ಮನೋರಂಜನೆ

CAAಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ, ಹೊರಗಿನವರ ಪತ್ತೆ ಮಾಡಲು ಎನ್ ಪಿಆರ್ ಬಹುಮುಖ್ಯ: ರಜನಿಕಾಂತ್

Pinterest LinkedIn Tumblr

ಚೆನ್ನೈ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿರುವಂತೆಯೇ ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ಕುರಿತು ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಜನಿಕಾಂತ್ ಅವರು, ಸಿಎಎಯಿಂದ ಭಾರತದ ಯಾವುದೇ ಮುಸ್ಲಿಮರಿಗೂ ತೊಂದರೆಯಿಲ್ಲ. ಇದರಿಂದ ಭಯಗೊಳ್ಳುವ ಅಗತ್ಯವಿಲ್ಲ. ಕೇವಲ ಮುಸ್ಲೀಮರಷ್ಟೇ ಅಲ್ಲ ಸಿಎಎ ಯಿಂದ ಭಾರತದ ಯಾವುದೇ ಪ್ರಜೆಗೂ ಅಥವಾ ಆತನ ಹಕ್ಕೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಒಂದು ವೇಳೆ ಯಾವುದೇ ಮುಸ್ಲಿಮನಿಗೆ ಇದರಿಂದ ಧಕ್ಕೆಯಾದರೆ ಆಗ ಇದನ್ನು ವಿರೋಧಿಸುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಎನ್ ಆರ್ ಸಿ ಕುರಿತು ಮಾತನಾಡಿದ ರಜನಿಕಾಂತ್, ಎನ್ ಆರ್ ಸಿ ಕುರಿತು ಇನ್ನೂ ಸೂಕ್ತ ನಿರ್ಧಾರ ಬಂದಿಲ್ಲ. ಹೀಗಾಗಿ ಅದರ ಕುರಿತು ಈಗಲೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದು. ಇನ್ನು ಎನ್ ಪಿಆರ್ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದಾಗಿ ಹೊರಗಿನವರ ಪತ್ತೆ ಮಾಡಲು ಸಾಧ್ಯವಾಗುತ್ತದೆ. ನಮ್ಮವರಿಗೆ ಸಿಗಬೇಕಿದ್ದ ಹಕ್ಕುಗಳು ಬೇರೆಯವರ ಪಾಲಾಗುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.