ಆರೋಗ್ಯ

ಸುಂದರವಾಗಿ ಕಾಣಲು ತುಂಬಾ ಸುಲಭ ಸರಳ ಟಿಪ್ಸ್

Pinterest LinkedIn Tumblr

ಯಾರಿಗೆ ತಾನೇ ತಾವು ಅಂದವಾಗಿ ಸುಂದರವಾಗಿ ಕಾಣಬೇಕು ಎಂದು ಅನ್ನಿಸುವುದಿಲ್ಲ ಹೇಳಿ ಇನ್ನೊಬ್ಬರಿಗಿಂದ ತಾವು ಅಂದವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ ಇದಕ್ಕಾಗಿ ಎಷ್ಟೆಲ್ಲ ಹರ ಸಾಹಸ ಪಡುತ್ತಾರೆ ಎಂದರೆ ಹೇಳಲು ಅಸಾಧ್ಯ ಅಂದವಾಗಿ ಕಾಣುವುದಕ್ಕಾಗಿ ಮಾರುಕಟ್ಟೆಯಲ್ಲಿ ಬರುವಂತಹ ವಿಧವಿದವಾದ ಕ್ರೀಮ್ ಸೋಪ್. ಎಲ್ಲವನ್ನು ಬಳಕೆ ಮಾಡುತ್ತಾರೆ. ಆದರೆ ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಒಂದೇ ಅದು ಏನೆಂದರೆ ಮಾರುಕಟ್ಟೆಯಲ್ಲಿ ಯಾವುದಾದರೂ ಒಂದು ಕ್ರೀಮ್ ಸೋಪ್ ಬಂದಾಗ ಅದನ್ನು ಬಳಕೆ ಮಾಡಲು ಶುರು ಮಾಡುತ್ತಾರೆ ಅದನ್ನು ಒಂದು ತಿಂಗಳು ಕೂಡ ಸರಿಯಾಗಿ ಬಳಸದೆ ಮಾರುಕಟ್ಟೆಗೆ ಮತ್ತೊಂದು ಕ್ರೀಮ್ ಸೋಪ್ ಬಂತು ಎಂದು ಅದನ್ನು ಬಿಟ್ಟು ಮತ್ತೊಂದನ್ನು ಬಳಕೆ ಮಾಡಲು ಶುರು ಮಾಡುತ್ತಾರೆ ಹೀಗೆ ಮಾಡುವುದರಿಂದ ಯಾವುದು ಕೂಡ ಸರಿಯಾದ ಪರಿಣಾಮ ಬೀರುವುದಿಲ್ಲ.

ಆದರೆ ಇವೆಲ್ಲದಕ್ಕಿಂತ ಅಂದವಾಗಿ ಕಾಣಲು ತುಂಬಾ ಸುಲಭ ಕೆಲಸಗಳು ಇವೆ ಅವುಗಳನ್ನು ಮಾಡಿದರೆ ಸಾಕು ತುಂಬಾ ಅಂದವಾಗಿ ಕಾಣಬಹುದು ಜೊತೆಗೆ ಇವು ಯಾವುದೇ ರೀತಿಯ ಕೆಮಿಕಲ್ ಮಿಶ್ರಣ ಆಗಿರುವುದಿಲ್ಲ ಅದಕ್ಕಾಗಿ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಆಗು ಎಲ್ಲ ರೀತಿಯ ಮುಖಗಳಿಗೂ ಕೂಡ ಇದು ಅನ್ವಯ ಮಾಡಬಹುದು ಹಾಗಾದರೆ ಅದು ಏನು ಎಂದು ನೋಡೋಣ ಬನ್ನಿ

ಮೊದಲೆನಾದಾಗಿ ಅಭ್ಯಂಜನ ಸ್ನಾನವನ್ನು ಮಾಡಬೇಕು ಇದು ತುಂಬಾ ಹಳೆಯ ಸಂಪ್ರದಾಯ ಆದರೂ ಈ ಅಬ್ಯಾಂಜನ ಸ್ನಾನ ಮಾಡುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಇದರಿಂದ ದೇಹಕ್ಕೆ ಉತ್ತಮ ಮಸಾಜ್‌ ಕೂಡ ದೊರೆಯುತ್ತದೆ ಹಾಗೂ ಇದರಿಂದ ಉತ್ತಮ ರಕ್ತ ಪರಿಚಲನೆಯಾಗಿ ತ್ವಚೆಯ ಹೊಳಪು ಹೆಚ್ಚುತ್ತದೆ. ಅಭ್ಯಂಜನ ಸ್ನಾನವನ್ನು ಮಾಡಿದ ನಂತರ ತ್ವಚೆಯು ತುಂಬಾ ಕೋಮಲವಾಗಿರುತ್ತದೆ. ಆದುದರಿಂದ ಮೈ ಮೇಲೆ ಇರುವ ನೀರನ್ನು ಮೃದುವಾದ ಬಟ್ಟೆಯ ಸಹಾಯದಿಂದ ಒರೆಸಿ ಸ್ವಚ್ಛ ಮಾಡಿಕೊಳ್ಳಬೇಕು. ಹಾಗೆಯೇ ನಾವು ನಿತ್ಯ ಸೇವಿಸುವ ಆಹಾರಗಳು ಕೂಡ ನಮ್ಮ ಚರ್ಮದ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿತ್ಯ ಆರೋಗ್ಯಕರ ಪೌಷ್ಟಿಕ ಆಹಾರವನ್ನು ಸೇವಿಸಬೇಕು.

ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಪ್ರತಿ ದಿನ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿಕೊಳ್ಳಬೇಕು ಇದರಿಂದ ಚರ್ಮಕ್ಕೆ ಯಾವಾಗಲೂ ತೇವಾಂಶ ದೊರೆತು ಚರ್ಮ ಸದಾ ಮೃದುವಾಗಿರುತ್ತದೆ. ಸೌಂದರ್ಯ ಹೆಚ್ಚಾಗಲು ರಾಸಾಯನಿಕ ಅಥವಾ ಬ್ಲೀಚ್‌ ಬಳಕೆ ಮಾಡುವ ಬದಲು ಗಿಡಮೂಲಿಕೆಗಳನ್ನು ಬಳಸಬೇಕು. ಬ್ಲೀಚ್‌ ತತ್‌ಕ್ಷಣಕ್ಕೆ ಹೊಳಪು ನೀಡಿದರು ಕೂಡ ವರ್ಷಗಳ ಬಳಿಕ ಚರ್ಮ ಸುಕ್ಕುಗಟ್ಟುತ್ತದೆ.

ತಿಂಗಳಲ್ಲಿ ಒಂದು ಬಾರಿಯಾದರೂ ಮೆನಿಕ್ಯೂರ್‌ ಅಥವಾ ಪೆಡಿಕ್ಯೂರ್‌ ಮಾಡಿಕೊಳ್ಳಬೇಕು. ಇದರಿಂದ ಕಾಲಿನ ಪಾದಗಳಿಗೂ ರಿಲ್ಯಾಕ್ಸ್‌ ಸಿಗುತ್ತದೆ. ಹಾಗೆಯೇ ಪಾದರಕ್ಷೆಗಳನ್ನು ಧರಿಸುವಾಗ ಕೂಡ ಎಚ್ಚರ ವಹಿಸಬೇಕು ಕೆಲವೊಮ್ಮೆ ಪ್ಲಾಸ್ಟಿಕ್‌ ಪಾದರಕ್ಷೆಗಳು ಕಾಲಿಗೆ ಅಲರ್ಜಿಯಾಗುತ್ತವೆ ಹಾಗಾಗಿ ಪಾದರಕ್ಷೆ ಧರಿಸುವಾಗ ಎಚ್ಚರ. ಬೇಸಿಗೆ ಕಾಲದಲ್ಲಿ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಆದರೆ ಬೆಳಿಗ್ಗೆ ರಾತ್ರಿ ಸ್ನಾನ ಮಾಡಿ ಏಕೆಂದರೆ ಬೇಸಿಗೆಯ ಬಿಸಿಲಿಗೆ ಹೆಚ್ಚು ಬೆವರುತ್ತೇವೆ ಇದರಿಂದ ದೇಹ ವಾಸನೆ ಬರುತ್ತದೆ. ಹಾಗೂ ತುಂಬಾ ತೆಳುವಾದ ಬಟ್ಟೆಯನ್ನು ಧರಿಸಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಬಹುದು ಇದು ಯಾವುದೇ ಅಡ್ಡ ಪರಿಮಾಣ ಬೀರುವುದಿಲ್ಲ ಇದು ಎಲ್ಲರಿಗೂ ಕೂಡ ಅನ್ವಯ ಆಗುತ್ತದೆ.

Comments are closed.