ಆರೋಗ್ಯ

ಮೂಲಂಗಿ ಮತ್ತು ಪುದೀನಾಗಳ ಬಳಕೆಯಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ ಸಿಗುವುದು ಬಲ್ಲಿರಾ..?

Pinterest LinkedIn Tumblr

♦ ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ.
♦ ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ.
♦ ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ.
♦ ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ.
♦ ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ.
ಹೀಗೆ ವಾರಕ್ಕೊಮ್ಮೆ ಮಾಡಿ.

ಮೂಲಂಗಿ ಅನೇಕ ಖಾಯಿಲೆಗಳನ್ನು ಗುಣ ಮಾಡುತ್ತೆ
ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

– ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
– ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
– ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.
ಎಲ್ಲದಕ್ಕೂ ಮಿತಿ ಇರಲಿ ಹೆಚ್ಚಾದರೆ ಅಮೃತವು ವಿಷವಾಗುವುದು

Comments are closed.