ಆರೋಗ್ಯ

ಮಂಗಳ ಸೂತ್ರದ ಬಟ್ಟಲುಗಳು ಗೋಲಾಕಾರದಲ್ಲಿರಬೇಕು ಯಾಕೆ?

Pinterest LinkedIn Tumblr

ಪ್ರತಿಯೊಬ್ಬ ಮಹಿಳೆ ಕೂಡ ಮದುವೆ ಆಗುತ್ತಾರೆ ಅವರಿಗೆ ಯಾವುದೇ ಮಹಿಳೆಗೆ ಮದುವೆ ಆಗಿದಿಯಾ ಇಲ್ಲವೇ ಎಂದು ನಾವು ಗುರುತು ಹಿಡಿಯಲು ಅವರ ಕತ್ತಿನಲ್ಲಿ ಮಂಗಲ್ಯದ ಸರ ಹಾಗೂ ಕಾಲಿನಲ್ಲಿ ಕಾಲು ಉಂಗುರವನ್ನು ನೋಡುತ್ತೇವೆ ಅಲ್ಲವೇ ಈ ಮಂಗಳ ಸೂತ್ರ ಹಾಗೂ ಕಾಲು ಉಂಗುರ ಎಂಬುದು ಮಹಿಳೆಗೆ ಮದುವೆ ಸಂದರ್ಭದಲ್ಲಿ ಧರಿಸುವಂತಹದು. ಈ ಮಂಗಳ ಸೂತ್ರ ಎಂಬುದು ಕೇವಲ ಮಹಿಳೆಯ ರಕ್ಷಣೆಗೆ ಮಾತ್ರ ಇರುವಂತಹದು ಎಂದು ತಿಳಿದಿದ್ದರೆ ಆದರೆ ಮೊದಲು ಈ ಮಂಗಳ ಸೂತ್ರದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳಬೇಕು.

ಮೊದಲೆನಾದಗಿ ಮಂಗಳಸೂತ್ರ ಎಷ್ಟು ಉದ್ದವಿರಬೇಕು ಎಂಬುದನ್ನು ನೋಡುವುದಾದರೆ ಮಂಗಳಸೂತ್ರವು ಸ್ತ್ರೀಯರ ಎದೆಯ ಮಧ್ಯದ ಭಾಗದವರೆಗೆ ಬರುವಷ್ಟು ಉದ್ದವಿರಬೇಕು. ಮಂಗಳಸೂತ್ರವು ಎದೆಯ ಮದ್ಯ ಭಾಗದವರೆಗೆ ಇದ್ದರೆ ಎದೆಯ ಮದ್ಯ ಭಾಗದಿಂದ ನಿರ್ಮಾ ಣವಾಗುವ ಕ್ರಿಯಾಶಕ್ತಿಯು ಹೆಚ್ಚಿ ಮಹಿಳೆಯಲ್ಲಿ ಇರುವ ರಜೋಗುಣೀ ಕಾರ್ಯವನ್ನು ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ ಕರೆದು ಕೊಂಡು ಹೋಗುತ್ತದೆ, ಹಾಗೂ ಸ್ತ್ರೀಯರನ್ನು ಸತತವಾಗಿ ವರ್ತಮಾನ ಸ್ಥಿತಿಯಲ್ಲಿಡುತ್ತದೆ.

ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು ಎಂದು ನೋಡುವುದಾದರೆ ಮಂಗಳಸೂತ್ರದ ಬಟ್ಟಲುಗಳು ಯಾವಾಗಲೂ ಗೋಲಾಕಾರ ವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ರೀತಿಯ ವಿನ್ಯಾಸಗಳು ಇರಬಾರದು. ಮಂಗಳ ಸೂತ್ರದ ಗೋಲಾಕಾರದ ಬಟ್ಟಲು ಗಳ ಮಹತ್ವವನ್ನು ನೋಡೋಣ ಬನ್ನಿ. ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವನದ ಅವಶ್ಯಕತೆಗೆ ಅನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇದಕ್ಕೆ ಹೆಚ್ಚಿರುತ್ತದೆ.

ಗೋಲಾಕಾರವು ಜ್ಞಾನಶಕ್ತಿಯ ಪ್ರತೀಕವಾಗಿದ್ದು ಜ್ಞಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವ ಗುಣಕ್ಕೆ ಸಂಬಂಧಿಸಿದಾಗಿದೆ. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀಯ ಲಹರಿಗಳನ್ನು ಪ್ರತಿನಿಧಿಸುತ್ತದೆ.

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸುವುದರಿಂದ ಏನೆಲ್ಲ ಲಾಭಗಳು ಆಗುತ್ತವೆ ಚಿನ್ನವು ಬ್ರಹ್ಮಾಂಡದಲ್ಲಿನ ಎಲ್ಲ ರೀತಿಯ ತೊಂದರೆ ದಾಯಕ ಸ್ಪಂದನಗಳನ್ನು ತನ್ನಲ್ಲಿ ಜಾಗೃತವಾಗಿರುವ ತೇಜ ಶಕ್ತಿಯಿಂದ ನಾಶಗೊಳಿಸುತ್ತದೆ.

ಸ್ತ್ರೀಯರ ನಿರ್ಮಿತಿಯ ಶಕ್ತಿಗೆ ಸಂಬಂಧಿಸಿದ ಮಂಗಳಸೂತ್ರದಲ್ಲಿನ ರಚನೆ, ಒಂದು ಬಟ್ಟಲು, ಅದರ ಮೇಲಿನ ಎರಡು ಮಣಿ ಮತ್ತು ಅವುಗಳನ್ನು ಜೋಡಿಸುವ ನಾಲ್ಕು ಎಸಳುಗಳ ಹೂವು ಒಟ್ಟಿಗೆ ಸೇರಿ ತ್ರಿಕೋನಾಕಾರ ನಿರ್ಮಾಣವಾಗುತ್ತದೆ. ಈ ತ್ರಿಕೋನಾಕಾರವು ಸ್ತ್ರೀಯರ ನಿರ್ಮಿತಿ ಶಕ್ತಿಗೆ ಸಂಬಂಧಿಸಿರುವುದರಿಂದ ತನ್ನ ನಿರ್ಮಿತಿಯ ಕಾರ್ಯವನ್ನು ಯಾವಾಗಲೂ ಜಾಗೃತ ಸ್ಥಿತಿಯಲ್ಲಿಡುತ್ತದೆ.

ಮಂಗಳಸೂತ್ರದ ಗೋಲಮಂಡಲದ ಮಧ್ಯದಲ್ಲಿ ತಯಾರಾಗುವ ಲಂಬಗೋಲಾಕಾರವು ಶ್ರೀವಿಷ್ಣುವಿನ ಅಪ್ರಕಟ ಕ್ರಿಯಾಶಕ್ತಿಗೆ ಸಂಬಂಧಿಸಿರುವುದರಿಂದ ಸುಷುಮ್ನಾನಾಡಿಯನ್ನು ಜಾಗೃತ ಗೊಳಿಸುತ್ತದೆ. ಮಂಗಳಸೂತ್ರವನ್ನು ಪತಿಯ ಅನುಮತಿಯಿಂದ ಮತ್ತು ಅವನ ಕೈಯಿಂದ ಸ್ತ್ರೀಯರ ಕೊರಳಿನಲ್ಲಿ ಕಟ್ಟಿರುವುದರಿಂದ ಮಂಗಳಸೂತ್ರದಲ್ಲಿ ಪತಿಯ ಇಚ್ಛೆಗೆ ಸಂಬಂಧಿಸಿದ ಲಹರಿಗಳು ಸಂಗ್ರಹವಾಗಿರುತ್ತವೆ. ಹಾಗಾಗಿ ಪತಿಯ ನಿಧನದ ನಂತರವು ಸ್ತ್ರೀಯರು ಮಂಗಳಸೂತ್ರವನ್ನು ಧರಿಸಿದರೆ ಪತಿಯ ಲಿಂಗ ದೇಹವು ಭುವರ್ಲೋಕದಲ್ಲಿ ಸಿಲುಕುವ ಸಾಧ್ಯತೆಯಿರುತ್ತದೆ.

ಮಂಗಳಸೂತ್ರವನ್ನು ನೋಡಿದಾಗ ಸ್ತ್ರೀಯರಿಗೆ ಪತಿಯ ನೆನಪಾಗುವುದರಿಂದ ಪತಿಯು ಮತ್ತೆ ಭೂಲೋಕಕ್ಕೆ ಬರಬೇಕಾಗುತ್ತದೆ. ಇದರಿಂದ ಪತಿಯ ಲಿಂಗದೇಹಕ್ಕೆ ಮುಕ್ತಿ ಸಿಗಲು ಅಡಚಣೆಗಳು ನಿರ್ಮಾಣ ವಾಗುತ್ತವೆ. ಈ ಮಂಗಳ ಸೂತ್ರವು ಕೇವಲ ಮಹಿಳೆಗೆ ಮದುವೆ ಆಗಿದೆ ಎಂದು ಗುರುತು ಹಿಡಿಯಲು ಕಟ್ಟುವ ಸೂತ್ರ ಅಲ್ಲ ಈ ಮಂಗಳ ಸೂತ್ರದಲ್ಲಿ ತನ್ನ ಪತಿಯೇ ನೆಲೆಸಿರುತ್ತಾನೆ ಇದಕ್ಕೆ ಮುಕ್ಕೋಟ್ಟಿ ದೇವರುಗಳು ಕೂಡ ಆಶೀರ್ವಾದ ಮಾಡಿರುತ್ತಾರೆ ಅದಕ್ಕಾಗಿ ನಾವು ಯಾವಾಗಲೂ ಕೂಡ ಈ ಮಂಗಳ ಸೂತ್ರಕ್ಕೆ ಭಕ್ತಿಯಿಂದ ಪೂಜಿಸಿ ನಮಸ್ಕರಿಸಿದರೆ ಪತಿ ದೇವರಿಗೆ ನಮಸ್ಕರಿಸಿದಂತೆ ಆಗ ಅವರಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಮತ್ತೊಂದು ವಿಷಯ ಏನೆಂದರೆ ಮಂಗಳ ಸೂತ್ರ ಎಂಬುದು ಫ್ಯಾಶನ್ ಗಾಗಿ ಕಟ್ಟಿರುವುದಲ್ಲ ಇದನ್ನು ಎಲ್ಲರಿಗೂ ಕಾಣಿಸುವ ಹಾಗೆ ಹೊರಗೆ ಬಿಟ್ಟುಕೊಂಡು ತಿರುಗಬಾರದು ಯಾವಾಗಲೂ ಒಳಗೆ ಯಾರಿಗೂ ಕಾಣದ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ಮಂಗಳ ಸೂತ್ರ ಯಾವಾಗಲೂ ಮಂಗಳಕರವಾಗಿರಲಿ ಅದನ್ನು ಭಕ್ತಿಯಿಂದ ಪೂಜಿಸಿ.

Comments are closed.