ಆರೋಗ್ಯ

ಮನೆಯಲ್ಲಿ ಇದರ ಹೊಗೆ ಹಾಕುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ಮಾಯ

Pinterest LinkedIn Tumblr

ಈ ವಸ್ತುವಿನ ಹೊಗೆ ಹಾಕುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ಇಲ್ಲದಂತೆ ಮಾಡಬಹುದು ಅದು ಹೇಗೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಮನೆಯಲ್ಲಿ ಶಾಂತಿ ಸಮಾಧಾನ ನೆಮ್ಮದಿ ಇಲ್ಲದಂತೆ ಆಗುವುದು ವಿನಾಕಾರಣ ಜಗಳ ಕಲಹ ಇಂತಹ ಸಮಸ್ಯೆಯನ್ನು ಪರಿಹರಿಸಲು ಮನೆಯಲ್ಲಿ ಪಾಸಿಟಿವ್ ಎನರ್ಜಿ ಬೇಕಾಗುತ್ತದೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಮನೆಯಲ್ಲಿ ಕಷ್ಟಗಳು ದುಃಖಗಳು ನೆಮ್ಮದಿ ಇಲ್ಲದಂತೆ ಆಗುತ್ತದೆ ಹಾಗಾಗಿ ದೇವಸ್ಥಾನಕ್ಕೆ ಹೋಗಿ ಬಂದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲ ಅಂದರೆ ಹೀಗೆ ಮಾಡುವುದು ಸೂಕ್ತ ಎನ್ನುತ್ತಾರೆ ಪಂಡಿತರು.

ಮನೆಯಲ್ಲಿ ಅಥವಾ ಕೆಲಸ ಮಾಡುವಂತ ಕಚೇರಿಯಲ್ಲಿ ಇಂತಹ ಸಮಸ್ಯೆ ಬಂದಾಗ ಇದಕ್ಕೆ ಕಾರಣ ಏನು ಎನ್ನುವುದು ತಿಳಿಯುವುದಿಲ್ಲ ಇದೇ ಕಾರಣ ಎಂದು ಹೇಳಲಿಕ್ಕೆ ಆಗದಿದ್ದರೂ ಯಾವುದೋ ನಕಾರಾತ್ಮಕ ಶಕ್ತಿ ಕಚೇರಿಯಲ್ಲಿ ಇದೆ ಎನ್ನಲಾಗುತ್ತದೆ ಸುಖ ಸುಮ್ಮನೆ ಬೇಡದ ಪ್ರಭಾವ ನಮ್ಮನ್ನು ಆಳಲಿಕ್ಕೆ ಆರಂಭ ಆಗಿಬಿಡುತ್ತದೆ. ಮನೆಯಲ್ಲಿ ಇರುವ ಕರ್ಟನ್ ಬಟ್ಟೆಗಳು ಹಾಗೂ ಜನರಲ್ಲಿಯೂ ಈ ಋಣಾತ್ಮಕ ಶಕ್ತಿ ಅಡಗಿ ಕುಳಿತಿರಬಹುದು ಅದು ಹೇಗೆ ಏಕೆ ಬರುತ್ತದೆ ಎನ್ನುವ ಕಾರಣ ಹುಡುಕಲು ಆಗುವುದಿಲ್ಲ ಆದರೆ ಮನೆಯಲ್ಲಿ ಸೇರಿಕೊಂಡ ಬೇಡದ ಪ್ರಭಾವಗಳನ್ನು ಆಗಾಗ ತೆಗೆದು ಹಾಕಬೇಕು ಹಾಗಾದರೆ ಮಾತ್ರ ಮನೆ ಮಂದಿ ಸಾಮರಸ್ಯ ದಿಂದ ಬಾಳುವುದು ಸಾಧ್ಯ.

ಮನೆಯಲ್ಲಿನ ಕೆಟ್ಟ ಲಹರಿಗಳನ್ನು ಹಾಗೂ ದುಷ್ಟ ಶಕ್ತಿಗಳನ್ನು ನಿವಾರಿಸಲು ಹಲವು ಬಗೆಯ ಪ್ರಯತ್ನವನ್ನು ಮಾಡುತ್ತವೆ ಆದರೆ ಅವೆಲ್ಲಕ್ಕಿಂತ ಮಿಗಿಲಾಗಿ ಹರಳು ಉಪ್ಪಿನ ಹೊಗೆ ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಹೊಗೆಯನ್ನು ಸೃಷ್ಟಿಸಬಹುದು ಆದರೆ ಈ ಹೀಗೆ ಹಾಕುವಾಗ ತುಸು ಎಚ್ಚರ ವಹಿಸುವುದು ಅಗತ್ಯ ಹೌದು ಮನೆಯಲ್ಲಿ ಹರಳು ಉಪ್ಪಿನ ಹೊಗೆ ಹಾಕುವಾಗ ತುಂಬಾ ಎಚ್ಚರ ವಹಿಸಬೇಕು ಅದು ಹೇಗೆ ಎನ್ನುವುದನ್ನು ತಿಳಿಸುತ್ತೇವೆ ನೋಡಿ ಕೈ ಸುಡದಂತಹ ಪಾತ್ರೆ ಹಿಡಿದು ಮನೆ ಪೂರ್ತಿ ಹೀಗೆ ಆವರಿಸುವಂತೆ ಹೊಗೆ ಹಾಕಿದರೆ ಒಳಿತು ಜ್ವಾಲೆ ಹೆಚ್ಚಾಗದಂತೆ ಗಮನ ಹರಿಸಿ ಹೊಗೆಯನ್ನು ಮನೆ ತುಂಬ ಪಸರಿಸುವಂತೆ ಮಾಡಿ ನಂತರ ಹೊಗೆ ಹಾಕಿದ ಉಪ್ಪನ್ನು ಬಚ್ಚಲು ಮನೆಯಲ್ಲಿ ಹಾಕಬೇಕು ಅದನ್ನು ನಾಶ ಮಾಡುವ ಮೂಲಕ ನೆಗೆಟಿವ್ ಎನರ್ಜಿ ಹೊರಹಾಕಬೇಕು

ಈ ಪ್ರಕ್ರಿಯೆಯಿಂದ ಮನೆಯಲ್ಲಿ ಇದ್ದ ನೆಗೆಟಿವ್ ಪ್ರಭಾವ ಕಡಿಮೆ ಆಗುವ ಅಂಶ ನಿಮಗೆ ಕಂಡು ಬರುತ್ತದೆ ಈ ಮೂಲಕ ಧನಾತ್ಮಕ ಅಂಶ ನೆಲಸುತ್ತದೆ. ಗೊತ್ತಾಯಿತಲ್ಲ ಸ್ನೇಹಿತರೆ ಕೇವಲ ನಮ್ಮ ಮನೆಯಲ್ಲಿ ಸಿಗುವಂತಹ ಈ ಚಿಕ್ಕ ವಸ್ತುವಿನಿಂದ ಹೇಗೆ ನಮ್ಮ ಹಲವು ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು ಎಂಬುದನ್ನು ಇನ್ನೇಕೆ ತಡ ಕೂಡಲೇ ಈ ಪ್ರಯೋಗವನ್ನು ನಿಮ್ಮ ಮನೆಯಲ್ಲಿ ಮಾಡಿ ನೋಡಿರಿ.

Comments are closed.