ರಾಷ್ಟ್ರೀಯ

ವಜ್ರದ ವ್ಯಾಪಾರಿ ಪುತ್ರ ಸನ್ಯಾಸಿ….! ಇದು ವೈರಾಗ್ಯಕ್ಕೆ ಶರಣಾದ ಕಥೆ!!

Pinterest LinkedIn Tumblr


ತಂದೆ ವಜ್ರದ ವ್ಯಾಪಾರಿ.‌ಮನೆಯಲ್ಲಿ ಲಕ್ಷ್ಮಿ ತಾಂಡವವಾಡುತ್ತಿದ್ದಾಳೆ. ಆದರೇ ಮನೆಗೆ ಮಕ್ಕಳು ಮಾತ್ರ ಎಲ್ಲವನ್ನು ತ್ಯಜಿಸಿ ಸನ್ಯಾಸದ ಮೊರೆ ಹೋಗ್ತಿದ್ದಾರೆ….ಹೌದು ಇದು ವಜ್ರದ ವ್ಯಾಪಾರಿಯ ಮಗನ ಸನ್ಯಾಸದ ಸ್ಟೋರಿ….!

ಗುಜರಾತ್ ನ ಸೂರತ್ ನಲ್ಲಿರೋ ಪ್ರಸಿದ್ಧ ವಜ್ರದ ವ್ಯಾಪಾರಿ ದೀಪೇಶ್ ಶಾ ಪುತ್ರ ೧೨ ವರ್ಷದ ಭವ್ಯ ಶಾ ಜೈನ್ ಇಹದ ಎಲ್ಲ ಆಸೆಗಳನ್ನು ಬಿಟ್ಟು ಕಠಿಣವಾದ‌ ಸನ್ಯಾಸ ದೀಕ್ಷೆ‌ ಪಡೆಯಲು ನಿರ್ಧರಿಸಿದ್ದಾನೆ.

ಈಗಾಗಲೇ ಭವ್ಯಶಾ ಜೈನ್ ಸನ್ಯಾಸ ದೀಕ್ಷೆಯ ಆಚರಣೆಗಳು ಆರಂಭವಾಗಿದ್ದು, ಜೈನ್ ದೀಕ್ಷೆಗೂ ಮುನ್ನ ನಡೆಯುವ ಅದ್ದೂರಿ‌‌ ಮೆರವಣಿಗೆ ಕಾರ್ಯವನ್ನು‌ನಡೆಸಲಾಗಿದೆ.

ಹುಟ್ಟಿನಿಂದಲೂ ಲೌಕಿಕ ಬದುಕಿನ ಬಗ್ಗೆ ವೈರಾಗ್ಯ ಭಾವನೆ ಹೊಂದಿದ್ದ ಭವ್ಯಶಾ ಜೈನ್, ೧೨ ವರ್ಷಕ್ಕೆ ಸನ್ಯಾಸ ದೀಕ್ಷೆಯ ನಿರ್ಣಯ ಕೈಗೊಂಡಿದ್ದಾನೆ.

ಈತನ ನಿರ್ಣಯಕ್ಕೆ ಆತನ ಪೋಷಕರು ಕೂಡ ಸಮ್ಮತಿಸಿದ್ದಾರೆ. ಇದೇ ಮೊದಲಲ್ಲ ಭವ್ಯಶಾ ಗೂ ಮುನ್ನ ಆತನ ಸಹೋದರಿ ಕೂಡ ತನ್ನ ೧೨ ನೇ ವಯಸ್ಸಿನಲ್ಲಿ ಮನೆಯ ಎಲ್ಲ ಸುಖಭೋಗಗಳನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದ್ದು, ಇದೀಗ ತಮ್ಮನೂ ಅಕ್ಕನ ಹಾದಿಯನ್ನೇ ಹಿಡಿದಿದ್ದಾನೆ.

ತನ್ನ ಈ ನಿರ್ಧಾರದ ಬಗ್ಗೆ ಮಾತನಾಡಿರುವ ಭವ್ಯಶಾ ಜೈನ್,ನಾನೀಗ ಹೊರಟಿರುವುದು ಸತ್ಯದ ದಾರಿಯಲ್ಲಿ. ಇದೇ ನಿಜವಾದ ಮಾರ್ಗ. ನನ್ನ ಹೆತ್ತವರು ಶೀಘ್ರದಲ್ಲೇ ಇದೇ ದಾರಿಯನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾನೆ.
ಇನ್ನು ಸಧ್ಯದಲ್ಲೇ ಜೈನ್ ಸಂಪ್ರದಾಯದಂತೆ ಭವ್ಯಶಾ ಜೈನ್ ಸನ್ಯಾಸ ದೀಕ್ಷೆ ಕಾರ್ಯಕ್ರಮ ಸೂರತ್ ನಲ್ಲಿ ನಡೆಯಲಿದ್ದು ದೇಶದ ವಿವಿಧೆಡೆಯಿಂದ ಅಂದಾಜು ೪೫೦ ಕ್ಕೂ ಹೆಚ್ಚು ಜೈನ್ ಮುನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ.
ಇನ್ನು ಪುಟ್ಟ ಬಾಲಕನ ಈ ದಿಟ್ಟ ನಿರ್ಧಾರವನ್ನು ದೀಪೇಶ್ ಜೈನ್ ದಂಪತಿ‌ ಪ್ರೋತ್ಸಾಹಿಸಿದ್ದು ಖುಷಿಯಿಂದ‌‌ ಮನೆಮಗನನ್ನು ಸನ್ಯಾಸಕ್ಕೆ ಬೀಳ್ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

Comments are closed.