ಕರಾವಳಿ

ಹಿಂಸೆಯಿಂದ ದೂರವಿರುವವನೇ ಹಿಂದು : ನಿತ್ಯಾನಂದ ವಿವೇಕ ವಂಶಿ

Pinterest LinkedIn Tumblr

ಮಂಗಳೂರು / ಉಳ್ಳಾಲ : ಯಾವಾತನು ಹಿಂಸೆಯಿಂದ ದೂರವಿರುತ್ತಾನೋ‌ ಆತನೇ ನಿಜವಾದ ‘ಹಿಂದು’ಎಂದುಕರೆಯಲ್ಪಡುತ್ತಾನೆ, ಇದು ಜಾತಿಧರ್ಮವನ್ನು ಮೀರಿ ನಿಲ್ಲುವ ಪದ‌ ಎಂದು ಮಂಡ್ಯದ ವಿವೇಕ ಶಿಕ್ಷಣ ವಾಹಿನಿ ಸಂಸ್ಥೆಯ ಸ್ಥಾಪಕ,  ರಾಷ್ಟ್ರೀಯಚಿಂತಕ, ಯುವ ಬರಹಗಾರ, ನಿತ್ಯಾನಂದ ವಿವೇಕ ವಂಶಿ ಹೇಳಿದರು.

ಅವರು ಉಳ್ಳಾಲದ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ‌ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಮ್ಮದೇಶದಲ್ಲಿ‌ಇಲ್ಲಿಯಜನರನ್ನುಜಾತಿಯ‌ಆಧಾರದಲ್ಲಿ ಗುರುತಿಸಿದರೆ ವಿದೇಶದಲ್ಲಿ ಮಾತ್ರ ನಮ್ಮನ್ನು ಹಿಂದುಸ್ಥಾನದವನೆಂದೇಗುರುತಿಸುವರೇ ಹೊರತು ನಮ್ಮ ನಮ್ಮಜಾತಿಧರ್ಮದಿಂದಲ್ಲ‌ಎಂಬುವುದನ್ನು ನಾವು ಅರಿತುಕೊಳ್ಳಬೇಕು ಎನ್ನುವುದನ್ನು ನೆನಪಿಸಿದರು.

ನವರಾತ್ರಿಯಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆಯ ವಿಗ್ರಹವನ್ನು ಸಮುದ್ರಕ್ಕೆ ವಿಸರ್ಜಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿ ಆಚರಣೆಗಳೆಲ್ಲವೂ ಸಮುದ್ರದ ನೀರಿನಂತೆ ವಿಶ್ವವ್ಯಾಪಿಯಾಗಿ ಪಸರಿಸಲಿ ಎನ್ನುವುದೇ‌ಇದರ ಸಂಕೇತ‌ಎಂದು ನುಡಿದರು.

ವೈವಿಧ್ಯಮಯವಾದಟ್ಯಾಬ್ಲೊ, ಹುಲಿವೇಷ, ಯಕ್ಷಗಾನ,ಸಹಿತ ವರ್ಣರಂಜಿತ ಮೆರವಣಿಗೆಯಲ್ಲಿ ಶಾರದಾ ಮಾತೆಯನ್ನು ಉಳ್ಳಾಲದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಸಹಸ್ರಾರು ಸಂಖ್ಯೆಯಲ್ಲಿರಸ್ತೆಯುದ್ದಕ್ಕೂಜನರುಕಾದು ನಿಂತು ಮೆರವಣಿಗೆ ವೀಕ್ಷಿಸಿದರು.

ಉತ್ಸವ ಸಮಿತಿಯ‌ಅಧ್ಯಕ್ಷ ಶ್ರೀಕರ ಕಿಣಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ವಿಜಯ ಉಳ್ಳಾಲ್, ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಸುದೇಶ್ ಮರೋಳಿ,ಯಶವಂತ‌ಅಮೀನ್, ಸ್ಥಾಯಿ ಸಮಿತಿಯ ಸದಸ್ಯರುಹಾಗೂಶಾರದಾ ಮಹಿಳಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು . ಪಶುಪತಿ ಉಳ್ಳಾಲ ವಂದನಾರ್ಪಣೆಗೈದರು.

Comments are closed.