ಆರೋಗ್ಯ

ಫ್ಯಾಟಿ ಲಿವರ್ ರೋಗದ ಅಪಾಯವನ್ನು ತಗ್ಗಿಸಲು ಈ ತರಕಾರಿ ಸೇವಿಸಿ

Pinterest LinkedIn Tumblr

ನೀವು ಕ್ಯಾಬೇಜ್ ತಿನ್ನುವುದನ್ನು ಇಷ್ಟಪಡುತ್ತೀರಾ? ಇಲ್ಲದಿದ್ದರೆ ನಿಮ್ಮ ಯಕೃತ್ತಿನ ಸಲುವಾಗಿ ಅದರ ಸೇವನೆಯನ್ನು ಆರಂಭಿಸಿ,ಏಕೆಂದರೆ ಕ್ಯಾಬೇಜ್ ಸೇವನೆಯು ಮಾರಣಾಂತಿಕ ಪರಿಣಾಮಗಳನ್ನು ಬೀರಬಲ್ಲ ಫ್ಯಾಟಿ ಲಿವರ್ ಅಥವಾ ಯಕೃತ್ತು ದೊಡ್ಡದಾಗುವ ರೋಗವನ್ನು ತಡೆಯುತ್ತದೆ ಎನ್ನುವುದನ್ನು ಸಂಶೋಧನೆಯೊಂದು ತೋರಿಸಿದೆ. ಕ್ಯಾಬೇಜ್,ಕಾಲಿಫ್ಲವರ್,ಬ್ರೊಕೊಲಿಯಂತಹ ಒಂದು ವರ್ಗಕ್ಕೆ ಸೇರಿದ ತರಕಾರಿಗಳಲ್ಲಿರುವ ಇಂಡೋಲ್ ಎಂಬ ನೈಸರ್ಗಿಕ ಸಂಯುಕ್ತವು ಮದ್ಯಪಾನಕ್ಕೆ ಸಂಬಂಧಿಸದ ಫ್ಯಾಟಿ ಲಿವರ್ ರೋಗ (ಎನ್‌ಎ ಎಫ್‌ ಎಲ್‌ ಡಿ)ದ ಅಪಾಯವನ್ನು ತಗ್ಗಿಸುತ್ತದೆ ಎನ್ನುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಎನ್‌ಎಎಫ್‌ಎಲ್‌ಡಿಯನ್ನು ತಡೆಯಲು ಮತ್ತು ಈಗಾಗಲೇ ಈ ರೋಗದಿಂದ ಬಳಲುತ್ತಿರುವವರು ಪರಿಣಾಮಕಾರಿಯಾಗಿ ಚೇತರಿಸಿ ಕೊಳ್ಳಲು ಅಧಿಕ ಇಂಡೋಲ್ ಉತ್ಪಾದನೆಯ ಸಾಮರ್ಥ್ಯವಿರುವ ಆಹಾರಗಳ ಸೇವನೆ ಅಗತ್ಯವಾಗಿದೆ.

ಆಹಾರ ಕ್ರಮದಲ್ಲಿ ಬದಲಾವಣೆಯು ಕಾಯಿಲೆಯೊಂದನ್ನು ತಡೆಯಲು ಅಥವಾ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗಿಸುವ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಅಮೆರಿಕದ ಟೆಕ್ಸಾಸ್ ಎ ಆಯಂಡ್ ಎಂ ಅಗ್ರಿಲೈಫ್ ರೀಸರ್ಚ್‌ನ ಚಾವೊಡೊಂಗ್ ವು ವರದಿಯಲ್ಲಿ ಹೇಳಿದ್ದಾರೆ.

ಕೆಲವೊಮ್ಮೆ ಸ್ಯಾಚ್ಯುರೇಟೆಡ್ ಫ್ಯಾಟ್‌ಗಳು,ಅನಾರೋಗ್ಯಕರ ಆಹಾರಗಳು ಮತ್ತು ಸಂಸ್ಕರಿತ ಆಹಾರಗಳ ಅತಿಯಾದ ಸೇವನೆ ಯಕೃತ್ತಿನ ಮೇಲೆ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ ಮತ್ತು ಇದು ಎನ್‌ಎಎಫ್‌ಎಲ್‌ಡಿಯನ್ನು ಉಂಟು ಮಾಡುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಮಾರಣಾಂತಿಕ ಯಕೃತ್ತಿನ ಕ್ಯಾನ್ಸರ್ ಅಥವಾ ಯಕೃತ್ತಿನ ಸಿರೊಸಿಸ್‌ನಂತಹ ಗಂಭೀರ ಯಕೃತ್ತಿನ ಕಾಯಿಲೆಗಳಿಗ ಕಾರಣವಾಗುತ್ತವೆ ಎಂದೂ ವು ಹೇಳಿದ್ದಾರೆ.

ವಿಜ್ಞಾನಿಗಳು ಯಕೃತ್ತಿನ ಆರೋಗ್ಯದ ಮೇಲೆ ಇಂಡೋಲ್‌ನ ಪರಿಣಾಮ ಮತ್ತು ಎನ್‌ಎಎಫ್‌ಎಲ್‌ಡಿ ಚಿಕಿತ್ಸೆಯಲ್ಲಿ ಅದರ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆಸಿದ್ದರು. ಹೆಚ್ಚಿನ ಬಿಎಂಐ ಹೊಂದಿರುವವರಲ್ಲಿ ಇಂಡೋಲ್ ಪ್ರಮಾಣ ಕಡಿಮೆ ಇರುವುದನ್ನೂ ಸಂಶೋಧನೆಯು ಬೆಳಕಿಗೆ ತಂದಿದೆ. ಇಂಡೋಲ್ ಉರಿಯೂತವನ್ನುಂಟು ಮಾಡುವ ಶರೀರದ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಯಕೃತ್ತಿನಲ್ಲಿ ಸಂಗ್ರಹಗೊಳ್ಳುವ ಕೊಬ್ಬಿನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದೂ ಸಂಶೋಧಕರ ತಂಡವು ತಿಳಿಸಿದೆ.

ಫ್ಯಾಟಿ ಲಿವರ್ ರೋಗವನನ್ನು ತಡೆಗಟ್ಟಲು ಜಂಕ್‌ಫುಡ್‌ಗಳು ಅಥವಾ ಸಾತ್ಯುರೇಟೆಡ್ ಫ್ಯಾಟ್‌ಗಳನ್ನು ಒಳಗೊಂಡಿರುವ ಆಹಾರಗಳ ಅತಿಯಾದ ಸೇವನೆಯಿಂದ ದೂರವಿರಬೇಕು. ಏಕೆಂದರೆ ಈ ಆಹಾರಗಳು ವಿಭಜನೆಗೊಳ್ಳುವುದಿಲ್ಲ ಮತ್ತು ಯಕೃತ್ತಿನ ಮೇಲೆ ಸಂಗ್ರಹಗೊಳ್ಳುತ್ತವೆ. ಕ್ಯಾಬೇಜ್ ಅಥವಾ ಆ ವರ್ಗದ ತರಕಾರಿಗಳ ಸೇವನೆಯಿಂದ ಯಕೃತ್ತಿನ ಸಮಸ್ಯೆಗಳನ್ನು ಸುಲಭವಾಗಿ ತಡೆಯಬಹುದು.

Comments are closed.