ಆರೋಗ್ಯ

ಈ ಗಿಡದ ರಸವನ್ನು ಗರ್ಭಿಣಿಯರು ದಿನನಿತ್ಯ ಸೇವನೆ ಮಾಡಿದರೆ ದೇಹಕ್ಕೆ ಒಳ್ಳೆಯದು

Pinterest LinkedIn Tumblr

ನಿಮ್ಮ ಮಕ್ಕಳ ಸ್ಮರಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಔಷಧಿ ಗುಣಗಳನ್ನು ಸಹ ಹೊಂದಿದೆ. ಸ್ನೇಹಿತರೆ ಒಂದೆಲಗ ಅಥವಾ ಬ್ರಾಹ್ಮಿ ಗಿಡ ಅಂತ ಇದನ್ನು ಕರೆಯುತ್ತಾರೆ ಈ ಸೊಪ್ಪು ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ವಿಟಮಿನ್ ಗಳನ್ನು ಇದು ನಮಗೆ ನೀಡುತ್ತದೆ ಆಯುರ್ವೇದದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಔಷಧಿಗಳು ಮತ್ತು ಎಣ್ಣೆ ಪದಾರ್ಥಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಹಳ್ಳಿಗಳ ತೋಟಗಳಲ್ಲಿ ಅಡಿಕೆ ಮರದ ಬುಡದಲ್ಲಿ ಕಳೆಯಂತೆ ಬೆಳೆಯುವ ಈ ಗಿಡಗಳು ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುತ್ತವೆ. ಇದರ ಬಗ್ಗೆ ಗೊತ್ತಿರೋರು ನಗರಗಳಲ್ಲಿ ಇದನ್ನು ಕುಂಡಲಗಳಲ್ಲಿ ಬೆಳೆಸುತ್ತಾರೆ. ಈ ಒಂದೆಲಗ ಗಿಡದ ರಸವನ್ನು ಗರ್ಭಿಣಿಯರು ದಿನನಿತ್ಯ ಸೇವನೆ ಮಾಡಿದರೆ ದೇಹಕ್ಕೆ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ ಹುಟ್ಟುವ ಮಗುವಿನ ಆರೋಗ್ಯದಲ್ಲಿ ನಾವು ಚನ್ನಾಗಿ ಬದಲಾವಣೆಯನ್ನು ಕಾಣಬಹುದು

ಇದು ಮಾನವನ ಶರೀರಕ್ಕೆ ತಂಪು ನೀಡುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೆಮ್ಮು ಉಸಿರಾಟದ ತೊಂದರೆ ಇರುವವರಿಗೆ ಈ ಒಂದೆಲಗ ರಸದ ಜೊತೆ ಜೇನುತುಪ್ಪವನ್ನು ಬೆರಸಿ ಸೇವಿಸಿದರೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಆದಷ್ಟು ಬೇಗ ಕಡಿಮೆಯಾಗುತ್ತದೆ. ಒಂದೆಲಗ ಸೇವನೆ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ಮಾತ್ರವಲ್ಲದೆ ಸ್ಮರಣಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಎಂಬ ನಂಬಿಕೆ ಆಗಿನ ಕಾಲದಿಂದಲೂ ಇದೆ. ಇದನ್ನು ನಿತ್ಯ ತಿಂದರೆ ಬುದ್ದಿ ಚುರುಕಾಗುತ್ತದೆ ಎಂದು ಹಿರಿಯರು ಹಿಂದಿನಿಂದಲೂ ನಂಬಿದ್ದಾರೆ. ಅಷ್ಟೇ ಅಲ್ಲದೆ ವೈದ್ಯಕೀಯ ಲೋಕದಲ್ಲು ಸತ್ಯ ಅಂತ ಇದು ಸಾಬೀತಾಗಿದೆ.

ಮಕ್ಕಳಿಗೆ ಬೆಳಿಗ್ಗೆ ಎದ್ದಾಗ 2 ಎಲೆಗಳನ್ನು ತಿನ್ನುವುದಕ್ಕೆ ಕೊಡಬೇಕು ಇದರಿಂದ ಮಕ್ಕಳ ಮೆದುಳಿನ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ. ಪ್ರತಿದಿನ 4 ಅಥವಾ 5 ಒಂದೆಲಗ ಎಲೆಗಳನ್ನು ಸೇವಿಸಿದರೆ ಮಾತಿನ ಉಗ್ಗುವಿಕೆ ಇಲ್ಲದೆ ಹೋಗುತ್ತದೆ. ಮಲಬದ್ಧತೆಯಿಂದ ಬಳಲುವವರು ಒಂದೆಲಗ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಅವರು ಮುಕ್ತಿಯನ್ನು ಪಡೆಯಬಹುದು.

ಒಂದೆಲಗದ ರಸಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವ ಮೂಲಕ ಕೂದಲು ಮೃದುವಾಗಿ ಮತ್ತು ಹೊಳ ಪಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಈ ಒಂದೆಲಗ ತೈಲ ಮಾರುಕಟ್ಟೆಯಲ್ಲಿ ಸಿಗುವು ದರಿಂದ ಸುಲಭವಾಗಿ ಅದನ್ನು ತೆಗೆದುಕೊಂಡು ಹಚ್ಚಿಕೊಳ್ಳಬಹುದು.

ನಾವು ಪ್ರತಿನಿತ್ಯ ನಾಲ್ಕೈದು ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮಲ್ಲಿರುವ ರಕ್ತಹೀನತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ನಮ್ಮಲ್ಲಿರುವ ದೇಹದ ಉಷ್ಣತೆಯನ್ನು ನಿವಾರಿಸುವುದಕ್ಕೆ ಒಂದೆಲಗ ಒಂದು ಅದ್ಭುತವಾದ ಮನೆ ಔಷಧಿಯಾಗಿದೆ. ನರರೋಗಿಗಳಿಗೆ ಈ ಒಂದು ಎಲೆ ದಿವ್ಯ ಔಷಧಿ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ. ಹಾಲಿನಲ್ಲಿ ಜೀರಿಗೆ ಪುಡಿಯನ್ನು ಹಾಕಿ ಒಣಗಿಸಿದ ಒಂದೆಲಗ ಪುಡಿಯನ್ನು ಬೆರಸಿ ಸೇವನೆ ಮಾಡುವುದರಿಂದ ಬಾಣಂತಿಯರಲ್ಲಿ ಎದೆಹಾಲು ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ ಇದು ವೈಜ್ಞಾನಿಕವಾಗಿ ಸಾಭೀತಾಗಿದೆ

Comments are closed.