
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರ ತೈಮೂರ್ ಅಲಿ ಖಾನ್ ಹಿಂದಿ ಸಿನಿಮಾದ ಭವಿಷ್ಯ ಎಂದು ನಟ ಅಕ್ಷಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಹೊಸ ಚಿತ್ರ ‘ಮಿಷನ್ ಮಂಗಲ್’ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅಕ್ಷಯ್ ಕುಮಾರ್ ಸಂದರ್ಶನವೊಂದರಲ್ಲಿ, ಬಾಲಿವುಡ್ ನ ಭವಿಷ್ಯದ ತಾರೆ ಯಾರು ಎಂದು ಕೇಳಿದ ಪ್ರಶ್ನೆಗೆ, ಇದಕ್ಕೆ ಉತ್ತರಿಸುವುದು ಕಷ್ಟ ಎಂದರು. ಆಗ ಪಕ್ಕದಲ್ಲಿದ್ದ ತಾಪ್ಸಿ, ತೈಮೂರ್ ಅಲಿ ಖಾನ್ ಹೆಸರನ್ನು ಸೂಚಿಸಿದರು. ಆಗ ಅಕ್ಷಯ್, ಅದು ನಿಜ, ತೈಮೂರ್ ಬಾಲಿವುಡ್ ನ ಭವಿಷ್ಯ ಎಂದರು. ಆಗ ಚಿತ್ರದ ಇನ್ನೋರ್ವ ತಾರೆ ವಿದ್ಯಾ ಬಾಲನ್, ಇದು ಸರಿಯಾದ ಉತ್ತರ. ನನಗಿಷ್ಟವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರ ಎರಡೂವರೆ ವರ್ಷದ ಪುತ್ರ ತೈಮೂರ್, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯನಾಗಿದ್ದಾನೆ. ಆತನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಸೈಫ್ ಗೆ ತಮ್ಮ ಪುತ್ರ ನಟನಾಗಬೇಕೆಂಬ ಆಸೆಯಿದ್ದರೆ, ಕರೀನಾಗೆ ಆತ ಕ್ರಿಕೆಟರ್ ಆಗಬೇಕೆಂಬ ಬಯಕೆಯಂತೆ.
Comments are closed.