ಕರ್ನಾಟಕ

ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Pinterest LinkedIn Tumblr

ಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿದ ಸಚಿವೆ ಸಾರ್ವಜನಿಕರು, ಸಂತ್ರಸ್ಥರ ಅಹವಾಲು ಆಲಿಸಿದ್ದಾರೆ.ಈ ವೇಳೆ ಕೇಂದ್ರ ರೈಲ್ವೆ ಖಾತೆ ಆಜ್ಯ ಸಚಿವ ಸುರೇಶ್ ಅಂಗಡಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಎಸ್​.ಬಿ. ಬೊಮ್ಮನಹಳ್ಳಿ ಸಚಿವರಿಗೆ ಸಾಥ್ ನೀಡಿದ್ದಾರೆ.

ಕಾಲ್ನಡಿಗೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಸಚಿವೆ ದಾಮಣೆ ರಸ್ತೆಯಲ್ಲಿ ಸೇರಿದ್ದ ನೂರಾರು ಜನರ ಮನವಿ ಆಲಿಸಿದ್ದಾರೆ.

ಶನಿವಾರ ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳಗಾವಿ ತೆರಳಿದ್ದರು.ಬೆಳಗಾವಿ, ಸಂಜೇಶ್ವರ ಸೇರಿ ನಾನಾ ಕಡೆಗಳಲ್ಲಿ ಸಂತ್ರಸ್ಥರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಯರ ಕಣ್ನೀರಿಗೆ ಸಾಕ್ಷಿಯಾದ ಸಚಿವೆ ಎಲ್ಲವನ್ನೂ ಸರಿ ಪಡಿಸುತ್ತೇವೆ. ನಿಮ್ಮ ಜತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಅಧಿಕಾರಿಗಳ ಜತೆ ಮಾತನಾಡಿದ ನಿರ್ಮಲಾ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಬಗೆಗೆ ಮಾಹಿತಿ ಪಡೆದಿದ್ದು ಸೇನಾ ಹೆಲಿಕಾಪ್ಟರ್ ಸೇರಿದಂತೆ ಹೆಚ್ಚಿನ ನೆರವೇನಾದರೂ ಅಗತ್ಯವಿದೆಯೆ ಎಂದು ಕೇಳಿದ್ದಾಗಿ ವರದಿಯಾಗಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣ ರಾಜ್ಯಕ್ಕೆ ಹೆಚ್ಚುವರಿ ನೆರೆ ಪರಿಹಾರ ಸಿಗುವ ನಿರೀಕ್ಷೆ ಇದೆ.

Comments are closed.