ಆರೋಗ್ಯ

ಹೇರ್ ಆಯಿಲ್ ಜೊತೆಗೆ ಕೋಕನಟ್ ಶೆಲ್ ನ ಚಾರ್ಕೋಲ್ ಬಳಸುವುದರ ಪ್ರಯೋಜನಗಳು .

Pinterest LinkedIn Tumblr

ತೆಂಗಿನಕಾಯಿ ಬಳಸಿದ ನಂತರ ಅದರ ಚಿಪ್ಪನ್ನು ಬಿಸಾಕಿ ಬಿಡುತ್ತೇವೆ ತೆಂಗಿನ ಕಾಯಿನಿಂದ ಯಾವುದೇ ಉಪಯೋಗವಿಲ್ಲ ಎಂದು ಭಾವಿಸುತ್ತೇವೆ. ಬನ್ನಿ ಈಗ ತೆಂಗಿನ ಕಾಯಿ ಚಿಪ್ಪಿನಿಂದ ಆಗುವ ಉಪಯೋಗ, ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ತೆಂಗಿನಕಾಯಿ ಚಿಪ್ಪಿನಲ್ಲಿ ಯಾವ ರೀತಿ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೀವು ಕೇಳಿರ ಬಹುದು ತೆಂಗಿನಕಾಯಿ ಮರದಲ್ಲಿ ಯಾವುದು ವೇಸ್ಟ್ ಆಗುವುದಿಲ್ಲ ಹೌದು ಅದು ನಿಜವೇ. ತೆಂಗಿನಕಾಯಿ ಮರದಲ್ಲಿ ಸಿಗುವ ಎಲ್ಲಾ ನೈಸರ್ಗಿಕ ವಸ್ತುಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಅದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರಲಿಲ್ಲ ಅಷ್ಟೇ ಹಾಗಾದರೆ ಬನ್ನಿ ತೆಂಗಿನಕಾಯಿ ಚಿಪ್ಪಿನಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಇದರಿಂದ ಏನೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಅಂತ ತೆಂಗಿನಕಾಯಿ ಚಿಪ್ಪಿನಲ್ಲಿ ಔಷಧಿ ಗುಣಗಳಿವೆ

ಇದರಲ್ಲಿ ತಾಮ್ರದ ಅಂಶಗಳಿರುತ್ತವೆ ನಿಮ್ಮ ಮನೆಯಲ್ಲಿ ಕುಡಿಯುವ ನೀರಿನ ಹಂಡೆಯಲ್ಲಿ ಒಂದು ತೆಂಗಿನ ಚಿಪ್ಪನ್ನು ಹಾಕುವುದರಿಂದ ಆ ನೀರು ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ ನಿಮಗೆಲ್ಲಾ ತಿಳಿದಂತೆ ತಾಮ್ರದ ಅಂಶದಿಂದ ನೀರು ನೈಸರ್ಗಿಕವಾಗಿ ಶುದ್ಧವಾಗುತ್ತದೆ ಹಾಗಾಗಿ ನಮ್ಮ ಹಿರಿಯರು ಹೇಳುತ್ತಿದ್ದರು ತಾಮ್ರದ ಹಂಡೆಯಲ್ಲಿ ಅಥವಾ ತಾಮ್ರದ ಲೋಟದಲ್ಲಿ ಯಾವಾಗಲೂ ನೀರು ಕುಡಿಯಬೇಕು ಎಂದು ನಮ್ಮ ಪೂರ್ವಜರು ತಾಮ್ರದ ತಂಬಿಗೆ ಹಾಗೂ ಲೋಟದಲ್ಲಿ ನೀರು ಕುಡಿದು ಆರೋಗ್ಯವಂತರಾಗಿದ್ದರು. ತೆಂಗಿನ ಚಿಪ್ಪಿನ ಬಗ್ಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ ತೆಂಗಿನಕಾಯಿ ಚಿಪ್ಪು ತುಂಬಾ ಗಟ್ಟಿ ಪದಾರ್ಥ ಇದನ್ನು ಸುಟ್ಟು ಚಾರ್ಕೋಲ್ ಅಥವಾ ಮಸಿಯನ್ನು ತಯಾರಿಸಿಕೊಂಡು ನಮ್ಮ ಚರ್ಮ ಮತ್ತು ತಲೆಯ ಕೂದಲಿನ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬಹುದು ಎಲ್ಲರಿಗೂ ನಗು ಮುಖದ ಮೃದು ಚರ್ಮ ಹಾಗೂ ತಲೆಕೂದಲು ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ ನೀವು ಬಳಸುವ ಹೇರ್ ಆಯಿಲ್ ಜೊತೆಗೆ ತೆಂಗಿನ ಚಿಪ್ಪಿನ ಮಸಿಯನ್ನು ಅಂದರೆ ಕೋಕನಟ್ ಶೆಲ್ ನ ಚಾರ್ಕೋಲ್ ಮಿಕ್ಸ್ ಮಾಡಿಕೊಳ್ಳಿ

ಆ ಹೇರ್ ಆಯಿಲ್ ನಿಂದ ಆಗಾಗ ಮಸಾಜ್ ಮಾಡಿಕೊಳ್ಳಿ ಇದರಿಂದ ತಲೆಯಲ್ಲಿರುವ ತಲೆಹೊಟ್ಟು, ಕೆರೆತ ಎಲ್ಲಾ ಕಡಿಮೆಯಾಗಿ ಕ್ರಮೇಣ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಬಿಳಿ ಕೂದಲಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಆದ್ದರಿಂದ ಇದು ಕೂದಲು ಸಂರಕ್ಷಣೆ ಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಇನ್ನು ತೆಂಗಿನಕಾಯಿಯ ಚಿಪ್ಪಿನ ಮಸಿಯನ್ನು ಅಥವಾ ಕೋಕನಟ್ ಶೆಲ್ ನ ಚಾರ್ಕೋಲ್ ಅನ್ನು ಫೇಸ್ ಪ್ಯಾಕ್ ರೀತಿ ಮಾಡಿ ಇಟ್ಟುಕೊಳ್ಳಬಹುದು ನೀವು ಬಳಸುವ ಯಾವುದೇ ಫೇಸ್ ಕ್ರೀಮ್ ಗೆ ಸ್ವಲ್ಪ ನೀವು ತಯಾರಿಸಿ ಇಟ್ಟು ಕೊಂಡಿ ರುವ ಚಾರ್ಕೋಲ್ ಮಸಿಯನ್ನು ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ವಾರದಲ್ಲಿ ಒಂದು ದಿನ ಬಳಸುವ ಅಭ್ಯಾಸ ಉತ್ತಮವಾಗಿದೆ. ಆಯಿಲ್ ಮತ್ತು ಡ್ರೈ ಸ್ಕಿನ್ ಇರುವವರು ಕೆಲವೊಂದು ಹೆಚ್ಚಿನ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಳ್ಳಬೇಕಾಗುತ್ತದೆ ಅಂದರೆ ಆಯಿಲ್ ಸ್ಕಿನ್ ಇರುವವರು ಈ ಚಾರ್ಕೋಲ್‍ಗೆ ಸ್ವಲ್ಪ ಮುಲ್ತಾನಿಮಿಟ್ಟಿ ಮತ್ತು ರೋಜ್ ವಾಟರ್ ಮಿಕ್ಸ್ ಮಾಡಿಕೊಳ್ಳಬೇಕು ಹಾಗೂ ಡ್ರೈ ಸ್ಕಿನ್ ಇರುವವರು ಕೋಕನಟ್ ಶೆಲ್ ಚಾರ್ಕೋಲ್ ಜೊತೆಗೆ ಸ್ವಲ್ಪ ಜೇನುತುಪ್ಪ ಹಾಗೂ ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಒಂದು ಫೇಸ್ ಪ್ಯಾಕ್ ಅನ್ನು ತಯಾರಿ ಮಾಡಿಕೊಳ್ಳಬೇಕು ಈ ರೀತಿ ತಯಾರಿಸಿದ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಒಂದು ದಿನ ಬಳಕೆ ಮಾಡುವುದು

ಉತ್ತಮ ಇದರಿಂದ ಚರ್ಮದಲ್ಲಿರುವ ಚಿಕ್ಕ ಚಿಕ್ಕ ರಂಧ್ರಗಳು ಮುಚ್ಚಿಹೋಗುತ್ತವೆ, ಕಪ್ಪುಕಲೆಗಳು, ಬಿಳಿಯ ಕಲೆಗಳು ಮಾಯವಾಗುತ್ತವೆ ಹಾಗೂ ಚರ್ಮದಲ್ಲಿ ಹೊಳಪನ್ನು ಹೆಚ್ಚಿಸಲು ಈ ಕೋಕನಟ್ ಶೆಲ್ ಚಾರ್ಕೋಲ್ ಉಪಯೋಗವಾಗುತ್ತದೆ. ವಾರದಲ್ಲಿ ಒಂದು ದಿನ ಮೊಸರಿನೊಂದಿಗೆ ಇದರ ಮಿಶ್ರಣವನ್ನು ತಯಾರು ಮಾಡಿ ಫೇಸ್ ಪ್ಯಾಕ್ ತಯಾರು ಮಾಡಿ ಹಚ್ಚಿ ಕೊಳ್ಳುವುದರಿಂದ ಚರ್ಮದಲ್ಲಿ ಕಾಂತಿ ಹೆಚ್ಚಾಗುತ್ತದೆ. ಮುಖದಲ್ಲಿರುವ ಮೊಡವೆ ಕಲೆಗಳನ್ನು ಕಡಿಮೆಮಾಡುತ್ತದೆ ತೆಂಗಿನಕಾಯಿ ಚಿಪ್ಪಿನ ಚಾರ್ಕೋಲ್ ಹಲ್ಲನ್ನು ಬಿಳುಪು ಮಾಡಲು ಸಾಧ್ಯ. ನಾವು ಉಪಯೋಗಿಸುವ ಟೂತ್ ಪೇಸ್ಟ್ ಜೊತೆಗೆ ಮಿಕ್ಸ್ ಮಾಡಿ ಬಳಸಬಹುದು ಅಥವಾ ತೆಂಗಿನಕಾಯಿ ಚಿಪ್ಪಿನ ಚಾರ್ಕೋಲ್ ಅನ್ನು ಟೂತ್ ಪೌಡರ್ ಮಾಡಿಟ್ಟುಕೊಂಡು ಉಪಯೋಗಿಸ ಬಹುದು ಆಗಾಗ ಚಾರ್ಕೋಲ್ ನಿಂದ ನಾವು ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡರೆ ಹಲ್ಲಿನಲ್ಲಿರುವ ನೋವು, ಒಸಡು ಬಾದೆ ಇದು ಕಡಿಮೆ ಮಾಡುತ್ತದೆ. ಹಲ್ಲಿನಲ್ಲಿ ನೈಸರ್ಗಿಕವಾಗಿ ಹೊಳಪು ಹೆಚ್ಚುತ್ತದೆ ಅದಕ್ಕೆ ಇದನ್ನು ಟೀಥ್‍ವೈಟ್ನರ್ ಎಂದು ಕರೆಯುತ್ತಾರೆ. ಜೊತೆಗೆ ವಸಡಿನಲ್ಲಿ ಉಂಟಾಗುವ ರ ಕ್ತಸ್ರಾವವನ್ನು ಕಡಿಮೆ ಮಾಡುತ್ತದೆ

ಇನ್ನು ಸೋರಿಯಾಸಿಸ್ ಹಾಗೂ ಎಕ್ಸಿಮಾದಂತಹ ಚರ್ಮ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ತೆಂಗಿನಕಾಯಿ ಚಿಪ್ಪಿನ ಮುಸಿ ಯಲ್ಲಿದೆ. ವಾರದಲ್ಲಿ ಒಂದು ದಿನ ಇದರ ಮಿಶ್ರಣವನ್ನು ತೆಂಗಿನಕಾಯಿ ಎಣ್ಣೆ ಅಥವಾ ಎಳ್ಳೆಣ್ಣೆ ಜೊತೆಗೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮ ಕಾಯಿಲೆಗಳು ಬೇಗನೆ ಕಡಿಮೆ ಆಗುತ್ತದೆ ಜೊತೆಗೆ ತಲೆಗೆ ಬಳಸುವ ಶಾಂಪು ನೊಂದಿಗೆ ಜೇನುತುಪ್ಪ ಮಿಕ್ಸ್ ಮಾಡಿ ಬಳಸು ವುದರಿಂದ ನೈಸರ್ಗಿಕವಾಗಿ ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ನಮ್ಮ ತಲೆಯಲ್ಲಿರುವ ತಲೆಹೊಟ್ಟು, ಕಡಿತ, ಕೆರೆತದಂತಹ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಇನ್ನು ಈಗಿನ ಕಾಲದ ಕಡಿಮೆ ವಯಸ್ಸಿನ ಯುವಕ-ಯುವತಿಯರಲ್ಲಿ ಬಿಳಿಕೂದಲಿನ ಸಮಸ್ಯೆ ಇರುತ್ತದೆ ಅಂತಹವರಿಗೆ ಇದೊಂದು ಉತ್ತಮ  ಔಷಧಿಯಾಗಿ ಅಥವಾ ಮನೆಮದ್ದಾಗಿ ಕೆಲಸ ಮಾಡುತ್ತದೆ ನೀವು ಬಳಸುವ ಹೇರ್ ಆಯಿಲ್ ಅಥವಾ ಶಾಂಪೂವಿನ ಜೊತೆಗೆ ಮಿಕ್ಸ್ ಮಾಡಿ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಕೋಕನಟ್ ಶೆಲ್ ಚಾರ್ಕೋಲ್ ಮಸಿಯನ್ನು ಹೇರ್ ಪ್ಯಾಕ್ ರೀತಿ ಬಳಸಬಹುದು ಅರ್ಧ ಕಪ್ ಮೊಸರು ಅಥವಾ ನಿಮಗೆ ಬೇಕಾದಷ್ಟು ಮೊಸರಿನ ಜೊತೆ 4 ಚಮಚ ಇದರ ಮಿಶ್ರಣವನ್ನು ಸೇರಿಸಿಕೊಳ್ಳಿ ಇದನ್ನು ಹೇರ್ ಪ್ಯಾಕ್ ರೀತಿಯಲ್ಲಿ ಬಳಸಬಹುದು ಮತ್ತು ನಿಮ್ಮ ಕೂದಲಿನ ರಕ್ಷಣೆ ಮೊದಲಿ ಗಿಂತಲೂ ಹೆಚ್ಚಿನ ಪರಿಣಾಮಕಾರಿಯಾಗಿ ಕಾಣಿಸುತ್ತದೆ.

ಇದಿಷ್ಟು ತೆಂಗಿನಕಾಯಿ ಚಿಪ್ಪಿನ ಮಸಿ ಅಥವಾ ಚಾರ್ಕೋಲ್ ನಿಂದ ಆಗುವ ಲಾಭಗಳು. ತೆಂಗಿನಕಾಯಿ ಚಿಪ್ಪನ್ನು ಬರೀ ಇಷ್ಟಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ ಇದನ್ನು ಸೋಪಿನ ರೀತಿಯು ಬಳಸಬಹುದು ಹಾಗೂ ಕೆಲವೊಂದು ಪ್ರಾಣಿಗಳಿಗೆ ಅನಿಮೇಟೆಡ್ ರೀತಿ ಬಳಕೆ ಮಾಡಿಕೊಳ್ಳಬಹುದು ಇನ್ನೊಂದು ಬಹುಮುಖ್ಯ ವಿಚಾರ ವೆಂದರೆ ಕೇರಳದಲ್ಲಿ ಇರುವವರ ತಲೆಕೂದಲು ಆರೋಗ್ಯವಾಗಿರಲು ಕಾರಣ ತೆಂಗಿನಕಾಯಿಯನ್ನು ಹಾಗೂ ಅದರ ಗುಣಗಳನ್ನು ಅವರು ಸರಿಯಾಗಿ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ ಇನ್ನುಮೇಲೆ ನಾವು ನಮ್ಮ ಮನೆಯಲ್ಲಿ ತೆಂಗಿನಕಾಯಿ ಮತ್ತು ಅದರ ಚಿಪ್ಪನ್ನು ಬಿಸಾಡುವ ಬದಲು ಅದನ್ನು ಸುಟ್ಟು ಅದರ ಮಸಿಯನ್ನು ತಯಾರಿಸಿ ಇಟ್ಟು ಕೊಳ್ಳು ವುದರಿಂದ ನಿಜಕ್ಕೂ ಬಹು ಉಪಯೋಗವಾಗಲಿದೆ ಇದರ ಉಪಯೋಗದಿಂದ ಹೇರ್ ಹೆಲ್ತ್, ಸ್ಕಿನ್ ಹೆಲ್ತ್, ಕಾಪಾಡಿ ಕೊಳ್ಳೋಣ ಅಲ್ಲವೇ

Comments are closed.