ರಾಷ್ಟ್ರೀಯ

ವಿಶ್ವ ಹುಲಿ ದಿನ ಹಿನ್ನೆಲೆಯಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ದೇಶದ ಹುಲಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳ

Pinterest LinkedIn Tumblr

ನವದೆಹಲಿ: ಇಂದು ವಿಶ್ವ ಹುಲಿ ದಿನ, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಿಲ ಭಾರತ ಹುಲಿ ಅಂದಾಜು ವರದಿ 2018ನ್ನು ಬಿಡುಗಡೆಗೊಳಿಸಿದ್ದಾರೆ.

ಹುಲಿಗಳಿಗೆ ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಆವಾಸಸ್ಥಾನವಾಗಿ ಭಾರತ ದೇಶ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,400 ಇದ್ದದ್ದು 2019 ರಲ್ಲಿ 2,977 ಕ್ಕೆ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

“ಸುಮಾರು 3,000 ಹುಲಿಗಳನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಹುಲಿ ಆವಾಸಸ್ಥಾನಗಳಲ್ಲಿ ಒಂದಾಗಿದೆ” ಎಂದು ಮೋದಿ ದೇಶದ ಹುಲಿ ಸಂರಕ್ಷಣಾ ಕಾರ್ಯದಲ್ಲಿ ಭಾಗಿಗಳಾದ ಎಲ್ಲ ಪಾಲುದಾರರನ್ನು ಶ್ಲಾಘಿಸಿದ್ದಾರೆ.

“ಒಂಬತ್ತು ವರ್ಷಗಳ ಹಿಂದೆ, ಸೇಂಟ್ ಪೀಟರ್ಸ್ಬರ್ಗ್ (ರಷ್ಯಾ) ದಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು 2022ಕ್ಕೆ ನಿಗದಿಪಡಿಸಲಾಗಿತ್ತು. . ಭಾರತದಲ್ಲಿ ನಾವು ಈ ಗುರಿಯನ್ನು ನಾಲ್ಕು ವರ್ಷಗಳ ಮುಂಚಿತವಾಗಿ ಪೂರ್ಣಗೊಳಿಸಿದ್ದೇವೆ. ಇದು ಸಂಕಲ್ಪ ಸಿದ್ದಿಗೆ ಉತ್ತಮ ಉದಾಹರಣೆ.” ಅವರು ಹೇಳಿದ್ದಾರೆ.

ಹುಲಿ ಸಂರಕ್ಷಣಾ ಪ್ರಯತ್ನಗಳನ್ನು ವಿಸ್ತರಿಸುವ ಮತ್ತು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಲು ಅವರು ಎರಡು ಬಾಲಿವುಡ್ ಚಲನಚಿತ್ರಗಳ ಉದಾಹರಣೆ ನೀಡಿದ್ದಾರೆ. “ಏಕ್ ಥಾ ಟೈಗರ್” ಯಿಂದ ಪ್ರಾರಂಭವಾಗಿ “ಟೈಗರ್ ಜಿಂದಾ ಹೈ”ವರೆಗೆ ತಲುಪಿದ ಹುಲಿಗಳನ್ನು ರಕ್ಷಿಸುವ ಕಥೆ ಅಲ್ಲಿಗೆ ಕೊನೆಗೊಳ್ಳಬಾರದು ಎಂದು ಅವರು ಹೇಳಿದರು, ಹುಲಿಗಳ ಸಂರಕ್ಷಣೆಯತ್ತ ಪ್ರಯತ್ನಗಳನ್ನು ವಿಸ್ತರಿಸಬೇಕು ಮತ್ತು ವೇಗಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣಾ ಚರ್ಚೆ ಎರಡೂ ಪ್ರತ್ಯೇಕವಾಗಿದೆ ಎಂದು ಹೇಳಲಾಗುತ್ತದೆ. , ಆದರೆ ಇವೆರಡರ ನಡುವೆ ಆರೋಗ್ಯಕರ ಸಮತೋಲನವನ್ನು ಸಾಧಿಸಲು ಸಾಧ್ಯವಿದೆ.ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಗಮನ ಹರಿಸಲಾಗಿದೆ, ಅರಣ್ಯ ವ್ಯಾಪ್ತಿ ಮತ್ತು ಸಂರಕ್ಷಿತ ಪ್ರದೇಶಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ ಎಂದು ಅವರು ಹೇಳಿದರು.

“2014 ರಲ್ಲಿ, ಸಂರಕ್ಷಿತ ಪ್ರದೇಶಗಳ ಸಂಖ್ಯೆ 692, 2019 ರಲ್ಲಿ ಈ ಸಂಖ್ಯೆ 860 ಕ್ಕಿಂತ ಹೆಚ್ಚಾಗಿದೆ. ಅದೇ ರೀತಿ, 2014 ರಲ್ಲಿ ಸಮುದಾಯ ಮೀಸಲು ಸಂಖ್ಯೆ 43 ಮತ್ತು 2019 ರಲ್ಲಿ 100 ಕ್ಕಿಂತ ಹೆಚ್ಚಾಗಿದೆ” ಎಂದು ಅವರು ಹೇಳಿದರು.

ಭಾರತ ತನ್ನ ನಾಗರಿಕರಿಗಾಗಿ ಹೆಚ್ಚಿನ ಮನೆಗಳನ್ನು ನಿರ್ಮಿಸುತ್ತದೆ ಮತ್ತು ಅದೇ ಸಮಯದಲ್ಲಿ ಪ್ರಾಣಿಗಳಿಗೆ ಗುಣಮಟ್ಟದ ಆವಾಸಸ್ಥಾನಗಳನ್ನು ಸಹ ನಿರ್ಮಿಸುತ್ತದೆ ಎಂದು ಅವರು ಹೇಳಿದರು. “ಏಕ್ ಥಾ ಟೈಗರ್‌ನಿಂದ ಪ್ರಾರಂಭವಾಗಿ ಟೈಗರ್ ಜಿಂದಾ ಹೈ ತಲುಪಿದ ಕಥೆ ಅಲ್ಲಿಗೇ ನಿಲ್ಲಬಾರದು ಎಂಬುದಾಗಿ ಈ ಕಾರ್ಯ ಮಾಡುವ ಜನರಲ್ಲಿ ನಾನು ವಿನಂತಿಸುತ್ತೇನೆ.” ಪ್ರಧಾನಿ ಹೇಳಿದ್ದಾರೆ.

Comments are closed.