ಆರೋಗ್ಯ

ಸದಾ ಸುಂದರವಾಗಿ ಕಾಣಬೇಕೆ ಈ ರೀತಿ ಮಾಡಿ

Pinterest LinkedIn Tumblr

ಹೌದು. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ ಪ್ರಯೋಗಿಸುತ್ತೀವಿ. ಆದರೆ ಅದರಿಂದ ಮುಖದ ಕಾಂತಿ ಬರಬಹುದು, ಬಾರದೇ ಇರಬಹುದು. ಇದಕ್ಕಾಗಿ ನೀವು ಈ ಪುರಾತನ ಮಾರ್ಗವನ್ನು ಅನುಸರಿಸಿದರೆ ಸಾಕು, ನಿಮ್ಮ ಹೊಕ್ಕಳಿನ ಮೂಲಕವೇ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು.

ಬೇವಿನ ಎಣ್ಣೆ : ನಿಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತಿದ್ದಲ್ಲಿ ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತದೆ.

ತುಪ್ಪ: ನಯವಾದ, ಕೋಮಲವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಹೊಕ್ಕಳಿಗೆ ತುಪ್ಪ ಹಚ್ಚಿ ಸಾಕು. ತುಪ್ಪದಂತೆಯೇ ನಯವಾದ ಕೋಮಲವಾದ ಚರ್ಮ ನೀವು ಪಡೆಯಬಹುದು.

ಬಾದಾಮಿ ಎಣ್ಣೆ : ನಿಮ್ಮ ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿ. ಹೀಗೆ ಕೆಲ ದಿನಗಳ ಕಾಲ ಇದನ್ನು ಅಭ್ಯಾಸ ಮಾಡಿ ನೋಡಿ. ನಿಮ್ಮ ಮುಖ ಫಳಫಳನೆ ಹೊಳೆಯುತ್ತದೆ.

ಸಾಸಿವೆ ಎಣ್ಣೆ: ಆಗಾಗ ತುಟಿ ಒಡೆಯುವ ಸಮಸ್ಯೆ ಕಾಣುತ್ತಿದ್ದರೆ ಯಾವುದೇ ರೀತಿಯ ಜೆಲ್ ಗಳನ್ನೂ ಹಚ್ಚದೆ, ಹೊಕ್ಕಳಿಗೆ ಸಾಸಿವೆ ಎಣ್ಣೆ ಹಚ್ಚಿ ಸಾಕು. ಈ ಸಮಸ್ಯೆಯಿಂದ ಖಂಡಿತ ಪರಿಹಾರ ಸಿಗುತ್ತದೆ.

ನಿಂಬೆ ರಸ: ಹೊಕ್ಕಳಿಗೆ ನಿಂಬೆ ರಸ ಸವರಿದರೆ ಹೇರಳವಾದ ಲಾಭ ನಿಮ್ಮದಾಗುತ್ತದೆ. ದೇಹ ತಂಪಾಗುತ್ತದೆ. ಜೊತೆಗೆ ನಿಮ್ಮ ಮುಖದ ಕಲೆಗಳು ಮಾಯವಾಗುತ್ತದೆ.

Comments are closed.