ಹೌದು ಈ ಪೇರಳೆ ಎಲೆ ಮತ್ತು ಪೇರಳೆ ಹಣ್ಣು ಸಾಕಷ್ಟು ಕಾಯಿಲೆಗಳನ್ನು ಹೋಗಲಾಡಿಸುವ ಮನೆಮದ್ದುಗಳು. ಆಯುರ್ವೇದದಲ್ಲಿ ಹೇಳುವಂತೆ ಪೇರಳೆ ಹಣ್ಣು ಮತ್ತು ಎಳೆಗಳು ಉತ್ತಮ ಮನೆಮದ್ದಾಗಿ ಕೆಲಸ ಮಾಡುತ್ತವೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ.
ಇಲ್ಲಿದೆ ನೋಡಿ ಪೇರಳೆ ಎಲೆಯ ಉಪಯೋಗ:
ಪೇರಳೆ ಎಲೆಯನ್ನು ಜಜ್ಜಿ ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ತಣ್ಣಗಾದ ನಂತರ ದಿನಕ್ಕೆ ಮೂರು ಬಾರಿ ಕುಡಿಯ ಬೇಕು . ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಜೀರ್ಣದಿಂದ ಉಂಟಾಗುವ ವಾಂತಿ, ತಲೆಸುತ್ತು, ಹೊಟ್ಟೆನೋವು ನಿವಾರಣೆಯಾಗುವುದು. ಈ ನೀರು ಅಸ್ತಮಾ ರೋಗವನ್ನು ಕಡಿಮೆಮಾಡುತ್ತದೆ.
ಹಲ್ಲುನೋವು, ಗಂಟಲು ನೋವು ಮತ್ತು ಒಸಡು ನೋವಿದ್ದರೆ ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ನಂತರ ಸೋಸಿದ ನೀರಿನಿಂದ ಬೆಳಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ. ಪೇರಳೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್ ಅನ್ನು ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.