ಮಂಗಳೂರು, ಡಿಸೆಂಬರ್.26 ಒಂಭತ್ತು ವರ್ಷಗಳ ಬಳಿಕ ಇಂದು ಬೆಳಗ್ಗೆ ಆರಂಭಗೊಂಡ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ನಗರದ ಪಾದುವ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.ಟೆಲಿಸ್ಕೋಪ್ ಮೂಲಕ ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗ್ರಹಣವನ್ನು ವೀಕ್ಷಿಸುತ್ತಿದ್ದಾರೆ.
ಇಂದು ಬೆಳಗ್ಗೆ 8:04ರಿಂದ ಆರಂಭಗೊಂಡ ಕಂಕಣ ಸೂರ್ಯಗ್ರಹಣವನ್ನು ಮಕ್ಕಳು ವಿಶೇಷ ಕನ್ನಡಕದ ಮೂಲಕ ವೀಕ್ಷಿಸುತ್ತಿದ್ದಾರೆ. ಉಳಿದಂತೆ ಪಣಂಬೂರು ಬೀಚ್‌ನಲ್ಲೂ ಕೆಲವರು ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಸೂರ, ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಇದನ್ನು ವೀಕ್ಷಿಸುತ್ತಿದ್ದಾರೆ.
ಇಂದು ಬೆಳಗ್ಗೆ 8.03 ಆರಂಭಗೊಂಡಿರುವ ಕಂಕಣ ಸೂರ್ಯಗ್ರಹಣ ಅಪರಾಹ್ನ 11.11ಕ್ಕೆ ಮೋಕ್ಷ ಕಾಣಲಿದೆ.











Comments are closed.