ಆರೋಗ್ಯ

ಸ್ಥೂಲ ದೇಹ, ರಕ್ತದೊತ್ತಡ ಸಮಸ್ಯೆ ಇರುವವರು ತಮ್ಮ ಆಹಾರಗಳಲ್ಲಿ ಮೊಳಕೆ ಕಾಳು ಸೇರಿಸಿದರೆ ಆರೋಗ್ಯ ಉತ್ತಮ

Pinterest LinkedIn Tumblr

ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ದೇಹಕ್ಕೆ ದುಪ್ಪಟ್ಟು ಲಾಭ. ನಾವು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಹಲವಾರು ಬಗೆಯ ತರಕಾರಿಗಳನ್ನು ಸೇವಿಸುತ್ತೇವೆ ಅದರಲ್ಲಿ ಮೊಳಕೆ ಕಟ್ಟಿದ ಕಾಲುಗಳು ಸಹ ನಮ್ಮ ದೇಹಕ್ಕೆ ತುಂಬಾ ಉತ್ತಮ ಶಕ್ತಿಯನ್ನು ನೀಡುತ್ತವೆ.

ಬೇಳೆ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವ ಪದ್ದತಿ ತುಂಬಾ ಅನಾಧಿಕಾಲದಿಂದ ಬರುತ್ತಿದೆ ಆದರೆ ಇತ್ತೀಚೀನ ದಿನಗಳಲ್ಲಿ ತಂತ್ರ ಜ್ಞಾನ ಬೆಳೆಯುತ್ತ ಹೊಸ ಹೊಸ ಆಹಾರ ಪಧಾರ್ಥಗಳೂ ಬರುವುದರಿಂದ ಇವುಗಳನ್ನು ಮರೆಯುತ್ತಿದ್ದಾರೆ. ಈ ಮೊಳಕೆ ಕಾಳು ಗಳನ್ನು ಈಗಲೂ ಹಳ್ಳಿಗಳ ಕಡೆ ಬಳಸುತ್ತಾರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತದೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್ ಗಳು ಸಿಗುತ್ತವೆ ವಿಟಮಿನ್ ಕೆ ವಿಟಮಿನ್ ಸಿ ವಿಟಮಿನ್ ಬಿ ಅಂತಹ ವಿಟಮಿನ್ ಗಳು ಸಿಗುತ್ತವೆ ಈ ವಿಟಮಿನ್ ಗಳು ನಮ್ಮ ದೇಹದ ಜೀರ್ಣಶಕ್ತಿಯಲ್ಲಿ ಮತ್ತು ಪಚನ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

ಮೊಳಕೆಯಲ್ಲಿ ಇರುವ ಹಲವಾರು ವಿಟಮಿನ್ ಗಳು ಮತ್ತು ಮಿನರಲ್ಸ್ ಗಳು ಪ್ರೊಟೀನ್ ಜೊತೆಗೂಡಿ ಉತ್ತಮ ಪ್ರೊಟೀನ್ ಬಿಡುಗಡೆ ಮಾಡುತ್ತದೆ ಇದರಿಂದ ದೇಹದ ಜೀವಕೋಶಗಳ ರಿಪೇರಿ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಮೊಳಕೆ ಬರಿಸುವುದರಿಂದ ಬೆಳೆಕಾಳುಗಳ ಪೋಷಕಾಂಶಗಳು ದ್ವಿಗುಣವಾಗುತ್ತವೆ. ಅಂದರೆ ಎರಡರಷ್ಟು ಹೆಚ್ಚಾಗುತ್ತವೆ. ಸ್ತೂಲ ದೇಹದವರು ಪತ್ತೆ ಆಹಾರ ಸೇವಿಸುವಾಗ ಮೊಳಕೆ ಕಾಳುಗಳನ್ನು ಸೇರಿಸಿಕೊಂಡರೆ ತೂಕ ಇಳಿಸುವುದರ ಜೊತೆಗೆ ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ ಈ ಮೊಳಕೆ ಕಾಳುಗಳಲ್ಲಿ ಸೋಡಿಯಮ್ ಕಡಿಮೆ ಇರುವ ಕಾರಣ ಅಧಿಕ ರಕ್ತದೊತ್ತಡ ತೊಂದರೆ ಇರುವವರು ಸಹ ತಮ್ಮ ಆಹಾರ ಕ್ರಮಗಳಲ್ಲಿ ಮೊಳಕೆ ಕಾಳುಗಳನ್ನು ಅಳವಡಿಸಿಕೊಳ್ಳಬಹುದು. ಬೆಳೆಯುವ ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯಕ್ಕೆ ಮೊಳಕೆ ಕಾಳುಗಳು ತುಂಬಾ ಪ್ರಯೋಜನಕಾರಿ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಗಳು ಬೇಗ ಹಾಳಾಗುವುದರಿಂದ ತಾಜಾ ಇರುವಾಗಲೇ ಇದನ್ನು ಸೇವಿಸುವುದು ಉತ್ತಮ ಮತ್ತು ಮೊಳಕೆ ಕಾಳುಗಳನ್ನು ತಯಾರಿಸಲು ಬಳಸುವ ನೀರು ಶುಧ್ದವಾಗಿರಬೇಕು

ಇಲ್ಲದಿದ್ದರೆ ಕೆಟ್ಟ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರಿ ಅನಾರೋಗ್ಯವನ್ನು ಉಂಟು ಮಾಡುತ್ತವೆ ಮೊಳಕೆ ಕಾಳುಗಳನ್ನು ಸಲಾಡ್ ರೂಪದಲ್ಲಿ ನಾವು ಬಳಸಬಹುದು ಯಾವ ಆಹಾರದಲ್ಲಿ ಬೇಕಾದರೂ ಇದನ್ನು ಬಳಸಬಹುದು ಸತ್ವಿಕ ಆಹಾರ ಸೇವನೆ ಉತ್ತಮ ಆರೋಗ್ಯದ ಹಾದಿ ಅಂತ ಹೇಳುತ್ತಾರೆ ಇಷ್ಟಕ್ಕೂ ಮೊಳಕೆ ಕಾಳುಗಳನ್ನು ಯಾವಾಗ ಸೇವಿಸಬೇಕು ಈ ಕಾಳುಗಳನ್ನು ಅತಿ ಕೊಬ್ಬು ಇರುವ ವ್ಯಕ್ತಿಗಳು ಅಥವಾ ದಪ್ಪ ಶರೀರವನ್ನು ಹೊಂದಿರುವ ವ್ಯಕ್ತಿಗಳು ರಾತ್ರಿಯ ಸಮಯದಲ್ಲಿ ಸೇವಿಸಬೇಕು ಕಡಿಮೆ ತೂಕದ ವ್ಯಕ್ತಿಗಳು ಬೆಳಿಗ್ಗಿನ ಸಮಯದಲ್ಲಿ ಸೇವಿಸಬೇಕು ಇದು ಉತ್ತಮವಾಗಿ ಅವರ ದೇಹದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಆಹಾರ ಕ್ರಮದಲ್ಲಿ ನಾವು ಹೆಚ್ಚಾಗಿ ಮೊಳಕೆ ಕಾಲುಗಳನ್ನು ಸೇವಿಸುವುದು ಉತ್ತಮ.

Comments are closed.