ಮಂಗಳೂರು, ಡಿಸೆಂಬರ್.26: ಒಂಭತ್ತು ವರ್ಷಗಳ ಬಳಿಕ ಇಂದು ಗುರುವಾರ ಕಂಕಣ ಸೂರ್ಯಗ್ರಹಣ ಆರಂಭಗೊಂಡಿದೆ. ಇಂದು ಬೆಳಗ್ಗೆ 8:04ರಿಂದ ಆರಂಭಗೊಂಡ ಸೂರ್ಯಗ್ರಹಣವನ್ನು ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಸೂರ, ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಇದನ್ನು ವೀಕ್ಷಿಸುತ್ತಿದ್ದಾರೆ.
2019ರ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದ್ದು ಖಗೋಳಸಕ್ತರ ಗಮನವೆಲ್ಲಾ ಸೂರ್ಯ ಮೇಲಿದೆ. ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಕ್ಕೆ ಅಡ್ಡಿಯಾಗುವುದನ್ನು ಗ್ರಹಣ ಎನ್ನಲಾಗುತ್ತದೆ. ಆದರೆ ಈ ಭಾರಿಯ ಸೂರ್ಯಗ್ರಹಣದಲ್ಲಿ ಚಂದ್ರ, ಶೇ 90 ರಷ್ಟು ಅಂದರೆ ಸೂರ್ಯನ ಸುತ್ತಲಿನ ಭಾಗ ಉಂಗುರದಂತೆ ಕಾಣಿಸಿಕೊಳ್ಳುತ್ತದೆ. ಇದನ್ನೇ ಕಂಕಣ ಸೂರ್ಯಗ್ರಹಣ ಎನ್ನಲಾಗುತ್ತದೆ.
ಮಂಗಳೂರಿನಲ್ಲಿ ಸರ ಸುಮಾರು 9:24ರಿಂದ 9:25ರ ಅವಧಿಯಲ್ಲಿ ಕಂಕಣ ರೂಪದಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ. ಸೇರಿದ್ದ ಜನರು ಹರ್ಷೋದ್ಘಾರದೊಂದಿಗೆ ಸೂರ್ಯ- ಚಂದ್ರನ ನೆರಳು ಬೆಳಕಿನ ಆಟವನ್ನು ಆಸ್ವಾದಿಸಿದರು. ಕಂಕಣ ಸೂರ್ಯಗ್ರಹಣ ನಡೆಯುತ್ತಿದ್ದಂತೆ ಹವಾಮಾನದಲ್ಲೂ ಬದಲಾವಣೆ ಕಂಡು ಬಂತು. ನೆರಳಿನ ಜತೆ ತಂಪಾದ ವಾತಾವರಣದಲ್ಲಿ ಖಗೋಳದ ಕೌತುಕ ವೀಕ್ಷಕರಿಗೆ ಮುದ ನೀಡಿತು. ಮಂಗಳೂರಿನಲ್ಲಿ ಶೇ.93ರಷ್ಟು ಪ್ರಮಾಣದಲ್ಲಿ ಕಂಕಣ ರೂಪ ಕಂಡುಬಂದಿದ್ದರೆ, ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇರುವ ಕಾರಣ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಕಂಕಣ ಆಕಾರದಲ್ಲಿ ಸೂರ್ಯ ಗೋಚರವಾಗಿದೆ. ಇಂದು ಬೆಳಗ್ಗೆ 8.03 ಆರಂಭಗೊಂಡಿರುವ ಕಂಕಣ ಸೂರ್ಯಗ್ರಹಣ ಅಪರಾಹ್ನ 11.11ಕ್ಕೆ ಮೋಕ್ಷ ಕಾಣಲಿದೆ.







Comments are closed.