ಆರೋಗ್ಯ

ಅಪೌಷ್ಟಿಕತೆಯ ಕೊರತೆಗೆ ಮೂಲ ಕಾರಣ ಬಲ್ಲಿರಾ..?

Pinterest LinkedIn Tumblr

ಕಳಪೆ ಗುಣಮಟ್ಟದ ಆಹಾರವನ್ನು ಹೊಂದುವುದಕ್ಕೆ ಅಪೌಷ್ಟಿಕತೆ ಎನ್ನಲಾಗುವುದು. ನಾವು ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದ ಖನಿಜಗಳು, ಜೀವಸತ್ವಗಳು, ಪ್ರೋಟೀನ್‍ಗಳು ಇಲ್ಲದೆ ಹೋದರೆ ಆಗ ಪೌಷ್ಟಿಕತೆಯ ಕೊರತೆ ಅಥವಾ ಅಪೌಷ್ಟಿಕತೆ ಎಂದು ಕರೆಸಿಕೊಳ್ಳುವುದು.

ಅಪೌಷ್ಟಿಕತೆಯು ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಸಾಕಷ್ಟು ಸಮಸ್ಯೆಯನ್ನು ಒಡ್ಡುವುದು. ವಿಶ್ವ ಆರೋಗ್ಯ ಸಂಸ್ಥೆಯು ಹೇಳಿರುವ ಪ್ರಕಾರ ವಿಶ್ವದಾದ್ಯಂತ 462 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅರಿಯಾದ ಪೋಷಣೆ ಹಾಗೂ ಪೋಷಕಾಂಶವಿಲ್ಲದೆ 159 ಮಿಲಿಯನ್ ಮಕ್ಕಳು ಬಳಲಿಕೆಗೆ ಒಳಗಾಗಿದ್ದಾರೆ. ಪೌಷ್ಟಿಕಾಂಶದ ಅಗತ್ಯತೆ ಎಲ್ಲರಿಗೂ ಪ್ರಮುಖವಾದ ಸಂಗತಿ. ಅಪೌಷ್ಟಿಕತೆಯ ಸಮಸ್ಯೆಗೆ ಕಾರಣಗಳು, ಅಪೌಷ್ಟಿಕತೆಯ ಲಕ್ಷಣಗಳು ಹಾಗೂ ಅದಕ್ಕೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ತಿಳಿಯೋಣ.

ಭಾರತದಲ್ಲಿ ಅಪೌಷ್ಟಿಕತೆ : ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮಂಡಿಸಿದ ಅಪೌಷ್ಟಿಕತೆಯ ಫಲಿತಾಂಶವು ಆಶ್ಚರ್ಯವನ್ನು ಉಂಟುಮಾಡುವಂತಿದೆ. ಭಾರತದಲ್ಲಿ ಜನಿಸುತ್ತಿರುವ ಮಕ್ಕಳಲ್ಲಿ ಶೇ. 15ರಷ್ಟು ಮಕ್ಕಳಲ್ಲಿ ಕಡಿಮೆ ಅನುಪಾತದ ತೂಕ, ಶೇ.32ರಷ್ಟು ಮಕ್ಕಳಲ್ಲಿ ರಕ್ತಹೀನತೆ, ಶೇ.11ರಷ್ಟು ಮಕ್ಕಳಲ್ಲಿ ಅತಿಯಾದ ತೂಕ ಇರುವ ಅಂಕಿವಂಶವನ್ನು ತಿಳಿಸಿದೆ.

ಭಾರತದಲ್ಲಿ ಪ್ರಸ್ತುತ ಜನರಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದಂತೆ ಶೇ. 8.9 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಶೇ. 9.6 ರಷ್ಟು ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆ ಇದೆ ಎಂದು ಅಧ್ಯಯನಗಳು ಸಾಬೀತು ಪಡಿಸಿದೆ.

ಅಪೌಷ್ಟಿಕತೆ ಉಂಟಾಗಲು ಕಾರಣಗಳು :
#ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಪೌಷ್ಟಿಕತೆಗೆ ಮುಖ್ಯ ಕಾರಣ. ಕೆಲವರಿಗೆ ಊಟದ ಪೂರೈಕೆ ಇಲ್ಲದೆ ಇರುವುದರಿಂದ ಕಡಿಮೆ ಆಹಾರ ಸೇವಿಸಬಹುದು. ಇನ್ನೂ ಕೆಲವರು ಡಯಟ್ ಅಥವಾ ದೇಹ ದಂಡನೆಗಾಗಿ ಕಡಿಮೆ ಆಹಾರ ಸೇವಿಸುವರು. ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ.

#ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯಗತ್ಯವಾಗಿರುತ್ತದೆ. ಯಾವ ಮಹಿಳೆಗೆ ಎದೆ ಹಾಲಿನ ಕೊರತೆ ಉಂಟಾಗುವುದೋ ಅವರ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುವುದು. ನಂತರ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

#ಮಾನಸಿಕ ಆರೋಗ್ಯ ಸರಿಯಾಗಿ ಇಲ್ಲದಿದ್ದರೆ ಊಟವನ್ನು ತ್ಯಜಿಸುವರು. ಯಾವುದು ತಿನ್ನಬೇಕು ಎನ್ನುವ ಗೊಂದಲ ಇರುವುದು. ಖಿನ್ನತೆ ಅನುಭವಿಸುವವರು, ಬುದ್ಧಿಮಾಂದ್ಯತೆ ಇರುವವರು, ಸ್ಕಿಜೋಫ್ರೇನಿಯಾ, ಅನೋರೆಕ್ಸಿಯಾ, ನರ್ಮೋಸಾ ಮತ್ತು ಬುಲಿಮಿಯಾಗಳಂತಹ ಆರೋಗ್ಯ ಸಮಸ್ಯೆ ಇರುವವರಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುವುದು.

# ಊಟ-ತಿಂಡಿ-ಪಾನೀಯಗಳ ಬಗ್ಗೆ ಆಸಕ್ತಿ ಇಲ್ಲದೆ ಇರುವುದು. ದಣಿವು ಮತ್ತು ಕಿರಿಕಿರಿ ಉಂಟಾಗುವುದು. ಯಾವುದೇ ಸಂಗತಿಯ ಬಗ್ಗೆ ಹೆಚ್ಚಿನ ಬುದ್ಧಿಯನ್ನು ಕೇಂದ್ರೀಕರಿಸಲು ಕಷ್ಟವಾಗುವುದು. ದೇಹದಲ್ಲಿ ಕೊಬ್ಬು, ಸ್ನಾಯು ಹಾಗೂ ದ್ರವ್ಯರಾಶಿಗಳ ಕೊರತೆ ಉಂಟಾಗುವುದು. ಪದೇ ಪದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಅದು ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುವುದು.

ಅಪೌಷ್ಟಿಕತೆಗೆ ಚಿಕಿತ್ಸೆ:
# ನಿಮ್ಮ ವಯಸ್ಸು, ಎತ್ತರ ಹಾಗೂ ತೂಕವನ್ನು ಮೊದಲು ಪರಿಶೀಲಿಸಿ. ನಿಮ್ಮ ತೂಕ ನಷ್ಟಕ್ಕೆ ಹಾಗೂ ಪೌಷ್ಟಿಕಾಂಶದ ಕೊರತೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು. ಆರೋಗ್ಯ ಸುಧಾರಣೆಗೆ ಪ್ರಯತ್ನಿಸಿ.
# ತಪಾಸಣೆಯ ಮೂಲಕ ನಿಮ್ಮ ಆರೋಗ್ಯದಲ್ಲಿ ಯಾವ ಬಗೆಯ ಕೊರತೆ ಉಂಟಾಗಿದೆ ಎನ್ನುವುದನ್ನು ತಿಳಿದು, ಅದರ ಆರೈಕೆ ಅಥವಾ ದೇಹದಲ್ಲಿ ಆ ಅಂಶವನ್ನು ಹೆಚ್ಚಿಸುವ ಸೂಕ್ತ ಆಹಾರ ಹಾಗೂ ಔಷಧವನ್ನು ಸ್ವೀಕರಿಸಿ. ವೈದ್ಯರಲ್ಲಿ ಯಾವ ಬಗೆಯ ಪೌಷ್ಟಿಕಾಂಶದ ಮೊರೆ ಹೋಗಬೇಕು ಎನ್ನುವುದನ್ನು ತಿಳಿಯಿರಿ.

# ನೀವು ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡರೂ ಆಂತರಿಕವಾಗಿ ದೇಹದಲ್ಲಿ ಕೆಲವು ಸಮಸ್ಯೆಗಳು ಉಂಟಾಗಿರುವ ಸಾಧ್ಯತೆಗಳು ಇರುತ್ತವೆ. ಅವು ನಿಧಾನವಾಗಿ ಹೆಚ್ಚುತ್ತಾ, ದೊಡ್ಡ ಆರೋಗ್ಯ ಸಮಸ್ಯೆಗಳಾಗಬಹುದು. ಹಾಗಾಗಿ ಆಗಾಗ ಆರೋಗ್ಯದ ಬಗ್ಗೆ ಸೂಕ್ತ ಚಿಕಿತ್ಸೆ ನಡೆಸುವುದು ಸೂಕ್ತ. ಅದರಿಂದ ಸಮಸ್ಯೆಗಳಿಗೆ ತಕ್ಷಣ ಚಿಕಿತ್ಸೆ

 

 

Comments are closed.