ಕರಾವಳಿ

ಹಿರಿಯ ಸಾಹಿತಿ ಎಂ ಕೆ ಸೀತಾರಾಮ್ ಕುಲಾಲ್ ಅವರಿಗೆ ಕುಲಾಲ ಸಮಾಜ ಬಾಂಧವರಿಂದ ನುಡಿನಮನ

Pinterest LinkedIn Tumblr

ದೇಹಕ್ಕೆ ಮಾತ್ರ ಮರಣ ಸಾಧನೆ ಅಜರಾಮ : ಕೃಷ್ಣ ಅತ್ತವರ್

ಮಂಗಳೂರು : ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ನಾಟಕಗಾರ ಎಂ ಕೆ ಸೀತಾರಾಮ್ ಕುಲಾಲ್ ಅವರು ವಿಧಿವಶರಾಗಿದ್ದು ಅವರ ಆತ್ಮಶಾಂತಿಗಾಗಿ ಶೃದ್ಧಾಂಜಲಿ ಸಭೆ ಆಗಸ್ಟ್ 5ರಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಸನಿಹದಲ್ಲಿರುವ ಮುಂಬಯಿ ಕುಲಾಲ ಸಂಘದ ಆಡಳಿತದಲ್ಲಿರುವ ಕುಲಾಲ ಭವನದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ಮುಂಬೈ ಕುಲಾಲ ಸಂಘದ ಇದರ ಜಂಟಿ ಆಶ್ರಯದಲ್ಲಿ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸಂಘದ ಅಧ್ಯಕ್ಷ ಕೃಷ್ಣ ಅತ್ತವರ್ ಎಂಕೆ ಸೀತಾರಾಮ್ ಕುಲಾಲ್ ಅವರಿಗೆ ನುಡಿ ನಮನ ಸಲ್ಲಿಸುತ್ತಾ ಅವರ ರಚಿಸಿರುವ ಹಾಡುಗಳು ಅವರ ಸಂಘಟನಾ ಚತುರ್ಥಿಗಳು ಕುಲಾಲ ಸಮಾಜಕ್ಕೆ ಆದರ್ಶ ಯಾವುದೇ ವಿಚಾರದಲ್ಲಿ ರಾಜಿ ಆಗದೆ ನೇರ ದಿಟ್ಟ ಮಾತನಾಡುವ ವ್ಯಕ್ತಿತ್ವವನ್ನು ಹೊಂದಿದವರು ಅವರು ತುಳು ಸಿನಿಮಾಕ್ಕೆ ರಚಿಸಿದ ಹಾಡುಗಳು ಇಂದು ಕೂಡ ಗುನು ಗುಟ್ಟುತ್ತಿದೆ ಅವರ ದೇಹಕ್ಕೆ ಮಾತ್ರ ಮರಣ ಸಾಧನೆಗಳು ಅಜರಾಮ ಎಂದು ನುಡಿದರು.

ಮುಂಬಯಿ ಕುಲಾಲ ಸಂಘದ ಉಪ ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ನುಡಿ ನಮನ ಸಲ್ಲಿಸುತ್ತಾ ಮುಂಬೈ ಕುಲಾಲ ಸಂಘಕ್ಕೆ ನೀಡಿದ ಅವರ ಕೊಡುಗೆಗಳು ಸಂಘದಲ್ಲಿ ಶಾಶ್ವತವಾಗಿ ಉಳಿದಿದೆ ಅವರ ನಿಧನ ಮುಂಬೈಯ ಸಮಸ್ತ ತುಳು ಕನ್ನಡಿಗರಿಗೆ ದುಃಖವಾಗಿದೆ ಜಾತಿಯನ್ನು ಮೀರಿ ಅವರ ಕಾರ್ಯಗಳು ನಡೆದಿದೆ ಎಂದು ನುಡಿದರು.

ವೇದಿಕೆಯಲ್ಲಿ ಉಪಸ್ಥರಿದ್ದ ಜ್ಯೋತಿ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಮಮತಾ ಎಸ್ ಗುಜರನ್ ಕಾಸರಗೋಡು ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿ ಪಾಡಿ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ ದಾಮೋದರ್ ಕಲಾ ಕುಂಭ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನಾಗೇಶ್ ಕುಲಾಲ್ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್ ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ತಾಲೂಕಿನ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಕುಲಾಲ ಪ್ರತಿಷ್ಠಾನ ಮಂಗಳೂರಿನ ಅಧ್ಯಕ್ಷ ಬಿ ಸುರೇಶ್ ಕುಲಾಲ್  ನುಡಿನಮನ ಸಲ್ಲಿಸಿದರು

ಪತ್ರಕರ್ತ ದಿನೇಶ್ ಕುಲಾಲ್ ಪ್ರಸ್ತಾವನೆಗೈದರು ರಂಗನಟ ಎಚ್ ಕೆ ನಾಯ್ನಾಡ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.