ಆರೋಗ್ಯ

ಉತ್ತಮ ಜೀವನಕ್ಕೆ ಮತ್ತು ಉತ್ತಮ ಅರೋಗ್ಯಕ್ಕೆ ಈ ಪಂಚ ಸೂತ್ರಗಳು

Pinterest LinkedIn Tumblr

ಮನುಷ್ಯನಿಗೆ ಅರೋಗ್ಯ ತುಂಬಾನೇ ಮುಖ್ಯ ಅದ್ರಲ್ಲೂ ಹೃದಯಕ್ಕೆ ಸಂಬಂಧಿಸದ ವಿಚಾರದಲ್ಲಿ ತುಂಬ ಜಾಗೃತಿಯಿಂದ ಇರಬೇಕು. ನಿಮ್ಮ ಉತ್ತಮ ಜೀವನಕ್ಕೆ ಮತ್ತು ಉತ್ತಮ ರೋಗ್ಯಕ್ಕೆ ಈ ಪಂಚ ಸೂತ್ರಗಳನ್ನು ಬಳಸಿ.

ನಿತ್ಯ ತಪ್ಪದೇ ವ್ಯಾಯಾಮ ಮಾಡಿ: ಹೃದಯವನ್ನು ಮತ್ತು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ 30-45 ನಿಮಿಷಗಳ ವ್ಯಾಯಾಮಕ್ಕೆ ಮೀಸಲಿರಿಸಿದರೆ ಉತ್ತಮ. ದೇಹವನ್ನು ಆರೋಗ್ಯವಿಗಿಟ್ಟುಕೊಳ್ಳಲು ವ್ಯಾಯಾಮ ಉತ್ತಮ ಉಪಾಯ ನಡಿಗೆ, ಯೋಗಭ್ಯಾಸ, ಜಾಗಿಂಗ್ ನಂತಹ ದೈಹಿಕ ಕಸರತ್ತು ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಬಹುದು.

ಆರೋಗ್ಯಕಾರಿ ಡಯಟ್: ಆರೋಗ್ಯಕಾರಿ ಡಯಟ್ ಅಥವಾ ಆರೋಗ್ಯಕಾರಿ ಆಹಾರಗಳ ಸೇವನೆ ಕೂಡ ನಿಮ್ಮನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿಡುತ್ತದೆ. ನೀವು ತಿನ್ನುವ ಆಹಾರ ಪದಾರ್ಥಗಳು ಪ್ರೊಟೀನ್ ಗಳಿಂದ ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ತಿನ್ನಬೇಕು. ತರಕಾರಿ, ಧಾನ್ಯಗಳು ಹಾಗೂ ಮೊಳಕೆ ಕಟ್ಟಿದ ಧಾನ್ಯಗಳ ಆಹಾರಗಳು ದೇಹಕ್ಕೆ ಅತ್ಯುತ್ತಮವಾರುತ್ತವೆ. ಅಂತೆಯೇ ಸಕ್ಕರೆ, ಉಪ್ಪಿನ ಅಂಶ ಆಹಾರಗಳಲ್ಲಿ ನಿಯಂತ್ರಣದಲ್ಲಿದ್ದರೆ ಒಳಿತು. ಗ್ಯಾಸ್ ಸಹಿತ ಪೇಯಗಳಿಂದ ದೂರವಿರಿ.

ದೇಹದ ತೂಕದ ಮೇಲೆ ಗಮನವಿರಲಿ: ಅಧಿಕ ದೇಹ ತೂಕ ಕೂಡ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ದೇಹದ ತೂಕದ ಮೇಲೆ ಆಗಾಗ ಮಗನ ಹರಿಸಿ. ಆ ಮೂಲಕ ಬೊಜ್ಜು ಸಮಸ್ಯೆ ಮೇಲೆ ಗಮನ ಹರಿಸಿ ಬೊಜ್ಜು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ..ಅಧಿಕ ಬೊಜ್ಜು ಮತ್ತು ಅಧಿಕ ದೇಹದ ತೂಕ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆ ದಾರಿ ಮಾಡಿಕೊಡಬಹುದು.

ಮದ್ಯಪಾನ ಮತ್ತು ಧೂಮಪಾನ ದೂರವಿರಿ: ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಗಂಭೀರ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಧೂಮಪಾನ ಮತ್ತು ಮದ್ಯಪಾನದಿಂದಾಗಿ ಹೃದಯದ ಮೇಲೆ ಒತ್ತಡ ಹೇರುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡುತ್ತದೆ. ಮಿತಿ ಮೀರಿದ ಧೂಮಪಾನ ಕ್ಯಾನ್ಸರ್ ಗೆ ಕಾರಣವಾದರೆ, ಅತ್ಯಧಿಕ ಮದ್ಯಪಾನ ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಲ್ಲದು. ಮದ್ಯಪಾನ ಮತ್ತು ಧೂಮಪಾನ ರಕ್ತದ ಒತ್ತಡ ಹೆಚ್ಚಾಗುವಂತೆ ಮಾಡಿ ಹೃದಯದ ಬಡಿತ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ.

ಒತ್ತಡದ ನಿಯಂತ್ರಿಸಿಕೊಳ್ಳಿ: ಆರೋಗ್ಯಕರ ಜೀವನ ಹಾಗೂ ಆರೋಗ್ಯಕರ ಹೃದಯದ ಮೇಲೆ ಒತ್ತಡ ಕೂಡ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಒತ್ತಡ ಹೆಚ್ಚಾದರೆ ತಲೆನೋವು ಸೇರಿದಂತೆ ದೇಹದ ಇತರೆ ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕ್ರಮೇಣ ಇದು ನಿಮ್ಮಲ್ಲಿ ಆತಂಕ ಮತ್ತು ಖಿನ್ನತೆಗೆ ದಾರಿ ಮಾಡುತ್ತದೆ. ನಿಮ್ಮ ದೈಹಿಕ ಸಾಮರ್ಥ್ಯವನ್ನು ಕುಂದಿಸುತ್ತದೆ. ಹೀಗಾಗಿ ಒತ್ತಡದ ಜೀವನದಿಂದ ಸಾಧ್ಯವಾದಷ್ಟು ದೂರವಿರಿ. ಇಲ್ಲವೇ ಒತ್ತಡ ಮುಕ್ತರಾಗಲು ನಿಮಗಿಷ್ಟವಾದ ಕೆಲಸ ಅಂದರೆ ಸಂಗೀತ ಕೇಳುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಪುಸ್ತಕ ಓದುವುದು, ಯೋಗ ಅಥವಾ ಧ್ಯಾನ ಇತ್ಯಾದಿಗಳನ್ನು ಮಾಡಿ..ಇದರಿಂದ ನಿಮ್ಮ ಒತ್ತಡ ನಿವಾರಣೆಯಾಗುತ್ತದೆ.

Comments are closed.