ರಾಷ್ಟ್ರೀಯ

ಮೀನು ತುಂಬಿದ್ದ ಲಾರಿ ಪಲ್ಟಿ- ರಾಶಿ ರಾಶಿ ಮೀನಿಗಾಗಿ ಜನರಿಂದ ಟ್ರಾಫಿಕ್ ಜಾಮ್

Pinterest LinkedIn Tumblr

ಕಾನ್ಪುರದಲ್ಲಿ ಮೀನು ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗಿ ನೀರು ಹಾಗು ರಾಶಿ ರಾಶಿ ಮೀನುಗಳು ಕೆಳಕ್ಕೆ ಬಿದ್ದಿದ್ರಿಂದ ರಸ್ತೆಯೇ ಕೆರೆಯಂತಾಗಿತ್ತು. ರಸ್ತೆಯಲ್ಲಿ ಬಿದ್ದಿದ್ದ ಮೀನುಗಳನ್ನು ಬಾಚಿಕೊಳ್ಳಲು ದಾರಿಹೋಕರು ಸ್ಪರ್ಧೆಗಿಳಿದಿದ್ದರು.

ಮೀನು ಹೆಕ್ಕಲು ನೂರಾರು ಜನರು ಜಮಾಯಿಸಿದ್ದರಿಂದ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಅವರನ್ನೆಲ್ಲ ಸ್ಥಳದಿಂದ ಚದುರಿಸುವಷ್ಟರಲ್ಲಿ ಪೊಲೀಸರೇ ಹೈರಾಣಾಗಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ಗನ್ ಫ್ಯಾಕ್ಟರಿ ಬಳಿ ರಸ್ತೆಗೆ ಉರುಳಿ ಬಿದ್ದಿದೆ. ಹೆಚ್ಚು ನೀರಿಲ್ಲದೇ ಇದ್ದಿದ್ರಿಂದ ಸಾವಿರಾರು ಮೀನುಗಳು ಒದ್ದಾಡಲಾರಂಭಿಸಿದ್ವು.

https://www.facebook.com/TimesofIndia/videos/1341434636016965/

ಕಚೇರಿಗೆ ಹೊರಟಿದ್ದವರು ಕೂಡ ಮೀನಿನ ರಾಶಿ ಕಂಡಿದ್ದೇ ತಡ ತಮ್ಮ ಕೆಲಸ ಮರೆತು, ಅವುಗಳನ್ನು ಹೆಕ್ಕಲು ಧಾವಿಸಿದ್ದಾರೆ. ಮೀನುಗಳನ್ನು ಲೂಟಿ ಮಾಡುವ ಸಲುವಾಗಿಯೇ ಸಾಕಷ್ಟು ಕೋಲಾಹಲ ಉಂಟಾಯಿತು. ಕಂಟ್ರೋಲ್ ರೂಂನ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತಲುಪಿ ಮೀನುಗಳನ್ನು ದೋಚುತ್ತಿದ್ದ ಗುಂಪನ್ನು ಓಡಿಸಿ ಟ್ರಾಫಿಕ್ ಜಾಮ್ ತೆರವುಗೊಳಿಸಿದರು.

Comments are closed.