ಆರೋಗ್ಯ

ಕೀಟ ಅಥವಾ ಹುಳುಗಳು ಕಿವಿಯೋಳಗೆ ಹೋದರೆ ಅವುಗಳನ್ನು ಹೊರಕ್ಕೆ ತೆಗೆಯುವ ಸುಲಭ ವಿಧಾನ

Pinterest LinkedIn Tumblr

ಮಾನವನ ಸೂಕ್ಮ ಅಂಗಗಳಲ್ಲಿ ಕಿವಿಯು ಕೂಡ ಒಂದು ಇದಕ್ಕೆ ಏನಾದರೂ ತೊಂದರೆ ಆದರೆ ಸಾಕು ಆ ತೊಂದರೆಯಿಂದ ಹೊರ ಬರುವುದು ತುಂಬಾ ಕಷ್ಟ ಸಾಮಾನ್ಯವಾಗಿ ಕಿವಿಗೆ ತೊಂದರೆ ಆಗುವ ಸಮಸ್ಯೆ ಅಂದರೆ ಕಿವಿಯ ತಮಟೆಗೆ ತೊಂದರೆ ಆಗುವುದು ಹಾಗೂ ಕಿವಿಯ ಒಳಗೆ ಕೀಟನುಗಳು ಹೋಗುವುದು. ಅದರಲ್ಲೂ ಹೆಚ್ಚಿನ ಸಮಸ್ಯೆ ಎಂದರೆ ಕಿವಿಯ ಒಳಗೆ ಹುಳಗಳು ಕೀಟನುಗಳು ಹೋಗುವುದು ಅದರಲ್ಲೂ ಹೆಚ್ಚಾಗಿ ಚಿಕ್ಕ ಮಕ್ಕಳು ಆಟ ಆಡುವಾಗ ಸಾಮಾನ್ಯವಾಗಿ ಚಿಕ್ಕ ಚಿಕ್ಕ ಕೀಟನುಗಳು ಕಿವಿಯ ಒಳಗೆ ಹೋಗಿ ಬಿಡುತ್ತವೆ ಆದರೆ ಕಿವಿಯ ಒಳಗೆ ಹೋಗುವುದೇ ಗೊತ್ತಾಗುವುದಿಲ್ಲ ಆದರೆ ಕಿವಿಯ ಒಳಗೆ ಹೋಗಿ ಆ ಕೀಟಗಳು ಕಿವಿಯ ಒಳಗೆ ಗುರು ಗುರು ಅನ್ನುವಗಲೇ ಕಿವಿಯ ಒಳಗೆ ಏನೋ ಇದೆ ಎಂದು ಗೊತ್ತಾಗುವುದು ಜೊತೆಗೆ ಅದು ಕಿವಿಯ ಒಳಗೆ ಕೊಡುವ ತೊಂದರೆಯನ್ನು ತಡೆಯಲು ಆಗುವುದಿಲ್ಲ ಹಾಗೆಯೇ ಈ ಕೀಟನುಗಳು ಕಿವಿಯಿಂದ ಹೊರಗೆ ಬರದೆ ಒಳಗೆ ಹುಳಿದುಕೊಂಡು ಅದು ಅಲ್ಲೇ ಸತ್ತು ಬಿಟ್ಟರೆ ಕಿವಿ ಕೇಳಿಸದ ಹಾಗೆ ಆಗಿ ಬಿಡುತ್ತದೆ.

ಹಾಗಾದರೆ ಕಿವಿಯ ಒಳಗೆ ಕೀಟನುಗಳು ಹೋದರೆ ಅದನ್ನು ಸುಲಭವಾಗಿ ಹೊರ ತೆಗೆಯುವ ಸುಲಭ ಉಪಾಯಗಳು ಇವೆ ಗೊತ್ತೇ ಅವುಗಳನ್ನು ತಿಳಿಯೋಣ ಬನ್ನಿ. ಕಿವಿಯ ಒಳಗೆ ಏನಾದರೂ ಕೀಟ ಹುಳುಗಳು ಹೋದಾಗ ಸಾಮಾನ್ಯವಾಗಿ ಮೊದಲು ನಾವು ಮಾಡುವ ಕೆಲಸ ಎಂದರೆ ಕಿವಿಗಳಿಗೆ ಕಡ್ಡಿ ಅಥವಾ ಪಿನ್ನುಗಳನ್ನು ಹಾಕಿ ತಿವಿಯುತ್ತೇವೆ ಆದರೆ ಖಂಡಿತವಾಗಿ ಹೀಗೆ ಮಾಡಬಾರದು ಏಕೆಂದರೆ ಹಾಗೆ ಮಾಡಿದಾಗ ಕಿವಿಯೊಳಗೆ ಒತ್ತಡಕ್ಕೆ ಸಿಲುಕಿಕೊಂಡ ಕೀಟವು ಕೈಕಾಲುಗಳನ್ನು ಆಡಿಸಲು ಶುರು ಮಾಡುತ್ತದೆ ಇದರಿಂದ ತುಂಬಾ ನೋವು ಆಗುತ್ತದೆ. ಹಾಗೂ ಹೀಗೆ ಮಾಡುವಾಗ ಕಿವಿಯೊಳಗೆ ಗಾಯ ಆದರೆ ಇನ್ನೂ ಹೆಚ್ಚು ನೋವು ಅನುಭವಿಸ ಬೇಕಾಗುತ್ತದೆ

ಹಾಗಾಗಿ ತುಂಬಾ ನಿಧಾನವಾಗಿ ಉಪಾಯದಿಂದ ಹುಳುಗಳನ್ನು ಹೊರಗೆ ತೆಗೆಯಬೇಕು ಇಲ್ಲ ಅದೇ ಹೊರಗೆ ಬರುವ ಹಾಗೆ ಮಾಡಬೇಕು ಹಾಗಾದರೆ ಏನು ಮಾಡಬೇಕು ಎಂದು ತಿಳಿಯೋಣ. ಮೊದಲು ಕಿವಿಯ ಒಳಗೆ ಕೀಟನು ಹೋದರೆ ಕಿರುಚಾಟ ಮಾಡಬೇಡಿ ಶಾಂತವಾಗಿರಬೇಕು ಇಲ್ಲವಾದರೆ ಹುಳು ಕಿವಿಯ ಒಳಗೆ ಒದ್ದಾಡಿ ಕಿವಿಯನ್ನು ಹಾನಿ ಮಾಡುತ್ತದೆ. ಒಂದೆರಡು ಹನಿ ಬಿಸಿನೀರನ್ನು ಕಿವಿಯ ಒಳಗೆ ಹಾಕಿ ನಂತರ ಹುಳು ಕೆಳಗೆ ಬೀಳುವ ಹಾಗೆ ಕಿವಿಯನ್ನು ಬಗ್ಗಿಸಿ ಆಗ ನೀರಿನ ಜೊತೆಗೆ ಹುಳ ಕೂಡ ಹೊರ ಬರುತ್ತದೆ. ಕಿವಿಯೊಳಗೆ ಕೀಟ ಹೋಗಿರುವುದು ಗೊತ್ತಾದಾಗ ಮನೆಯಲ್ಲಿ ಏನಾದರೂ ಆಲ್ಕೋಹಾಲ್ ಇದ್ದರೆ ಅದರ ಮಿಶ್ರಿತ ಎಣ್ಣೆಯನ್ನು ಅತ್ತಿಯಲ್ಲಿ ಅದ್ದಿ ಎರಡು ಹನಿ ಎಣ್ಣೆಯನ್ನು ಕಿವಿಯಲ್ಲಿ ಬಿಡಬೇಕು ಹೀಗೆ ಮಾಡುವುದರಿಂದ ಕೀಟಗಳಿಗೆ ಉಸಿರಾಡಲು ತೊಂದರೆಯಾಗಿ ಕಿವಿಯಿಂದ ಹೊರ ಬರುತ್ತವೆ, ಅಕಸ್ಮಾತ್ ಆಲ್ಕೋಹಾಲ್ ಮನೆಯಲ್ಲಿ ಇಲ್ಲವಾದರೆ ಆಲಿವ್ ಎಣ್ಣೆಯನ್ನು ಬಳಸಬಹುದು.

ಕಿವಿಯೊಳಗೆ ಕೀಟನುಗಳು ಹೋದಾಗ ಯಾವ ಕಿವಿಗೆ ಹೋಗಿದೆ ಎಂದು ಗೊತ್ತಾಗುತ್ತದೆ ಅಲ್ಲವೇ ಆಗ ಯಾವ ಕಿವಿಗೆ ಹೋಗಿದೆ ಆ ಕಿವಿಯನ್ನು ನೆಲದ ಕಡೆಗೆ ಮಾಡಿ ಮಲಗಬೇಕು ಆಗ ಹುಳುವು ಕಿವಿಯಿಂದ ಸುಲಭವಾಗಿ ಹೊರ ಬರಲು ಅನುಕೂಲ ಆಗುತ್ತದೆ. ಹೀಗೆ ಮಾಡಿದರೆ ಸಾಕು ಯಾವುದೇ ರೀತಿಯ ಕೀಟಗಳು ಇದ್ದರು ಕೂಡ ಸುಲಭವಾಗಿ ಹೊರ ಬರುತ್ತದೆ ಕಿವಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ.

Comments are closed.