್ ಕುಲಾಲ್ ಅವರ ಸಾರಥ್ಯದಲ್ಲಿ ಆರು ದಿನಗಳ ಕಾಲ ವೈಭವದಿಂದ ನಡೆಯಲಿದೆ ಪ್ರತಿದಿನ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮ ದೇಶ-ವಿದೇಶದ ಗಣ್ಯರ ಉಪಸ್ಥಿತಿ ಗುರುವರ್ಯರ ಆಶೀರ್ವಚನ ನೀಡಲಿದ್ದು ಸುಮಾರು 25 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

__ದಿನೇಶ್ ಕುಲಾಲ್

Comments are closed.