ಕರ್ನಾಟಕ

‘ನೋಟುಗಳಿಂದ ಗಾಂಧೀಜಿ ಪೋಟೋ ತೆಗೆಯುತ್ತಾರೆ’

Pinterest LinkedIn Tumblr


ಮೈಸೂರು: ಕೇಂದ್ರ ಸರ್ಕಾರ ಬಲವಂತವಾಗಿ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್​ ನಾಗರಾಜ್​ ಅವರು, ಈ ಹೇರಿಕೆ ಹಿಂದೆ ಕೇಂದ್ರದ ಸಾಕಷ್ಟು ಲೆಕ್ಕಾಚಾರ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್, ಬಲವಂತವಾಗಿ ಹಿಂದಿ ಹೇರಿಕೆ ಒಂದು ಪಿತೂರಿ ಆಗಿದೆ. ಇದು ಆರ್​​ಎಸ್​​ಎಸ್​ ಅಜೆಂಡಾ ಹಾಗೂ ಪಿತೂರಿಯಾಗಿದೆ. ಈ ಬಗ್ಗೆ ಕರ್ನಾಟಕದ ಕನ್ನಡಪರ ಒಕ್ಕೂಟಗಳು ಪ್ರತಿಭಟನೆ ನಡೆಸಲಿವೆ ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮೋದಿ ಗುಜರಾತ್​ನಲ್ಲಿ ಸರದಾರ್​ ವಲ್ಲಭಾಯ್ ಪಾಟೇಲ್​ ಅವರ ಪ್ರತಿಮೆ ನಿರ್ಮಿಸಿದರು. ಮಹಾತ್ಮ ಗಾಂಧೀಜೀ ಅವರ ಪ್ರತಿಮೆ ಯಾಕೆ ಮಾಡಲಿಲ್ಲ(?) ಗಾಂಧಿ ಪ್ರತಿಮೆ ಮಾಡದಿರುವುದಕ್ಕೆ ಕಾರಣವೇನು(?) ಎಂದು ಧ್ವನಿ ಎತ್ತಿದರು.

ಅಲ್ಲದೇ ಮೋದಿಯವರೇ, ವಲ್ಲಭಾಯ್ ಪಟೇಲರು ನಿಮ್ಮ ರಾಜ್ಯವದರೇ ಇರಬಹುದು. ಆದರೆ, ಈ ದೇಶಕ್ಕೆ ದೇವರು ಮಹಾತ್ಮ ಗಾಂಧೀಜಿಯವರು. ಅವರನ್ನು ಬಿಟ್ಟು ನೀವು ಏನು ಮಾಡೋದಕ್ಕೆ ಆಗಲ್ಲ, ಮುಂದೊಂದು ದಿನ ನೋಟುಗಳಲ್ಲಿ ಗಾಂಧೀಜೀ ಅವರ ಫೋಟೋ ತೆಗೆಯುತ್ತಾರೆ ಎಚ್ಚರ ಎಂದು ಅವರು ತಿಳಿಸಿದರು.

ಸದ್ಯ ಇದೆಲ್ಲವು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಅವರ ದೊಡ್ಡ ಪಿತೂರಿಯಾಗಿದೆ ಎಂದು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಗುಡುಗಿದರು.

Comments are closed.