ಆರೋಗ್ಯ

ವರಮಹಾಲಕ್ಷ್ಮಿ ವ್ರತ ಆಚರಣೆ ಬಗ್ಗೆ ಕೆಲವು ವಿಶೇಷ ಮಾಹಿತಿಗಳು

Pinterest LinkedIn Tumblr

ರೆಡಿಮೇಡ್​ ಲಕ್ಷ್ಮಿ ದೇವಿಯ ವಿಗ್ರಹಗಳು: ಶ್ರಾವಣ ಮಾಸ ಬಂತು ಅಂದರೆ ಸಾಕು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದ್ರಲ್ಲೂ ಹೆಣ್ಣು ಮಕ್ಕಳ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬ ಬಂದರೆ ಕೇಳ್ಬೇಕು ಸಡಗರ ಸಂಭ್ರಮ ಸ್ವಲ್ಪ ಜೋರಾಗೇ ಇರುತ್ತೆ. ಒಂದು ವಾರದಿಂದಲೇ ಹಬ್ಬ ತಯಾರಿ ನಡೆದಿರುತ್ತೆ. ಹಿಂದಿನ ಕಾಲದಲ್ಲಿ, ಮನೆ ಮನೆಗಳಿಗೆ ಬಿಂದಿಗೆ ಹಾಗೂ ತೆಂಗಿನ ಕಾಯಿ ಬಳಸಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡ್ತಿದರು.. ಆದ್ರೀಗ ಸಮಯದ ಅಭಾವ ಮತ್ತು ಬ್ಯುಸಿ ಲೇಫ್‌ನಿಂದ ಉದ್ಯೋಗಸ್ಥ ಮಹಿಳೆಯರು ತುಂಬಾ ಕಷ್ಟ ಪಡ್ತಿದ್ದರು. ಮಹಿಳೆಯರಿಗೆ ಸುಲಭವಾಗಲೆಂದೇ ರೆಡಿಮೇಡ್​ ಲಕ್ಷ್ಮಿ ದೇವಿಯ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ.

ಇನ್ನು ಒಂದಕ್ಕಿಂತ ಒಂದು ಮೂರ್ತಿಗಳು ಭಿನ್ನವಿಭಿನ್ನ ಕಲರ್‌ಪುಲ್‌ ಆಗಿದೆ, ಮಹಿಳೆಯ ಮನ ಸೆಳೆಯುತ್ತಿವೆ. 400ರೂಪಾಯಿಂದ ಹಿಡಿದು 5 ಸಾವಿರ ರೂಪಾಯಿವರೆಗೂ ಲಕ್ಷ್ಮಿ ಮೂರ್ತಿಗಳು ಲಭ್ಯವಿವೆ. ಇನ್ನು ಸುಲಭವಾಗಿ ಲಕ್ಷ್ಮಿ ವಿಗ್ರಹಗಳು ಸಿಗ್ತಿರೋದ್ರಿಂದ ಮಹಿಳೆಯರು ಕೂಡ ಫುಲ್‌ ಖುಷಿಯಾಗಿದ್ದು, ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದ್ದೇ ಆದ ಮಹತ್ವಗಳಿವೆ. ಆದರೆ ಆಧುನಿಕ ಯುಗದಲ್ಲಿ ಹಬ್ಬದ ತಯಾರಿಕಾ ವಸ್ತುಗಳೂ ಕೂಡ ಮಾಡ್ರನ್‌ ಆಗುತ್ತಿವೆ.

ವರಮಹಾಲಕ್ಷ್ಮಿ ವ್ರತ ಆಚರಣೆ ಹೇಗೆ: ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್‌ ನೈವೇದ್ಯ ಮಾಡಿ ಅರ್ಪಿಸುತ್ತಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಉಪವಾಸ: ಈ ಹಬ್ಬದಂದು ಮುತ್ತೈದೆಯರು ಉಪವಾಸವಿದ್ದು, ಪೂಜೆ ಸಲ್ಲಿಸುತ್ತಾರೆ. ಈ ದಿನ ಹಣ್ಣು, ಹಾಲು ಮಾತ್ರ ಸೇವಿಸುತ್ತಾರೆ, ಕೆಲವರು ಪೂಜೆ ಮುಗಿಯುವವರೆಗೆ ನೀರು ಮಾತ್ರ ಕುಡಿಯುತ್ತಾರೆ. ಲಕ್ಷ್ಮಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದ ಬಳಿಕ ಆಹಾರ ಸೇವನೆ ಮಾಡುತ್ತಾರೆ.

ವರಮಹಾಲಕ್ಷ್ಮೀ ಪೂಜೆಗೆ ಶುಭ ಸಮಯ: ಹಿಂದೂ ಧರ್ಮದ ಅತ್ಯಂತ ಶುಭ ವ್ರತಗಳಲ್ಲಿ ಒಂದಾದ ವರಮಹಾಲಕ್ಷ್ಮೀ ವ್ರತವನ್ನು ಶುಕ್ರವಾರದಂದು ಶ್ರವಣ ಮಾಸದಲ್ಲಿ ಹುಣ್ಣಿಮೆಗೂ ಮೊದಲು ಆಚರಣೆ ಮಾಡಲಾಗುತ್ತದೆ. ವರಮಹಾಲಕ್ಷ್ಮೀ ಪೂಜೆ ಮಾಡಲು ಬೆಳಗ್ಗೆ 5:51 ರಿಂದ 07: 29, ಬೆಳಗ್ಗೆ 9: 08 ರಿಂದ 10:46, ಮಧ್ಯಾಹ್ನ 3:41 ರಿಂದ ಸಂಜೆ 5:20, ಸಂಜೆ 5: 20 ರಿಂದ ಸಂಜೆ 6:58 ರವರೆಗೆ ಅತ್ಯಂತ ಶುಭ ಸಮಯವಾಗಿದ್ದು, ಮಧ್ಯಾಹ್ನ 02:03 ರಿಂದ 3:41ರವರೆಗೆ ಸಹ ಒಳ್ಳೆಯ ಸಮಯವಾಗಿದೆ.

Comments are closed.