ಕರ್ನಾಟಕ

ತಾಂತ್ರಿಕ ಸಮಸ್ಯೆಯಿಂದ ರಾಜ್ಯಾದ್ಯಂತ ಭಾರತ್ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತ!

Pinterest LinkedIn Tumblr


ಬೆಂಗಳೂರು: ಮಂಗಳೂರಿನ ಭಾರತ್ ಗ್ಯಾಸ್ ಪ್ಲಾಂಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಪಿ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ಜನ ಸಾಮಾನ್ಯರು ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಉದ್ಬವವಾಗಿದೆ.

ಮಂಗಳೂರು ಭಾರತ್​ ಗ್ಯಾಸ್​ ಪ್ಲಾಂಟ್​ನಿಂದ ನೆಲಮಂಗಲ ಸಮೀಪದ ಸೋಲೂರು ಪ್ಲಾಂಟ್‌ಗೆ ಲಿಕ್ವಿಡ್ ಗ್ಯಾಸ್ ಸರಬರಾಜಾಗುತ್ತದೆ. ಆದರೆ, ಪ್ಲಾಂಟ್​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಗ್ಯಾಸ್​ ಸರಬರಾಜು ಆಗಿಲ್ಲ. ಹೀಗಾಗಿ ಸೋಲೂರು ಪ್ಲಾಂಟ್‌ನಲ್ಲಿ ಸಾವಿರಾರು ಲಾರಿಗಳು ಸಾಲುಗಟ್ಟಿ ನಿಂತಿವೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಮಂಡ್ಯ ಜಿಲ್ಲೆಗಳಿಗೆ ಸೋಲೂರಿನಿಂದ ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ. ಅಲ್ಲದೇ, ಬೆಂಗಳೂರಿನಲ್ಲಿ ಅತಿಹೆಚ್ಚು ಬಿಪಿ ಗ್ಯಾಸ್​ ಸಂಪರ್ಕ ಹೊಂದಿದೆ. ಬೆಂಗಳೂರು ನಗರದಲ್ಲಿ 62ಕ್ಕೂ ಹೆಚ್ಚು ಹಂಚಿಕೆ ಕೇಂದ್ರಗಳಲ್ಲಿ ಸಿಲಿಂಡರ್​ಗಳು ಸಿಗದಂತಾಗಿದೆ.

ಗ್ಯಾಸ್​ ಬುಕ್ ಮಾಡಿ 20 ದಿನವಾದರೂ ಗ್ಯಾಸ್ ಸಿಲಿಂಡರ್​ಗಳು ಜನರಿಗೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ.

Comments are closed.