ಆರೋಗ್ಯ

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತೆ ಈ ಕಾಯಿ

Pinterest LinkedIn Tumblr

ಹೌದು ಇದು ಅವೆರೆಕಾಯಿ ಸೀಜನ್ ಎಲ್ಲೆಡೆ ಅವೆರೆಕಾಯಿ ಸಿಗುತ್ತವೆ ಹಾಗಾಗಿ ಎಲ್ಲರು ಸಹ ಅವೆರೆಕಾಯಿ ತಿನ್ನುತ್ತಾರೆ. ಆದ್ರೆ ಇದು ಎಲ್ಲ ಟೈಮ್ ನಲ್ಲಿ ಸಿಗುವುದಿಲ್ಲ ಹಾಗಾಗಿ ಇದರ ಬಗ್ಗೆ ತುಲುಡೊಕೊಳ್ಳಬೇಕು ಈ ಅವರೆಕಾಯಿ ತಿನ್ನುದುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ : ಅವರೆಕಾಳಿನಲ್ಲಿ ಫೈಬರ್​ ಅಂಶ ಹೆಚ್ಚಾಗಿ ಇರುವುದರಿಂದ ಕ್ರಿಯೆಯನ್ನು ನಿದಾನಿಸುತ್ತದೆ. ಈ ಮೂಲಕ ಆಹಾರ ಸೇವನೆಯ ನಂತರ ತಕ್ಷಣ ಸಕ್ಕರೆ ಪ್ರಮಾಣ ರಕ್ತದಲ್ಲಿ ಹೆಚ್ಚುವುದನ್ನು ನಿಯಂತ್ರಿಸುತ್ತದೆ. ಹಾಗಾಗಿ ಟೈಪ್​2 ಡಯಾಬಿಟಿಸ್​ ಇರುವವರಿಗೆ ಈ ಕಾಳು ಉತ್ತಮ ಆಹಾರ.

ಪೌಷ್ಠಿಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್​ ಆಹಾರ: ನೀವು ಅವರೇಕಾಳು ತಿನ್ನುವುದರಿಂದ ಇದರಲ್ಲಿ ಕ್ಯಾಲರಿ ಪ್ರಮಾಣ ಕಡಿಮೆ ಹಾಗೆ ಪ್ರೊಟೀನ್​ ಪ್ರಮಾಣ ಹೆಚ್ಚಿಗೆ ಇರುವುದರಿಂದ ಉತ್ತಮ ಡಯೆಟ್​ ಫುಡ್​ ಎನ್ನಬಹುದು. ಅವರೆಕಾಳಿನಲ್ಲಿ ಫೈಬರ್​ ಮತ್ತು ವಿಟಮಿನ್​ ಅಂಶ ಸಮೃದ್ಧವಾಗಿದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಅವರೆಕಾಳಿನಲ್ಲಿ ಮಿನರ್ಲ್ಸ್​ಗಳಾದ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಶಿಯಂ ಅಂಶಗಳಿವೆ. ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆ ಕೆಟ್ಟ ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಲೂ ಅವರೆಕಾಳು ಉತ್ತಮ.

Comments are closed.