ಅಂತರಾಷ್ಟ್ರೀಯ

ಕಾಶ್ಮೀರದಲ್ಲಿ ಕರ್ಫ್ಯೂ ರದ್ದುಪಡಿಸದ ಹೊರತು ಇಂಡಿಯಾದೊಂದಿಗೆ ಮಾತುಕತೆ ಇಲ್ಲ: ಇಮ್ರಾನ್‌ ಖಾನ್‌

Pinterest LinkedIn Tumblr


ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ರದ್ದುಪಡಿಸಿದ ಹೊರತು ಭಾರತದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

370 ರದ್ದತಿ ಬಳಿಕ ಕಂಗೆಟ್ಟಿರು ಪಾಕಿಸ್ಥಾನ ಭಾರತದೊಂದಿಗೆ ಮಾತುಕತೆ ನಡೆಸುವುದು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಅಲ್ಲದೇ ಕಾಶ್ಮೀರ ವಿಚಾರದಲ್ಲಿ ಅದು ಭಾರತದ ವಿರುದ್ಧ ಮತ್ತು ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯಲು ಹೆಣಗಾಡುತ್ತಿದೆ.

ಕಳೆದ ವಾರವಷ್ಟೇ ಇಮ್ರಾನ್‌ ಖಾನ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿ, ನಾನು ಕಾಶ್ಮೀರದ ರಾಯಭಾರಿ ಎಂದು ಬಣ್ಣಿಸಿಕೊಂಡಿದ್ದರು. ಅಲ್ಲದೇ ನಾನು ರಾಯಭಾರಿಯಾಗಿ ಪ್ರಪಂಚ ಸುತ್ತಿ ಕಾಶ್ಮೀರದ ಬಗ್ಗೆ ವಿಷಯ ತಿಳಿಸುತ್ತೇನೆ ಎಂಬುದನ್ನು ಮೋದಿ ಮತ್ತು ಭಾರತೀಯರು ಅರಿತುಕೊಳ್ಳಲಿ ಎಂದು ಹೇಳಿದ್ದರು. ಜತೆಗೆ ಕಾಶ್ಮೀರ ವಿಚಾರದಲ್ಲಿ ಆರೆಸ್ಸೆಸ್‌ ಅಜೆಂಡಾ ಜಾರಿಗೊಳಿಸಲಾಗುತ್ತಿದೆ ಎಂದವರು ಟೀಕಿಸಿದ್ದರು.

Comments are closed.