ಆರೋಗ್ಯ

ದೂಪದಿಂದ ಶ್ವಾಸಕೋಶಗಳ ತೊಂದರೆಗಳು ನಿವಾರಣೆ..?

Pinterest LinkedIn Tumblr

ಪುರಾಣಗಳ ಪ್ರಕಾರ ದೇವತೆಗಳು ಸುಗಂಧಗಳನ್ನು ಪ್ರೀತಿಸುತ್ತವೆ ಎಂಬ ಹೇಳಿಕೆಯು ಪುರಾತನ ಐಗುಪ್ತ್ಯರಲ್ಲಿ ಸಾಮಾನ್ಯವಾಗಿತ್ತು. ಅವರಿಗೆ, ಧೂಪ ಸುಡುವುದು ಆರಾಧನೆಯ ಒಂದು ಅತ್ಯಾವಶ್ಯಕ ಭಾಗವಾಗಿತ್ತು. ದೇವತೆಗಳು ತಮ್ಮ ಹತ್ತಿರದಲ್ಲಿಯೇ ಇವೆಯೆಂಬ ನಂಬಿಕೆಯಿಂದ ಧೂಪವನ್ನು ಹಚ್ಚುತ್ತೇವೆ. ಇದು ಕೇವಲ ನಂಬಿಕೆ ಅಷ್ಟೇ. ಹಿಂಧೂ ಧರ್ಮಗಳ ಸಂಬಂಧವಾದ ಆಚರಣೆ ಮತ್ತು ಸಂಸ್ಕಾರಗಳಲ್ಲಿ ಧೂಪವನ್ನು ಸುಡಲಾಗುತ್ತದೆ. ಅದಕ್ಕೆ ಕೂಡಿಕೆಯಾಗಿ, ಈಗ ಹೆಚ್ಚೆಚ್ಚು ಜನರು ತಮ್ಮ ಮನೆಗಳಲ್ಲಿ, ಧೂಪಗಳ ಸುವಾಸನೆಯನ್ನು ಆನಂದಿಸುವುದಕ್ಕಾಗಿ ಅದನ್ನು ಸುಡಲು ಬಯಸುತ್ತಾರೆ.

ಈ ಪದವು, ಹೊಗೆಯನ್ನು ಅಥವಾ ಸುಡಲ್ಪಡುವ ವಸ್ತುವನ್ನು ಸೂಚಿಸಲು ಸಾಧ್ಯವಿದೆ. ಇದು, ಲೋಭಾನ, ಶ್ರೀಗಂಧ, ಚಂಗಲಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಪಡಿಸಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಕುಡಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ.ಈ ಹತ್ತು ವಿಧವಾದ ಮೂಲಿಕೆಗಳನ್ನು “ದಶಾಂಗಧೂಪ” ವೆನ್ನುತ್ತಾರೆ.

ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿಯಾಗುವುದಿಲ್ಲ. ಧೂಪವನ್ನು ಹಚ್ಚುವದರಿಂದ ಅದರ ವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹೆಚ್ಚು ಕೆಲಸವಿಲ್ಲವೆಂಬುದು ಸತ್ಯವಷ್ಠೆ.

Comments are closed.