ಆರೋಗ್ಯ

ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾಕೆ ದನದ ಹಾಲು ನೀಡಬಾರದು?

Pinterest LinkedIn Tumblr

ದನದ ಹಾಲನ್ನು ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಕೆ ಮಾಡುತ್ತೇವೆ. ಆದರೆ ಇದನ್ನು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಬಾರದು. ಎನ್ನುತ್ತಾರೆ. ಇದರಿಂದ ಮಕ್ಕಳ ಕಿಡ್ನಿ ಮೇಲೆ ಪ್ರೆಶರ್‌ ಬೀಳುತ್ತದೆ ಅಲ್ಲದೆ ಹಲವಾರು ಸಮಸ್ಯೆಗಳು ಕಾಡುತ್ತವೆ.

ಮಕ್ಕಳಿಗೆ ಯಾಕೆ ದನದ ಹಾಲು ನೀಡಬಾರದು?
ದನದ ಹಾಲಿನಲ್ಲಿರುವ ಎಂಜಾಯಿಮ್‌ ಅಂಶದಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ದನದ ಹಾಲಿನಲ್ಲಿರುವ ಲೆಕ್ಟೋಜ್‌ನಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತವೆ.
ದನದ ಹಾಲಿನಲ್ಲಿ ಕಡಿಮೆ ಐರನ್‌ ಇರುತ್ತದೆ. ಇದರಿಂದ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಮುಂದೆ ರಕ್ತಹೀನತೆ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಕೂಡ ಇದೆ.
ಇದರಲ್ಲಿ ಪ್ರೊಟೀನ್‌ ಅಧಿಕವಾಗಿರುತ್ತದೆ. ಇದರಿಂದ ಮಕ್ಕಳಲ್ಲಿ ಬೊಜ್ಜು ತುಂಬುವ ಸಾಧ್ಯತೆ ಇದೆ.
ದನದ ಹಾಲಿನ್ನು ಸೇವನೆ ಮಾಡುವುದರಿಂದ ಟಾಕ್ಸಿನ್‌ ಹೊರಗೆ ಬಂದು ಕಿಡ್ನಿ ಮೇಲೆ ಪ್ರೆಶರ್‌ ಬೀಳುತ್ತದೆ. ಇದರಿಂದ ಮೂತ್ರ ವಿಸರ್ಜನೆಗೆ ಸಮಸ್ಯೆ ಉಂಟಾಗುತ್ತದೆ.

Comments are closed.