ಆರೋಗ್ಯ

ನೀರು ಯಾವಾಗ, ಹೇಗೆ ಕುಡಿಯಬೇಕು ಮತ್ತು ಎಷ್ಟು ಕುಡಿಯಬೇಕು ಅನ್ನೋದು ನಿಮಗೆ ಗೋತ್ತೆ?

Pinterest LinkedIn Tumblr

ನೀರು ಆರೋಗ್ಯಕ್ಕೆ ಎಷ್ಟೆಲ್ಲ ಮುಖ್ಯವಾದ ಒಂದು ಅಂಶ ಅಲ್ವಾ ಈ ನೀರನ್ನು ಯಾವಾಗ ಹೇಗೆ ಕುಡಿಯಬೇಕು ಮತ್ತು ಎಷ್ಟು ಕುಡಿಯಬೇಕು ಅನ್ನೋದನ್ನು ಯಾರೂ ಸರಿಯಾದ ಮಾಹಿತಿಯನ್ನು ತಿಳಿದು ಕೊಂಡಿರುವುದಿಲ್ಲ ಹಾಗಾದರೆ ತಪ್ಪದೇ ಈ ದಿನದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಕೂಡ ವೀಕ್ಷಿಸಿ ನೀವು ಆರೋಗ್ಯಕರ ವಾಗಿರಬೇಕೆಂದರೆ ನೀರನ್ನು ಯಾವ ಸಮಯದಲ್ಲಿ ಹೇಗೆ ಕುಡಿಯಬೇಕು ಅನ್ನೋದನ್ನು ನಾವು ನಿಮಗೆ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತವೆ ಈ ರೀತಿ ನೀವು ಪಾಲಿಸಿದರೆ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮೊದಲಿಗೆ ಎಲ್ಲರೂ ಕೂಡ ಹೇಳುತ್ತಲೇ ಇರುತ್ತಾರೆ ದಿನಕ್ಕೆ ಎಂಟು ಲೀಟರ್ ನೀರನ್ನು ಕುಡಿಯಲೇಬೇಕು ಅಂತ ಹಾಗೆ ಹೆಚ್ಚು ನೀರನ್ನು ಕುಡಿಯುವುದರಿಂದ ಹೆಚ್ಚು ಆರೋಗ್ಯಕರ ಲಾಭವನ್ನು ಪಡೆದುಕೊಳ್ಳಬಹುದು ಅಂತ ಕೂಡ ಹೇಳುತ್ತಿರುತ್ತಾರೆ. ಆದರೆ ನೀರಿನಿಂದ ಎಷ್ಟು ಆರೋಗ್ಯಕರ ಲಾಭಗಳ ಇದೆಯೋ ಹೆಚ್ಚು ನೀರನ್ನು ಕುಡಿಯುವುದರಿಂದ ಅನಾನುಕೂಲಗಳು ಕೂಡ ಆದ್ದರಿಂದ ನೀವು ತಪ್ಪದೆ ನಮ್ಮ ಈ ಮಾಹಿತಿಯನ್ನು ತಿಳಿದು ಈ ರೀತಿ ಪಾಲಿಸಿದರೆ ಸಾಕು ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಮೊದಲಿಗೆ ನಾವು ಪ್ರತಿದಿನ ಎರಡೂವರೆಯಿಂದ ನಾಲ್ಕು ಲೀಟರ್ ನೀರನ್ನು ಕುಡಿದರೆ ಸಾಕು ಉತ್ತಮ ಆರೋಗ್ಯವನ್ನು ನಮ್ಮದಾಗಿಸಿ ಕೊಳ್ಳಬಹುದು ಯಾಕೆ ಅಂದರೆ ಇಷ್ಟು ನೀರನ್ನು ಕುಡಿದರೆ ಸಾಕು ನಮ್ಮ ರಕ್ತದ ಪ್ರಮಾಣದಲ್ಲಿ ಖನಿಜಾಂಶಗಳು ಕೂಡ ಸಮತೋಲನದಲ್ಲಿ ಇರುತ್ತದೆ ಆದರೆ ಹೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ರಕ್ತದಲ್ಲಿ ಇರುವಂತಹ ಸೋಡಿಯಂ ಅಂಶವು ಮೂತ್ರದ ಮೂಲಕ ಆಚೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಮತ್ತು ಇದರಿಂದ ಹಲವಾರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಹಾಗೆ ಯಾವ ಸಮಯದಲ್ಲಿ ನೀರನ್ನು ಕುಡಿಯಬಾರದು ಅಂತ ಹೇಳುವುದಾದರೆ ಬೆಳಿಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು ಇದರಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವು ಆಚೆ ಹೋಗು ತ್ತದೆ.

ಹೆಚ್ಚು ನೀರನ್ನು ಕುಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೆಚ್ಚು ಹೆಚ್ಚು ನೀರನ್ನು ಕುಡಿಯ ಬಾರದು ಪ್ರತಿ ಗಂಟೆಗಳಿಗೊಮ್ಮೆ ಒಂದು ಗ್ಲಾಸ್ ನೀರನ್ನು ಕುಡಿದರೆ ಸಾಕು ಆರೋಗ್ಯ ಉತ್ತಮವಾಗಿರುತ್ತದೆ ಹಾಗೇ ಸಂಜೆ ಐದು ಗಂಟೆಗಳ ನಂತರ ಆದಷ್ಟು ಕಡಿಮೆ ನೀರನ್ನು ಕುಡಿದರೆ ಇನ್ನೂ ಒಳ್ಳೆಯದು .

ಸ್ನೇಹಿತರ ಮತ್ತೊಂದು ಮುಖ್ಯವಾದ ವಿಚಾರವೇನು ಅಂದರೆ ಊಟಕ್ಕಿಂತ ಅರ್ಧ ಗಂಟೆ ಮೊದಲು ನೀರನ್ನು ಕುಡಿಯಬೇಡಿ ಹಾಗೆ ಊಟವಾದ ಬಳಿಕ ಅರ್ಧ ಗಂಟೆಗಳ ಕಾಲ ನೀರನ್ನು ಕುಡಿಯಬೇಡಿ ಈ ರೀತಿ ನೀರನ್ನು ಕುಡಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಹಾಗೂ ಉದರದಲ್ಲಿ ಉತ್ಪಾದಿಸುವಂತಹ ಕೆಲವೊಂದು ಜೀರ್ಣಕ್ರಿಯೆಗೆ ಬೇಕಾಗುವಂತಹ ಆಮ್ಲಗಳು ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಇರುವುದಕ್ಕೆ ಕಾರಣವಾಗುತ್ತದೆ.

ರಾತ್ರಿ ಮಲಗುವ ಮುನ್ನ ಸ್ವಲ್ಪವೇ ಸ್ವಲ್ಪ ನೀರನ್ನು ಕುಡಿದು ಮಲಗಬೇಕು ಹೆಚ್ಚು ನೀರನ್ನು ಕುಡಿಯಬಾರದು ಹೀಗೆ ಹೆಚ್ಚು ನೀರು ಕುಡಿದರೆ ಕಿಡ್ನಿಗಳು ಸರಿಯಾದ ಕೆಲಸವನ್ನು ನಿರ್ವಹಿಸದೆ ಇರುವುದರಿಂದ ನೀರು ಕುಡಿದರೂ ಯಾವ ಪ್ರಯೋಜನವೂ ಆಗುವುದಿಲ್ಲ. ನೀರನ್ನು ಮಣ್ಣಿನ ಲೋಟದಲ್ಲಿ ಕುಡಿಯುವುದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಇದರ ಜೊತೆಗೆ ತಾಮ್ರದ ಲೋಹದಿಂದ ಮಾಡಿರುವಂತಹ ಲೋಟಗಳಲ್ಲಿ ಅಥವಾ ಬಾಟಲಿಗಳಲ್ಲಿ ನೀರನ್ನು ಕುಡಿಯುವುದು ಇನ್ನೂ ಉತ್ತಮ.

Comments are closed.