ಆರೋಗ್ಯ

ಮದ್ಯಾಹ್ನ ಮಲಗುವುದು ದೇಹಕ್ಕೆ ಕೆಟ್ಟದ್ದಾ ಅಥವಾ ಒಳ್ಳೆಯದ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ.

Pinterest LinkedIn Tumblr


ನಿದ್ರೆಯನ್ನ ಎಲ್ಲರೂ ಮಾಡುತ್ತಾರೆ, ಆದರೆ ಕೆಲವರು ನಿದ್ರೆಯನ್ನ ಕೇವಲ ರಾತ್ರಿ ಮಾಡದೆ ಮದ್ಯಾಹ್ನ ಕೂಡ ಮಾಡುತ್ತಾರೆ, ಮದ್ಯಾಹ್ನ ನಿದ್ರೆ ಮಾಡುವವರನ್ನ ಸೋಂಬೇರಿಗಳು ಮತ್ತು ಆಲಸಿಗಳು ಎಂದು ಕರೆಯುತ್ತಾರೆ. ಹೌದು ಮದ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು ಸಹಜ, ಆದರೆ ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಜನರಿಗೆ ಮದ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ರೆ ಮಾಡಲು ಸಮಯ ಸಿಗುತ್ತಿಲ್ಲ. ಇನ್ನು ನಮ್ಮ ಹಿರಿಯರು ಯಾವಾಗಲು ಮದ್ಯಾಹ್ನ ನಿದ್ರೆಯನ್ನ ಮಾಡುತ್ತಾರೆ ಮತ್ತು ನಾವು ಅವರನ್ನ ನೋಡಿ ಅವರಿಗೆ ಬೈಯ್ಯುತ್ತೇವೆ ನಿದ್ರೆ ಮಾಡಬೇಡಿ ಎಂದು ಆದರೆ ಮದ್ಯಾಹ್ನ ಮಲಗುವುದರಿಂದ ಆಗುವ ಲಾಭಗಳನ್ನ ತಿಳಿದರೆ ನೀವು ಶಾಕ್ ಆಗುತ್ತೀರಿ. ಹೌದು ಸ್ನೇಹಿತರೆ ನಮ್ಮ ದೇಹದ ಆಯಾಸವನ್ನ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ಪ್ರತಿಯೊಬ್ಬ ಮಾನವ ಕೂಡ ದಿನದಲ್ಲಿ ಎಂಟು ಘಂಟೆ ನಿದ್ರೆಯನ್ನ ಮಾಡಲೇಬೇಕು ಇಲ್ಲವಾದರೆ ಅವನಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಮದ್ಯಾಹ್ನ ಮಲಗುವುದರಿಂದ ಏನಾಗುತ್ತದೆ ಮತ್ತು ಮದ್ಯಾಹ್ನ ಮಲಗುವುದು ದೇಹಕ್ಕೆ ಕೆಟ್ಟದ್ದಾ ಅಥವಾ ಒಳ್ಳೆಯದ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮದ್ಯಾಹ್ನ ಸಮಯದಲ್ಲಿ ಅರ್ಧ ಘಂಟೆ ನಿದ್ರೆ ಮಾಡುವುದರಿಂದ ನಮ್ಮ ದೇಹ ತುಂಬಾ ಆಕ್ಟಿವ್ ಆಗುತ್ತದೆ ಮತ್ತು ಮೈಂಡ್ ಫ್ರೆಶ್ ಆಗುತ್ತದೆ, ಇನ್ನು ಮದ್ಯಾಹ್ನ ಮಲಗುವುದರಿಂದ ಹಾರ್ಟ್ ಅಟ್ಯಾಕ್ ಕಡಿಮೆ ಆಗುತ್ತದೆ ಮತ್ತು 60 ವರ್ಷ ಮೇಲ್ಪಟ್ಟವರು ಮದ್ಯಾಹ್ನ ಅರ್ಧ ಘಂಟೆ ಮಲಗುವುದರಿಂದ ಅವರು ಉಳಿದವರಿಗಿಂತ ಆಕ್ಟಿವ್ ಆಗಿರುತ್ತಾರೆ.

ಈಗ ಕಾಲದಲ್ಲಿ ಜನರು ಸರಿಯಾದ ನಿದ್ರೆ ಮಾಡದೆ ಇರುವ ಕಾರಣ ಹೃದಯಾಘಾತದ ಸಮಸ್ಯೆಗಳು ಹೆಚ್ಚಾಗಿವೆ, ಆದರೆ ಹಿಂದಿನ ಕಾಲದ ಜನರು ಎರಡು ಹೊತ್ತು ನಿದ್ರೆ ಮಾಡುತ್ತಿದ್ದ ಕಾರಣ ಅವರಿಗೆ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳು ಬರುತ್ತಿರಲಿಲ್ಲ. ಇನ್ನು ಮದ್ಯಾಹ್ನ ಮಲಗುವುದರಿಂದ ಜನರ ಬುದ್ದಿವಂತಿಕೆ ಹೆಚ್ಚಾಗುತ್ತದೆ, ಇನ್ನು ವ್ಯಾಪಾರ ವ್ಯವಹಾರ ಮಾಡುವವರು ಮದ್ಯಾಹ್ನ ಅರ್ಧ ಘಂಟೆ ಮಲಗುವುದರ ಅವರ ದೇಹ ಆಕ್ಟಿವ್ ಆಗುವುದರ ಜೊತೆಗೆ 40% ಹೃದಯಾಘಾತ ಕಡಿಮೆ ಆಗುತ್ತದೆ. ಇನ್ನು ದಿನಾಲೂ ಮದ್ಯಾಹ್ನ ಮಲಗಲಿಕ್ಕೆ ಆಗದೆ ಇದ್ದರೆ ವಾರದಲ್ಲಿ ಮೂರೂ ಭಾರಿಯಾದರು ಮದ್ಯಾಹ್ನ ಮಲಗಿದರೆ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಬರುವುದಿಲ್ಲ, ಹಾಗೂ ರಕ್ತದ ಒತ್ತಡ ಕಡಿಮೆ ಆಗುತ್ತದೆ.

ಮದ್ಯಾಹ್ನ ಒಂದೂವರೆ ಗಂಟೆಗೂ ಜಾಸ್ತಿ ಮಲಗಿದರೆ ನಿಮ್ಮ ದೇಹಕ್ಕೆ ತುಂಬಾ ಆರಾಮ ಸಿಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ, ಮದ್ಯಾಹ್ನ ನಿದ್ರೆ ಮಾಡಿದರೆ ಮನುಷ್ಯನಲ್ಲಿ ಇರುವ ಜಾಗೂರುಕತೆ ಜಾಸ್ತಿ ಆಗುತ್ತದೆ ಎಂದು ಅಮೇರಿಕಾ ತನ್ನ ಅಧ್ಯಯನದಲ್ಲಿ ತಿಳಿಸಿದೆ. ಮದ್ಯಾಹ್ನ ಮಲಗುವವರಲ್ಲಿ ಸೃಜನ ಶೀಲತೆ ಹೆಚ್ಚುತ್ತದೆ ಮತ್ತು ಜ್ಞಾಪಕ ಶಕ್ತಿ , ಇಚ್ಚಾಶಕ್ತಿ ಹೆಚ್ಚಾಗಿರುತ್ತದೆ, ಹೌದು ಸ್ನೇಹಿತರೆ ಮದ್ಯಾಹ್ನ ಮಲಗುವುದರಿಂದ ನಮ್ಮ ದೇಹಕ್ಕೆ ತುಂಬಾ ಲಾಭಗಳಿವೆ ಮತ್ತು ನೀವು ಮದ್ಯಾಹ್ನ ಮಲಗುವುದನ್ನ ಅಭ್ಯಾಸ ಮಾಡಿಕೊಂಡು ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಿ ಮತ್ತು ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Comments are closed.