ಆರೋಗ್ಯ

ಉತ್ತಮ ಆರೋಗ್ಯಕ್ಕಾಗಿ ಈ 5 ಬೆಸ್ಟ್ ವ್ಯಾಯಾಮಗಳು

Pinterest LinkedIn Tumblr

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ದಿನಮಾನದಲ್ಲಿ ವ್ಯಾಯಾಮ ಮಾಡಬೇಕಾದದ್ದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಕೂಡ. 5 ಬೆಸ್ಟ್ ವ್ಯಾಯಾಮಗಳು ಯಾವವು ಅನ್ನೋದ್ರ ಬಗ್ಗೆ ಹಾರ್ವರ್ಡ್ ಆರೋಗ್ಯ ವಿದ್ಯಾಲಯದ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಈಜುವುದು: ಒಳ್ಳೆಯ ಮತ್ತು ಸಂಪೂರ್ಣ ವ್ಯಾಯಾಮ. ಇದರಿಂದ ದೇಹಕ್ಕೆ ವರ್ಕೌಟ್ ಆಗೋದಲ್ಲದೇ ಮನಸ್ಸೂ ರಿಲ್ಯಾಕ್ಸ್ ಆಗುತ್ತೆ. ಇದರಿಂದ ಡಿಪ್ರೆಷನ್ ಕಡಿಮೆಯಾಗುತ್ತೆ. ಮೂಡ್ ಹದಕ್ಕೆ ಬರುತ್ತೆ ಜೊತೆಗೆ ಒತ್ತಡವೂ ನಿವಾರಣೆಯಾಗುತ್ತೆ.

ಥಾಯ್ ಚೈ ವ್ಯಾಯಾಮ:ಇದೊಂಥರಾ ಚೀನಾದ ಸಮರ ಕಲೆಯಂಥದ್ದು. ಇದರಲ್ಲಿ ಮುಖ್ಯವಾಗಿ ವ್ಯಾಯಾಮ ಮಾಡುತ್ತಿರುವಾಗಲೇ ನಿಧಾನವಾಗಿ ಉಸಿರಾಟದ ಮೇಲೆ ಹಿಡಿತವಿರಬೇಕು. ಈ ವ್ಯಾಯಾಮ ವಯಸ್ಸಾದವರಿಗೆ ಒಳ್ಳೆಯದು.

ಶಕ್ತಿಯುತ ವ್ಯಾಯಾಮ: ಇದು ಭಾರವಾದ ವಸ್ತುಗಳಾದ ಡಂಬಲ್ಸ್ ಅಥವಾ ಬಾರ್ಬೆಲ್ಸ್, ಎಲಾಸ್ಟಿಕ್ ಬಾಂಡ್ಸ್, ಭಾರವಾದ ಆಂಕಲ್ ಕಪ್ಸ್ ಗಳನ್ನು ಉಪಯೋಗಿಸಿಕೊಂಡು ಮಾಡುವ ವ್ಯಾಯಾಮ. ಇದರಿಂದ ದೇಹದ ಮಾಂಸಖಂಡಗಳು ಬಲಗೊಳ್ಳುತ್ತೆ.

ವಾಕಿಂಗ್: ಅತ್ಯುತ್ತಮ ವ್ಯಾಯಾಮ. ದಿನವೂ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.

ಕೆಗೆಲ್ ವ್ಯಾಯಾಮ:ಇದು ಮಹಿಳೆ ಹಾಗೂ ಪುರುಷ ಇಬ್ಬರಿಗೂ ಒಳ್ಳೆಯದು. ಮಸಲ್ಸ್ ಅನ್ನು ಶಕ್ತಿಯುತವನ್ನಾಗಿ ಮಾಡುತ್ತೆ ಈ ವ್ಯಾಯಾಮ. ದಿನವೊಂದಕ್ಕೆ 4 ರಿಂದ 5 ಬಾರಿ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತೆ.

Comments are closed.