ಆರೋಗ್ಯ

ಚಾಕೋಲೆಟ್ ತಿಂದರೆ ಏನಾಗುತ್ತದೆ ಗೊತ್ತಾ….?

Pinterest LinkedIn Tumblr


ಚಾಕೊಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಸಾಮಾನ್ಯವಾಗಿ ಚಿಕ್ಕಮಗುವಿನಿಂದ ಹಿಡಿದು ದೊಡ್ಡವರ ತನಕವೂ ಚಾಕೊಲೇಟ್ ಎಲ್ಲರಿಗೂ ಅಚ್ಚು- ಮೆಚ್ಚು. ಅಂತಹ ಚಾಕೊಲೇಟ್ ನನ್ನು ನೆನೆಪಿಸಿಕೊಂಡರೆನೆ ಬಾಯಲ್ಲಿ ನೀರೂರುತ್ತದೆ. ಆದರೆ ಇಂತಹ ಚಾಕೊಲೇಟ್ ನನ್ನ ತಿನ್ನುವುದಕ್ಕೆ ಜನ ಹಿಂದೆ ಮುಂದೆ ಯೋಚಿಸುತ್ತಾರೆ. ಕಾರಣ ಚಾಕೊಲೇಟ್ ನಿಂದ ಅವರ ಹಲ್ಲು ಹುಳುಕಾಗಬಹುದು ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಎಂದು ತಿನ್ನದಿರುತ್ತಾರೆ. ಆದರೀಗ ಚಾಕೊಲೇಟ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿಯೊಂದನ್ನು ಹೊಸ ಅಧ್ಯಯನ ಹೊರಹಾಕಿದೆ.

ಹೌದು ಚಾಕೊಲೇಟ್ ಸೇವಿಸುವುದರಿಂದ ಹೃದಯದ ಒತ್ತಡವು ಕಡಿಮೆಯಾಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಉರಿಯ ಸಮಸ್ಯೆಯನ್ನು ನಿವಾರಿಸುವಲ್ಲಿ ಡಾರ್ಕ್ ಚಾಕಲೇಟ್ ಬಹಳ ಉಪಯುಕ್ತವಾಗಿದೆ ಎಂದು ಪ್ರಾಯೋಗಿಕ ಪರೀಕ್ಷೆಯಿಂದ ತಿಳಿದು ಬಂದಿದೆ. ಅಲ್ಲದೆ ಕೋಕೋ ಬೀಜದಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣವು ಅಧಿಕವಾಗಿರುವುದರಿಂದ ಆರೋಗ್ಯ ಸುಧಾರಿಸಲು ಚಾಕೊಲೇಟ್ ನೆರವಾಗುತ್ತದೆ . ಜೊತೆಗೆ ಕೋಕೋ ಬೀಜದಲ್ಲಿ ಕಂಡುಬರುವ ಫ್ಲೇವೊನೈಡ್ಗಳು ಅತ್ಯಂತ ಪ್ರಬಲ ಉತ್ಕರ್ಷಣ ನಿರೋಧಕ ಗುಣವಿದ್ದು, ಇದು ಉರಿಯೂತದ ವಿರುದ್ದ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಇನ್ನೂ ಮನುಷ್ಯನ ಮೆದುಳು ಹಾಗೂ ಹೃದಯದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಹಾಗೆಯೇ ಡಾರ್ಕ್ ಚಾಕೊಲೇಟ್​ನಲ್ಲಿರುವ ಸಕ್ಕರೆ ಪ್ರಮಾಣವು ಕೂಡ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಸಣ್ಣ ಪ್ರಮಾಣದ ಕೋಕೋ ಬೀಜಗಳು ಮನುಷ್ಯನ ದೇಹದಲ್ಲಿ ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಡಾರ್ಕ್ ಚಾಕೊಲೇಟ್ ಮನುಷ್ಯನ ಸಂವೇದನಾತ್ಮಕ ಗ್ರಹಿಕೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕ ಲೀ ಎಸ್ ಬರ್ಕ್ ಹೇಳಿದ್ದಾರೆ.

ಅದರಲ್ಲಿ ಕೋಕೋ ಬೀಜಗಳಿಂದ ತಯಾರಾದ ಚಾಕೊಲೇಟ್ ಮನುಷ್ಯನ ದೇಹದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಥಮ ಬಾರಿಗೆ ಅಧ್ಯಯನದ ಮೂಲಕ ತಿಳಿದು ಬಂದಿದ್ದು , ಚಾಕೊಲೇಟ್ ನಲ್ಲಿ ರೋಗನಿರೋಧಕ ಶಕ್ತಿಯಿದ್ದು, ಕೋಶಗಳ ಮತ್ತು ಮೆದುಳಿನ ಹೆಚ್ಚಿನ ಅಧ್ಯಯನದಿಂದ ಮಹತ್ವದ ಪರಿಣಾಮಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಬರ್ಕ್ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕಾದರೆ ಚಾಕೊಲೇಟ್ ಮನುಷ್ಯನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯ ಪ್ರಕಾರ ತಿಳಿದುಬಂದಿದೆ.

Comments are closed.