ಕರ್ನಾಟಕ

ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Pinterest LinkedIn Tumblr


ಬೆಂಗಳೂರು: ನನ್ನ ಹಾಗೂ ಡಿಕೆ ಶಿವಕುಮಾರ್ ನಡುವೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ಆದರೂ ಇ.ಡಿ ಸಮನ್ಸ್ ನೀಡಿದೆ. ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

14ನೇ ತಾರೀಕಿಗೆ ವಿಚಾರಣೆಗೆ ಬರುವಂತೆ ಇ.ಡಿ ಸಮನ್ಸ್ ಕೊಟ್ಟಿದ್ದರು. ಆದರೆ ಆ ದಿನ ಬರಲು ಸಾಧ್ಯವಿಲ್ಲ ಅಂತ ಹೇಳಿದ್ದರಿಂದ ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. 180 ಜನರನ್ನು ಕರೆದಿದ್ದಾರೆ, ಅದರಲ್ಲಿ ನನ್ನ ಹೆಸರು ಕೂಡ ಇದೆ.

ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನುವುದು ತಿಳಿದಿಲ್ಲ. ಬೆಂಗಳೂರಿನಲ್ಲಿ ವಿಚಾರಣೆಗೆ ಬರುತ್ತೇನೆ ಅಂತ ಕೇಳಿಕೊಂಡಿದ್ದೇನೆ. ಆದರೆ ಇ.ಡಿಯಿಂದ ಸಮರ್ಪಕ ಉತ್ತರ ಬರಲಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಡಿಕೆಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಡಿಕೆಶಿ ಅವರ ಅಕ್ರಮ ಆಸ್ತಿ ಸಂಪಾದನೆ ವಿಚಾರವಾಗಿ ಇಡಿ 11 ಮಂದಿಯನ್ನು ಗುರುತಿಸಿದ್ದು ಇವರಲ್ಲಿ ಹೆಬ್ಬಾಳ್ಕರ್ ಅವರೂ ಒಬ್ಬರು ಎನ್ನಲಾಗಿದೆ. ಜತೆಗೆ ಡಿಕೆಶಿ ವಿಚಾರಣೆಗೆ ಹಾಜರಾಗುವ ಮುನ್ನ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕಡೆಯದಾಗಿ ಕರೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Comments are closed.