ಕರಾವಳಿ

ಬೈಕ್ ಬ್ಯಾಟರಿ ಕಳವಿಗೆ ಬಂದು ಸಿಕ್ಕಿಬಿದ್ದ ಗಾಂಜಾ ವ್ಯಸನಿ!

Pinterest LinkedIn Tumblr

ಕುಂದಾಪುರ: ಗಾಂಜಾ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಜಾಹಿದುರ್ ಅಲಿಯಾಸ್ ಸಲ್ಮಾನ್ ಎಂಬಾತನೇ ಬಂಧಿತ ಆರೋಪಿ.

ಕುಂದಾಪುರದ ಕನ್ಯಾನ ಗ್ರಾಮದ ತೋಟಬೈಲು ಎಂಬಲ್ಲಿ ರೋಹನ್ ಎನ್ನುವರ ಗ್ಯಾರೇಜ್ ಎದುರು ನಿಲ್ಲಿಸಿದ್ದ ಬೈಕಿನ ನಾಲ್ಕು ಬ್ಯಾಟರಿ ಕಳವುವಾಗಿದ್ದು ಕಳವಾದ ಬಗ್ಗೆ ರೋಹನ್ ರವರ ಅಂಗಡಿಯ ಸಿಸಿ ಕ್ಯಾಮರ ಪುಟೇಜ್ ನೋಡಿದಾಗ ಒಬ್ಬ ವ್ಯಕ್ತಿಯು ಬ್ಯಾಟರಿ ಕಳವು ಮಾಡಿರುವುದು ಕಂಡು ಬಂದಿತ್ತು.‌ ಅಲ್ಲದೇ ಕೆಲ ದಿನದ ಬಳಿಕ ರೋಹನರವರ ಅಂಗಡಿ ಎದುರು ಓರ್ವ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು, ಆತನನ್ನು ವಿಚಾರಿಸಿದಲ್ಲಿ ಸರಿಯಾದ ಉತ್ತರ ನೀಡದೇ ಇದ್ದಾಗ ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಪಣಿರಾಜ ಅವರು ಸ್ಥಳಕ್ಕೆ ಬಂದು ಸಂಶಯಾಸ್ಪದ ವ್ಯಕ್ತಿಯನ್ನು ವಿಚಾರಿಸಿದಲ್ಲಿ ತನ್ನ ಹೆಸರು ಮುಜಾಹಿದುರ್ @ ಸಲ್ಮಾನ ಎಂದು ತಿಳಿಸಿದ್ದು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ಗಾಂಜಾ ಸೇವಿಸಿದಂತೆ ಕಂಡು ಬಂದಿದ್ದು ಅದನ್ನು ಖಚಿತ ಪಡಿಸಲು ತಜ್ಞ ಪರೀಕ್ಷೆಯ ಬಗ್ಗೆ ಮಣಿಪಾಲ ಕೆ.ಎಂ,ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ತಜ್ಞರ ಮುಂದೆ ಹಾಜರಿಪಡಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.