ಕರಾವಳಿ

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್‍ಸ್ ಆಂಡ್ ಡೆವೆಲಪ್ಪರ್‍ಸ್‌ನವರ ಬಹು ಅಂತಸ್ತುಗಳ ವಸತಿ ಸಮುಚ್ಚಯ ಸಾಲಿಟೇರ್ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಡಿಸೆಂಬರ್..30: ನಗರದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್‍ಸ್ ಆಂಡ್ ಡೆವೆಲಪ್ಪರ್‍ಸ್ ಸಂಸ್ಥೆಯು ನಗರದ ಉರ್ವ-ಚಿಲಿಂಬಿ ಸಮೀಪದ ಹ್ಯಾಟ್‌ಹಿಲ್‌ನಲ್ಲಿ ನಿರ್ಮಿಸಿದ ಅತ್ಯಂತ ವಿಶಿಷ್ಟವಾದ ಸಾಲಿಟೇರ್ ಬಹು ಅಂತಸ್ತುಗಳ ವಸತಿ ಸಮುಚ್ಚಯವು ರವಿವಾರ ಸಂಜೆ ಲೋಕರ್ಪಣೆಗೊಂಡಿತು.

ಸಾಲಿಟೇರ್ ನೂತನ ವಸತಿ ಸಮುಚ್ಚಯವನ್ನು ರವಿವಾರ ಸಂಜೆಯೆನೆಪೋಯ ವಿವಿಯ ಕುಲಾಧಿಪತಿ ಆಲ್‌ಹಾಜ್ ಯೆನಪೋಯ ಅಬ್ದುಲಲ್ಲ ಕುಂಞ್ಞ ಉದ್ಘಾಟಿಸಿದರು. ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಕ್ಲಬ್ ಹೌಸ್‌ನ್ನು ಲೋಕಾರ್ಪಣೆ ಗೊಳಿಸಿದರು.

ಜನಸೇವೆಯಲ್ಲಿ ತೊಡಗಿರುವ ಶ್ರೀನಾಥ್ ಹೆಬ್ಬಾರ್ ಹಲವು ಸಾಧನೆಗಳನ್ನು ದಾಖಲಿಸಿದ್ದಾರೆ. ಹ್ಯಾಟ್‌ಹಿಲ್‌ನಲ್ಲಿ ಸುಂದರ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಮಂಗಳೂರು ಬೆಳೆಯುತ್ತಿರುವುದಕ್ಕೆ ನಿದರ್ಶನವೇ ಇಂತಹ ಗಗನಚುಂಬಿ ಕಟ್ಟಡಗಳಾಗಿವೆ. ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳನ್ನು ಕಟ್ಟಡ ಹೊಂದಿದೆ ಎಂದು ಯೆನೆಪೊಯ ವಿವಿಯ ಕುಲಾಧಿಪತಿ ಯೆನಪೊಯ ಅಬ್ದುಲ್ಲಾ ಕುಂಞಿ ಶ್ಲಾಘಿಸಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಅಧ್ಯಕ್ಷ ಡಾ.ಎಂ.ಶಾಂತಾರಾಮ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್, .ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ|ಎ.ಜೆ. ಶೆಟ್ಟಿ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್.ಲೋಬೋ, ಕರ್ನಾಟಕ ಬ್ಯಾಂಕಿನ ಜಿ.ಎಂ. ಚಂದ್ರಶೇಖರ್ ರಾವ್. ಬಿ. ಮುಂತಾದವರು ಭಾಗವಹಿಸಿದ್ದರು.

ಪ್ರಸ್ತಾವನೆಗೈದ ಲ್ಯಾಂಡ್‌ಟ್ರೇಡ್ಸ್ ಸಂಸ್ಥೆಯ ಪ್ರವರ್ತಕ ಕೆ.ಶ್ರೀನಾಥ್ ಹೆಬ್ಬಾರ್ ಅವರು, ಕ್ರಿಸಿಲ್ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯಿಂದ ‘7 ಸ್ಟಾರ್ಸ್’ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್, ಕ್ರೆಡಾಯ್‌ನಿಂದ 50ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ ‘ಕೇರ್ ಅವಾರ್ಡ್ 2019’ ಪ್ರಶಸ್ತಿಯನ್ನು ಕೂಡ ಪಡೆದಿದೆ. ಆರ್ಕಿಟೆಕ್ಟ್ ಪೀಟರ್ ಮಸ್ಕರೇನಸ್ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ ಎಂದರು.

ಆಕರ್ಷಕ ಪರಿಸರ : ಆಕರ್ಷಕ ಮತ್ತು ಸುಂದರವಾದ ಪರಿಸರದಲ್ಲಿ ಸಾಲಿಟೇರ್ ನಿರ್ಮಾಣವಾಗಿದೆ. ಪರಿಸರ ಸ್ನೇಹಿ ಜೀವನ ಶೈಲಿಗೆ ಪೂರಕವಾದ ವಾತಾವರಣವನ್ನು ಸಾಲಿಟೇರ್ ಹೊಂದಿದೆ. ನಿಸರ್ಗದತ್ತ ಸಂಪನ್ಮೂಲಗಳನ್ನು ರಕ್ಷಿಸಲಾಗುತ್ತಿದೆ. ಮಳೆನೀರು ಕೊಯ್ಲು ಇಲ್ಲಿನ ಪ್ರಮುಖ ಯೋಜನೆಗಳಲ್ಲೊಂದಾಗಿದೆ.

ಲ್ಯಾಂಡ್‌ಟ್ರೇಡ್ಸ್ ಪರಂಪರೆ : 1992 ರಲ್ಲಿ ಕೆ.ಶ್ರೀನಾಥ್ ಹೆಬ್ಬಾರ್ ಅವರು ಸ್ಥಾಪಿಸಿದ ಲ್ಯಾಂಡ್‌ಟ್ರೇಡ್ಸ್ ಸಂಸ್ಥೆಯು ಈಗಾಗಲೇ ವಸತಿ ಯುತ ಮತ್ತು ವಾಣಿಜ್ಯ ಸಂಬಂಧಿತ 37 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ.

ಐ.ಎಸ್.ಓ.9001:2015 ಮಾನ್ಯತೆಯ ಜತೆಗೆ ಕ್ರಿಸಿಲ್‌ನ ಗರಿಷ್ಠ ರೇಟಿಂಗ್ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ಏಕೈಕ ಬಿಲ್ಡರ್‍ಸ್ ಸಂಸ್ಥೆಯಾಗಿದೆ.

ಲ್ಯಾಂಡ್‌ಟ್ರೇಡ್ಸ್‌ನಿಂದ ಸುರತ್ಕಲ್ ಲೈಟ್‌ಹೌಸ್ ಬಳಿ ಎಮೆರಾಲ್ಡ್ ಬೇ ಎಂಬ ಸರ್ವಸಜ್ಜಿತ ನಿವೇಶನಗಳು, ದೇರೆಬೈಲ್ ಚರ್ಚ್ ಬಳಿ ಹ್ಯಾಬಿಟಟ್ 154 ಎಂಬ ಬಜೆಟ್ ಅಪಾರ್ಟ್‌ಮೆಂಟ್‌ಗಳು, ಬಲ್ಮಠದಲ್ಲಿ ಮೈಲ್‌ಸ್ಟೋನ್-25 ಎಂಬ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತದೆ.

32 ಅಂತಸ್ತುಗಳಲ್ಲಿ 143 ಅಪಾರ್ಟ್‌ಮೆಂಟ್ : ಲ್ಯಾಂಡ್‌ಟ್ರೇಡ್ಸ್‌ನ ಸಾಲಿಟೇರ್ನಲ್ಲಿ ವಾಸ್ತುವೈಭವ ಸಹಿತವಾದ 32 ಅಂತಸ್ತುಗಳಲ್ಲಿ 2-3-4- ಬಿ‌ಎಚ್‌ಕೆಗಳ ಮತ್ತು 5 ಬಿ‌ಎಚ್.ಕೆ. ಡೂಪ್ಲೆಕ್ಸ್‌ಗಳ 143 ಅಪಾರ್ಟ್‌ಮೆಂಟ್‌ಗಳಿವೆ ಎಂದು ಲ್ಯಾಂಡ್‌ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರು ಮಾಹಿತಿ ನೀಡಿದರು.

ಸಂಪೂರ್ಣ ದಾಖಲೆಗಳು:  ಸಾಲಿಟೇರ್ ವಸತಿ ಸಮುಚ್ಚಯದ ಎಲ್ಲ ದಾಖಲೆ ಪತ್ರಗಳು ಲ್ಯಾಂಡ್‌ಟ್ರೇಡ್ಸ್‌ಗೆ ವಿವಿಧ ಇಲಾಖೆಗಳು ನೀಡಿವೆ. ನಗರ ಪಾಲಿಕೆಯಿಂದ ಕಟ್ಟಡ ಪ್ರವೇಶಪತ್ರ, ಡೋರ್ ನಂಬರ್, ಅಗ್ನಿಶಾಮಕ ದಳದಿಂದ ಅಚಿತಿಮ ಅಂಗೀಕೃತ ಪತ್ರ, ಮಾಲಿನ್ಯರಹಿತ ಪರಿಸರ ಅಚಿತಿಮ ಪ್ರಮಾಣ ಪತ್ರ, ವಿದ್ಯುತ್, ನೀರಿನ ಸಂಪರ್ಕ ಇತ್ಯಾದಿ ಎಲ್ಲ ಅಧಿಕೃತ ಮತ್ತು ಅವಶ್ಯಕ ದಾಖಲೆಗಳನ್ನು ಪಡೆದು ಗ್ರಾಹಕರಿಗೆ ವಿಶ್ವಾಸದಿಂದ ಅರ್ಪಿಸುತ್ತಿದ್ದೇವೆ ಎಂದು ಶ್ರೀನಾಥ್ ಹೆಬ್ಬಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾರ್ಥಿಸಿದರು. ಲ್ಯಾಂಡ್‌ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲ್ಯಾಂಡ್ ಟ್ರೇಡ್ಸ್‌ನ ಕ್ರಿಸ್ಟಿನಾ ವಂದಿಸಿದರು. ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್ : www.landtrades.in ಕ್ಲಿಕ್ ಮಾಡಿ.

Comments are closed.