ರಾಷ್ಟ್ರೀಯ

ಅಯೋಧ್ಯೆಯ ಸರಯು ನದಿಯಲ್ಲಿ ಲಕ್ಷಾಂತರ ಭಕ್ತರಿಂದ ಪುಣ್ಯ ಸ್ನಾನ

Pinterest LinkedIn Tumblr

ಅಯೋಧ್ಯೆ: ಇಂದು ಕಾರ್ತಿಕ ಪೂರ್ಣಿಮಾ. ಕಾರ್ತಿಕ ಮಾಸದ ಈ ಪವಿತ್ರ ದಿನವನ್ನು ದೇಶಾದ್ಯಂತ ಲಕ್ಷಾಂತರ ಭಕ್ತರು, ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಿದ್ದಾರೆ. ಅಯೋಧ್ಯೆಯ ಸರಯು ನದಿಯಲ್ಲಿ ಇಂದು ಕಾರ್ತಿಕ ಪೂರ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿ ಸಮೀಪದ ದೇಗುಲದಲ್ಲಿ ವಿಶೇಷ ಪೂಜೆ ಸಮರ್ಪಿಸಿದರು.

ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಂದು ಬೆಳಗ್ಗೆಯೇ ಅಯೋಧ್ಯೆಗೆ ಆಗಮಿಸಿ ಸರಯೂ ನದಿಯಲ್ಲಿ ಮಿಂದೆದ್ದರು. ಭಕ್ತರು ಜೈ ಶ್ರೀರಾಮ್, ಜೈ ಸೀತಾರಾಮ್ ಘೋಷಣೆಗಳನ್ನು ಮೊಳಗಿಸಿ ಭಕ್ತಿ ಭಾವ ಸಲ್ಲಿಸಿದರು.

ಕಾರ್ತಿಕ ಪೂರ್ಣಿಮೆ ಅಂಗವಾಗಿ ಅಯೋಧ್ಯೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಭಕ್ತರು ಕಾರ್ತಿಕ ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.

Comments are closed.